ಚಿಕ್ಕಮಗಳೂರು: ಇತ್ತೀಚೆಗೆ ನಿಧನರಾದ ಉದ್ಯಮಿ ಸಿದ್ಧಾರ್ಥ ಹೆಗ್ಡೆ ಅವರ ನಿವಾಸಕ್ಕೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಭೇಟಿ ನೀಡಿ, ಸಾಂತ್ವನ ಹೇಳಿದರು.
ಮೂಡಿಗೆರೆ ತಾಲೂಕಿನ ಚೀಕನಹಳ್ಳಿಯಲ್ಲಿರುವ ಚೇತನಹಳ್ಳಿ ಕಾಫಿ ಎಸ್ವೇಟ್ನ ಸಿದ್ದಾರ್ಥ್ ಅವರ ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ ನೀಡಿ, ಸಿದ್ಧಾರ್ಥ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.
![-nirmalananda](https://etvbharatimages.akamaized.net/etvbharat/prod-images/kn-ckm-01-swamijivisit-av-7202347_02082019112024_0208f_1564725024_210.jpg)
ಸಿದ್ದಾರ್ಥ ತಾಯಿ ವಸಂತಿ ಹೆಗ್ಡೆ, ಪತ್ನಿ ಮಾಳವಿಕಾ, ಸಿದ್ಧಾರ್ಥ ಪುತ್ರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.