ETV Bharat / state

ಚಿಕ್ಕಮಗಳೂರಿನಲ್ಲಿ ಸಿನಿಮೀಯ ಘಟನೆ.. 22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು.. - After 22 years the mother got her daughter

ಹಲವು ವರ್ಷಗಳ ಹುಡುಕಾಟದ ಬಳಿಕ ಇದೀಗ ಅಂಜಲಿ ಅವರ ತಾಯಿ ಚೈತ್ರಾರನ್ನು ಮೂಡಿಗೆರೆಯಲ್ಲಿ ಪತ್ತೆ ಮಾಡಲಾಗಿದೆ. ತಾಯಿಯನ್ನು ಕಂಡ ಮಗಳು ಅಂಜಲಿ ಓಡಿ ಹೋಗಿ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ್ದಾರೆ. ಈ ಮೂಲಕ 22 ವರ್ಷಗಳಿಂದ ಬೇರೆಯಾಗಿದ್ದ ತಾಯಿ-ಮಗಳು ಮತ್ತೆ ಒಂದಾಗಿದ್ದಾರೆ..

chikkmagalur
ತಾಯಿ- ಮಗಳ ಸಮಾಗಮ
author img

By

Published : Jan 4, 2022, 3:48 PM IST

ಚಿಕ್ಕಮಗಳೂರು : 9 ವರ್ಷದವಳಿದ್ದಾಗ ನಾಪತ್ತೆಯಾಗಿ ಮಗಳು ಬರೋಬ್ಬರಿ 22 ವರ್ಷಗಳ ಬಳಿಕ ಮತ್ತೆ ತಾಯಿ ಮಡಿಲು ಸೇರಿದ ಅಪರೂಪದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ತಮಿಳುನಾಡು ಮೂಲದವರಾದ ಅಂಜಲಿ ಎಂಬುವರು ತಮ್ಮ ತಾಯಿ ಚೈತ್ರಾ ಎಂಬುವರನ್ನು ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 30 ವರ್ಷಗಳ ಹಿಂದೆ ಚೈತ್ರಾ ಅವರು ತಮಿಳುನಾಡಿನಿಂದ ಮೂಡಿಗೆರೆಗೆ ಕೆಲಸ ಅರಸಿ ಬಂದಿದ್ದರು. ಇಲ್ಲಿನ ಕಾಫಿ ಎಸ್ಟೇಟೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.

9 ವರ್ಷದವಳಿದ್ದ ಅಂಜಲಿ ಮನೆಯಿಂದ ಹೊರ ಹೋದಾಗ ದಾರಿ ತಪ್ಪಿಸಿಕೊಂಡು ಅಲೆದಾಡುತ್ತಿದ್ದಾಗ, ಕೇರಳದ ಮಾವುತರೊಬ್ಬರು ಚಿಕ್ಕಮಗು ಅಂಜಲಿಯನ್ನು ಕಂಡು ವಿಚಾರಿಸಿದ್ದಾರೆ.

ಚಿಕ್ಕಮಗುವಾಗಿದ್ದ ಅಂಜಲಿ ತನ್ನ ಮನೆಯ ದಾರಿ ತಪ್ಪಿಸಿಕೊಂಡಿದ್ದಾಗಿ ಹೇಳಿದಾಗ, ಮಾವುತ ಅವಳನ್ನು ಎಲ್ಲಿ ಬಿಡಬೇಕು ಎಂದು ತೋಚದೇ ಅವರ ಜೊತೆಗೇ ಬಾಲಕಿಯನ್ನ ಕರೆದುಕೊಂಡು ಹೋಗಿದ್ದಾರೆ.

ಕೇರಳದ ಮಾವುತನ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದ ಅಂಜಲಿಗೆ ಬಳಿಕ ನೆಲ್ಲಮಣಿಯ ಸಾಜಿ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಕಳೆದ 3 ವರ್ಷದಿಂದ ಅಂಜಲಿ ಅವರು ತಮ್ಮ ತಾಯಿಗಾಗಿ ಹುಡುಕಾಟ ನಡೆಸಿದ್ದರು. ಇದನ್ನು ಮಂಗಳೂರಿನ ಸಮಾಜ ಸೇವಕರಾದ ಫಿಶ್‌ಮೋಣು, ಮುಸ್ತಾಫರ್​ ಅವರ ಬಳಿ ಹೇಳಿಕೊಂಡಿದ್ದಳು.

ಹಲವು ವರ್ಷಗಳ ಹುಡುಕಾಟದ ಬಳಿಕ ಇದೀಗ ಅಂಜಲಿ ಅವರ ತಾಯಿ ಚೈತ್ರಾರನ್ನು ಮೂಡಿಗೆರೆಯಲ್ಲಿ ಪತ್ತೆ ಮಾಡಲಾಗಿದೆ. ತಾಯಿಯನ್ನು ಕಂಡ ಮಗಳು ಅಂಜಲಿ ಓಡಿ ಹೋಗಿ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದ್ದಾರೆ. ಈ ಮೂಲಕ 22 ವರ್ಷಗಳಿಂದ ಬೇರೆಯಾಗಿದ್ದ ತಾಯಿ-ಮಗಳು ಸಿನಿಮೀಯ ರೀತಿಯಲ್ಲಿ ಮತ್ತೆ ಒಂದಾಗಿದ್ದಾರೆ.

ಇದನ್ನೂ ಓದಿ: ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ 9 ವರ್ಷದ ಹುಲಿ ಕುಸಿದು ಬಿದ್ದು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.