ಚಿಕ್ಕಮಗಳೂರು: ಮೈತುಂಬಾ ಬಾಸುಂಡೆ, ತಲೆಗೆ ಬ್ಯಾಡೆಂಜ್ ಸುತ್ಕೊಂಡು ಮಲಗಿರೋ ಯುವಕನ ಹೆಸರು ಆದರ್ಶ. ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ನಿವಾಸಿ.
ರಮೇಶ್, ರಾಜೇಶ್ ಎಂಬ ಸಹೋದರರು ಬಹಳ ವರ್ಷದಿಂದ ಮಾಡುತ್ತಿದ್ದಾರೆ ಎನ್ನಲಾದ ಮರಗಳ್ಳತನ ವಿಚಾರ, ಅರಣ್ಯ ಇಲಾಖೆಗೆ ಗೊತ್ತಾಗಿತ್ತು. ಇದರಿಂದ ಆದರ್ಶ ಹಾಗೂ ಸಹೋದರರ ನಡುವೆ ಜಗಳಕ್ಕೆ ಕಾರಣವಾಗಿದೆ.
ಆದರ್ಶನನ್ನು ರಸ್ತಯಲ್ಲಿ ಅಡ್ಡಗಟ್ಟಿ ರಮೇಶ್, ರಾಜೇಶ್ ಸೇರಿ ಕೆಲ ಪುಡಾರಿಗಳು ಸೇರಿ ಡೊಣ್ಣೆ, ಮಚ್ಚು, ಬೀರ್ ಬಾಟಲಿಯಿಂದ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆದರ್ಶ ಕುಟುಂಬದವರು ಆರೋಪಿಸುತ್ತಿದ್ದಾರೆ.
ರಸ್ತೆಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಆದರ್ಶನನ್ನು ಸ್ಥಳೀಯರೊಬ್ಬರು ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಲಾಗಿದೆ.
ಸದ್ಯ ಸಾವಿನ ದವಡೆಯಿಂದ ಪಾರಾಗಿರುವ ಆದರ್ಶ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧನ ಮಾಡಿ, ಕ್ರಮ ಜರುಗಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ.