ETV Bharat / state

ಎಲ್ಲಾ ಬ್ಯಾಂಕುಗಳು ಗ್ರಾಹಕರ EMIಗೆ ವಿನಾಯಿತಿ ನೀಡಬೇಕು: ಡಿಕೆಶಿ ಮನವಿ

ಕೊರೊನಾ ವೈರಸ್ ಭಯದಿಂದ, ಸಾಮಾನ್ಯ ಜನರಿಗೆ ಆರ್ಥಿಕವಾಗಿ ಉಸಿರಾಡಲೂ ಕೂಡ ಆಗುತ್ತಿಲ್ಲ. ರಾಜ್ಯದ ಜನ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಎಲ್ಲಾ ಬ್ಯಾಂಕುಗಳು ಜನರ EMIಗೆ ವಿನಾಯಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಮನವಿ ಮಾಡಿದ್ದಾರೆ.

ಡಿಕೆಶಿ
ಡಿಕೆಶಿ
author img

By

Published : Mar 19, 2020, 3:12 PM IST

Updated : Mar 19, 2020, 3:20 PM IST

ಚಿಕ್ಕಮಗಳೂರು: ರಾಜ್ಯಾದ್ಯಂತ ಕೊರೊನಾದಿಂದ ಜನರು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿರುವ ಹಿನ್ನಲೆ, ರಾಜ್ಯದ ಜನರ ಸಮಸ್ಯೆ ಬಗೆಹರಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಭಯದಿಂದ, ಸಾಮಾನ್ಯ ಜನರಿಗೆ ಆರ್ಥಿಕವಾಗಿ ಉಸಿರಾಡಲೂ ಸಹ ಆಗುತ್ತಿಲ್ಲ. ರಾಜ್ಯದ ಜನ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ವ್ಯಾಪಾರಸ್ಥರು, ಸಣ್ಣ ಉದ್ಯಮಿಗಳು, ತೀವ್ರ ಕಷ್ಟದಲ್ಲಿದ್ದಾರೆ. ಬ್ಯಾಂಕುಗಳಿಂದ ಜನರು ಕಿರುಕುಳ ಅನುಭವಿಸುತ್ತಿದ್ದಾರೆ. ಹಾಗಾಗಿ ಎಲ್ಲಾ ಬ್ಯಾಂಕುಗಳು ಜನರ EMIಗೆ ವಿನಾಯಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ಈ ಪವಿತ್ರ ಕೆಲಸವನ್ನ ರಾಜ್ಯ ಸರ್ಕಾರ ತುರ್ತಾಗಿ ಮಾಡಲಿ ಎಂದರು.

ಬ್ಯಾಂಕ್​ಗಳಿಗೆ ಗ್ರಾಹಕರು ಕಟ್ಟಬೇಕಿರುವ ಇಎಂಐಗಳಿಗೆ ವಿನಾಯಿತಿ ನೀಡಬೇಕು: ಡಿ ಕೆ ಶಿವಕುಮಾರ್​

ಜನರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಿ, ರಾಜ್ಯದ ಜನರನ್ನು ಉಳಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

Last Updated : Mar 19, 2020, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.