ETV Bharat / state

ಹುಲಿಗಳಿಗೆ ಭಾರತ ನೆಚ್ಚಿನ ತಾಣ ; ರಾಜ್ಯದ ಮಲೆನಾಡಲ್ಲಿ ಹೆಚ್ಚುತ್ತಿದೆ ಘರ್ಜನೆ - A report on tigers in indian forest

2006ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದ್ದು, ಸ್ವಯಂಸೇವಾ ಸಂಸ್ಥೆಗಳು ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ಜಂಟಿ ಸಹಯೋಗದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಹುಲಿಗಳ ಗಣತಿ ನಡೆಸುತ್ತದೆ..

Tiger Census
ಹುಲಿ ಗಣತಿ
author img

By

Published : Dec 9, 2020, 8:02 PM IST

ಭಾರತದ ರಾಷ್ಟ್ರೀಯ ಪ್ರಾಣಿ ತನ್ನ ಸಂತತಿಯನ್ನು ಗಣನೀಯವಾಗಿ ಏರಿಸಿಕೊಂಡಿದೆ. ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. 526 ಹುಲಿಗಳಿರುವ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, 442 ಹುಲಿಗಳು ಪತ್ತೆಯಾಗುವ ಮೂಲಕ ಉತ್ತರಾಖಂಡ್​​​​ ಮೂರನೇ ಸ್ಥಾನ ಪಡೆದುಕೊಂಡಿದೆ.

ಇತ್ತೀಚಿನ ಹುಲಿ ಗಣತಿ ಪ್ರಕಾರ, ರಾಜ್ಯದಲ್ಲಿ 524 ಹುಲಿಗಳು ಕಂಡು ಬಂದಿದ್ದು, ಮಲೆನಾಡು ವಿಭಾಗದಲ್ಲೇ 371 ಹುಲಿಗಳಿವೆ ಎಂದು ಕಾವೇರಿ ವನ್ಯಜೀವಿ ಅಭಯಾರಣ್ಯ (ಸಿಡಬ್ಲ್ಯೂಎಸ್) ನಡೆಸಿರುವ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ...'ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದ ಭಾರತದ 2018ರ ಹುಲಿಗಣತಿ

ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮ ನೀಡಿದವರು ಮತ್ತು ವಿಜ್ಞಾನಿ ಉಲ್ಲಾಸ್ ಕಾರಂತ್ ಅವರು ಸಿಡಬ್ಲ್ಯೂಎಸ್ ಜೊತೆಗೂಡಿ ನಡೆಸಿದ ಸಮೀಕ್ಷೆಯಲ್ಲಿ ಮಲೆನಾಡು ವಿಭಾಗದಲ್ಲಿ ಈ ಅಂಕಿ-ಅಂಶ ಲಭ್ಯವಾಗಿದೆ. 1986ರಲ್ಲೇ ವೈಜ್ಞಾನಿಕವಾಗಿ ಹುಲಿಗಣತಿ ಕೈಗೊಳ್ಳಲಾಗಿತ್ತು.

ಸೂಕ್ತ ತಂತ್ರಜ್ಞಾನದ ಕೊರತೆಯಿಂದಾಗಿ ಸಮೀಕ್ಷೆ ಕಷ್ಟವಾಗಿತ್ತು. ಅಂದು ನಡೆಸಿದ ಗಣತಿಯಲ್ಲಿ ಕೇವಲ 86 ಹುಲಿಗಳು ಪತ್ತೆಯಾಗಿದ್ದವು. ಈಗ ಹುಲಿಗಳ ಸಂತತಿ 371ಕ್ಕೆ ಏರಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿ 37 ರಿಂದ 42 ಹುಲಿಗಳಿವೆ ಎಂಬ ಮಾಹಿತಿಯಿದೆ.

ಕಳೆದ ವರ್ಷ ಜಾಗತಿಕ ಹುಲಿ ದಿನದ ಸಂದರ್ಭದಲ್ಲಿ 4ನೇ ಹುಲಿಗಣತಿ ಅಂದರೆ 2018ರ ಹುಲಿಗಣತಿ ವರದಿಯನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದರು. ಆ ವರದಿಯ ಪ್ರಕಾರ ಭಾರತದಲ್ಲಿ 2,967 ಹುಲಿಗಳಿವೆ. ಅಂದರೆ ವಿಶ್ವದ ಶೇ.75ರಷ್ಟು ಹುಲಿಗಳು ಭಾರತದ ಕಾಡುಗಳಲ್ಲಿವೆ.

ಈ ಮೂಲಕ ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಗುರುತಿಸಿಕೊಂಡಿದೆ. ಅಲ್ಲದೆ ಭಾರತದಲ್ಲಿ 2018ರಲ್ಲಿ ನಡೆಸಿದ ಹುಲಿಗಣತಿ 'ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ವಿಶ್ವದ ಅತಿದೊಡ್ಡ ಕ್ಯಾಮೆರಾ ಟ್ರ್ಯಾಪಿಂಗ್ ವನ್ಯಜೀವಿ ಸಮೀಕ್ಷೆ ಎಂದು ಸಂಘಟಕರು ಹೇಳಿದ್ದಾರೆ.

ಭಾರತ ಮತ್ತು ಕರ್ನಾಟಕದಲ್ಲಿ ಹುಲಿಗಣತಿ ಕುರಿತ ವರದಿ

ಚಿಕ್ಕಮಗಳೂರಿನಲ್ಲಿ ಹುಲಿ ಸಂತತಿ ಹೆಚ್ಚಾಗಲು ಹಲವು ಕಾರಣಗಳಿವೆ. ಹುಲಿ ಬಗ್ಗೆ ಇರುವ ಕಾಳಜಿ, ರಕ್ಷಣಾ ವ್ಯವಸ್ಥೆ ಮತ್ತು ಮಾನವ ಹಸ್ತಕ್ಷೇಪ ಕಡಿಮೆಯಾಗಿರುವುದೇ ಅದಕ್ಕೆ ಪ್ರಮುಖ ಕಾರಣಗಳು. 2018-19ರಲ್ಲಿ ಭಾರತದಲ್ಲಿ ನಡೆಸಿದ ಹುಲಿ ಸಮೀಕ್ಷೆಯು ಸಂಪನ್ಮೂಲಗಳು ಮತ್ತು ಮಾಹಿತಿಯ ದೃಷ್ಟಿಯಿಂದ ಕೂಡಿತ್ತು.

ಅತ್ಯಾಧುನಿಕ ತಂತ್ರಜ್ಞಾನ, ಕ್ಯಾಮೆರಾ ಟ್ರ್ಯಾಪಿಂಗ್ 141 ವಿವಿಧ ತಾಣಗಳಲ್ಲಿ 26,838 ಸ್ಥಳಗಳಲ್ಲಿ ಸ್ಥಾಪಿಸಲಾಯಿತು. ಈ ಕ್ಯಾಮೆರಾಗಳಲ್ಲಿ ಅಳವಡಿಸಲಾದ ಚಲನೆ ಸಂವೇದಕವು ಹುಲಿಯ ಚಲನವಲನವನ್ನು ಸಂಪೂರ್ಣವಾಗಿ ಸೆರೆಹಿಡಿದಿತ್ತು. ಹೀಗಾಗಿ, 1,21,337 ಚದರ ಕಿ.ಮೀ​​​​​​​ ಸಮೀಕ್ಷೆ ನಡೆಸಿದ ಪರಿಣಾಮ ಸಮಗ್ರ ಮಾಹಿತಿ ದೊರೆಯಿತು.

2006ರ ಗಣತಿಯಲ್ಲಿ ದೇಶದಲ್ಲಿ 1,411 ಹುಲಿಗಳಿದ್ದವು. 2010 ಮತ್ತು 2014ರ ಗಣತಿಯ ಪ್ರಕಾರ ಕ್ರಮವಾಗಿ 1,706 ಮತ್ತು 2,226ಕ್ಕೆ ಏರಿಕೆ ಕಂಡಿವೆ. ಈ ಮೂಲಕ ಹುಲಿಗಳ ಸಂಖ್ಯೆ ಏರಿಕೆ ಮತ್ತು ಸಂರಕ್ಷಣೆಯಲ್ಲಿ ಬಹುದೊಡ್ಡ ಯಶಸ್ಸು ಸಿಕ್ಕಿದೆ.

2006ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ಜಂಟಿ ಸಹಯೋಗದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ ಹುಲಿಗಳ ಗಣತಿ ನಡೆಸುತ್ತದೆ.

ನಗರೀಕರಣ, ಕಾಡುಗಳ ನಾಶ ಮತ್ತು ಮಾನವನ ಹಸ್ತಕ್ಷೇಪದಿಂದ 2012ರಿಂದ 2019ರವರೆಗೂ ಭಾರತದಲ್ಲಿ 750 ಹುಲಿಗಳು ಸತ್ತಿವೆ. 173 ಹುಲಿಗಳು ಮೃತಪಡುವ ಮೂಲಕ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 125 ವ್ಯಾಘ್ರಗಳು, ಕರ್ನಾಟಕದಲ್ಲಿ 111 ಹುಲಿಗಳು ಮೃತಪಟ್ಟಿವೆ ಎಂದು ಆರ್​​ಟಿಐ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.