ETV Bharat / state

ಗನ್​​ ಪರವಾನಗಿ: ಬೇಕಾದ ಅರ್ಹತೆ ಏನು, ಬಂದೂಕಿನ ಬೆಲೆ ಎಷ್ಟು ಗೊತ್ತಾ? - gun license is a status symbol

ಸಾವಿರಾರು ಎಕರೆ ಪ್ರದೇಶದಲ್ಲಿ ಕಾಫಿ, ಏಲಕ್ಕಿ, ಮೆಣಸು, ಶ್ರೀಗಂಧ ಬೆಳೆ ಹೆಚ್ಚಿದೆ. ಕಾಡು ಪ್ರಾಣಿಗಳು ಮತ್ತು ಕಳ್ಳರ ಕಾಟವೂ ಅಧಿಕವಾಗಿದ್ದು, ರೈತರಿಗೆ ತಲೆನೋವಾಗಿದೆ. ಹೀಗಾಗಿ ಅವುಗಳ ನಿಯಂತ್ರಣಕ್ಕಾಗಿ ಅವಶ್ಯಕತೆ ಇರುವವರಿಗೆ ಗನ್​ ಪರವಾನಗಿ ನೀಡಲಾಗುತ್ತಿದೆ.

Gun licenses permission
ಗನ್​​ ಪರವಾನಗಿ
author img

By

Published : Dec 24, 2020, 9:39 PM IST

Updated : Dec 25, 2020, 9:48 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೆಚ್ಚಾಗಿ ಕಾಫಿ, ಮೆಣಸು, ಶ್ರೀಗಂಧ ಬೆಳೆಯಲಾಗುತ್ತಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ಈ ಬೆಳೆಗಳು ವ್ಯಾಪಿಸಿಕೊಂಡಿವೆ. ವರ್ಷಕ್ಕೆ ಒಂದು ಬಾರಿ ಬರುವ ಈ ಬೆಳೆಯನ್ನು ಕಾಡು ಪ್ರಾಣಿಗಳು ಹಾಗೂ ಕಳ್ಳಕಾಕರಿಂದ ಉಳಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡಬೇಕಾಗಿದೆ. ಅದಕ್ಕಾಗಿ ರೈತರು ಬಂದೂಕುಗಳ ಮೊರೆ ಹೋಗುತ್ತಾರೆ. ಅವುಗಳನ್ನು ಕೇವಲ ಬೆದರಿಸಲು ಮಾತ್ರ ಬಳಕೆ ಮಾಡಲಾಗುತ್ತದೆ.

ಬಂದೂಕು ಪರವಾನಗಿ ಕುರಿತು ಮಾತನಾಡಿರುವ ಜಿಲ್ಲಾ ಎಸ್ಪಿ ಅಕ್ಷಯ್ ಮಚಿಂದ್ರ, ಸ್ವರಕ್ಷಣೆ, ಬೆಳೆಗಳ ರಕ್ಷಣೆ ಸೇರಿದಂತೆ ಇತರ ಕಾರ್ಯಗಳಿಗಾಗಿ 9 ಸಾವಿರ ಗನ್​ಗಳನ್ನು ಪಡೆಯಲಾಗಿದೆ. ಹೊಸ ಕಾಯ್ದೆಯ ಪ್ರಕಾರ ಒಬ್ಬ ಎರಡೂ ಗನ್​​ಗಳನ್ನು ಹೊಂದುವಂತಿಲ್ಲ. ಹೀಗಾಗಿ ಪರವಾನಗಿ ನವೀಕರಣಕ್ಕೆ ಹೆಚ್ಚು ಅರ್ಜಿಗಳು ಬಂದಿವೆ ಎಂದರು.

ಇದನ್ನೂ ಓದಿ...ಜಲಮೂಲ ಸೇರುತ್ತಿರುವ ಕಾರ್ಖಾನೆಗಳ ತ್ಯಾಜ್ಯ ನೀರಿಗೆ ಇಲ್ಲ ಅಡೆತಡೆ

ಹೊಸದಾಗಿ ಗನ್ ಪಡೆಯಲು ಪರವಾನಗಿ ಕೇಳಲು ಬಂದರೆ ಮೊದಲಿಗೆ ಅವರ ಕುರಿತು ತನಿಖೆ ಮಾಡಲಾಗುತ್ತದೆ. ಒಟ್ಟು 300 ಅರ್ಜಿಗಳು ಬಾಕಿ ಇದ್ದು, ಲೈಸನ್ಸ್ ಪಡೆಯುವವರ ಕುರಿತು ಪೊಲೀಸ್, ಅರಣ್ಯ, ಕಂದಾಯ ಇಲಾಖೆಗಳು ಗನ್ ನೀಡುವ ಷರತ್ತುಗಳನ್ನು ಪರಿಶೀಲಿಸಲಾಗುತ್ತದೆ. ಗನ್ ಬೇಕು ಎಂದು ಕೇಳುತ್ತಿರುವವರಿಗೆ ಜಮೀನು ಇದೆಯೇ, ಕಾಡು ಪ್ರಾಣಿಗಳಿಂದ ಸಮಸ್ಯೆ ಆಗುತ್ತಿದೆಯೇ, ಸ್ವಯಂ ರಕ್ಷಣೆಗೆ ಕೇಳುತ್ತಿದ್ದಾರೆಯೇ? ಅವರ ಹಿನ್ನೆಲೆ ಏನು? ಹೀಗೆ ಹಲವು ವಿಷಯಗಳನ್ನು ಪರಿಶೀಲಿಸಿ ನಂತರ ಗನ್​ ನೀಡಲು ಅನುಮತಿ ನೀಡುತ್ತೇವೆ ಎಂದು ವಿವರಿಸಿದರು.

ಗನ್​​ ಪರವಾನಗಿ ಕುರಿತು ವರದಿ

ಪರವಾನಗಿ ಹೊಂದಿರುವ ಗನ್​ಗಳಿಂದ ಬೇರೆಯವರಿಗೆ ಬೆದರಿಸಿರುವ ಪ್ರಕರಣ ಜಿಲ್ಲೆಯಲ್ಲಿ ಈವರೆಗೂ ನಡೆದಿಲ್ಲ. ಗನ್ ಬೇಕಾದವರಿಗೆ ಪೊಲೀಸ್​ ಇಲಾಖೆಯಿಂದಲೇ ತರಬೇತಿ ನೀಡಲಾಗುತ್ತದೆ. ನಂತರ ಅವರಿಗೆ ಪ್ರಮಾಣಪತ್ರ ಕೊಡಲಾಗುತ್ತದೆ ಎಂದರು. ಪ್ರತಿಷ್ಠತೆಗಾಗಿ ಕೆಲವರು ಗನ್​ ಹೊಂದುತ್ತಿದ್ದಾರೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಇದನ್ನೂ ಓದಿ...ಕಸ್ತೂರಿ ರಂಗನ್ ವರದಿ ವಿರುದ್ಧ ಕಾಂಗ್ರೆಸ್​​ ಯಾವ ಮುಖವಿಟ್ಟುಕೊಂಡು ಹೋರಾಟಕ್ಕೆ ಇಳಿದಿದೆಯೋ: ಸಿ.ಟಿ. ರವಿ ಪ್ರಶ್ನೆ

ಶುಲ್ಕ ಭರಿಸಬೇಕು: ಆರಂಭದಲ್ಲಿ ವರ್ಷದ ಅವ­ಧಿಗೆ ಪರವಾನಗಿ ನೀಡಲಾಗುತ್ತದೆ. ನಂತರ ಪ್ರತಿ 3 ವರ್ಷಗಳಿಗೊಮ್ಮೆ ನವೀಕರಣ ಕಡ್ಡಾಯ. ಹೊಸ ಪರವಾನಗಿ ಮತ್ತು ನವೀಕರಣಕ್ಕೆ ಸಿಂಗಲ್‌ ಬ್ಯಾರೆಲ್‌ ಅಥವಾ ಡಬಲ್‌ ಬ್ಯಾರೆಲ್‌ ಬಂದೂಕು, ಪಿಸ್ತೂಲ್‌, ರಿವಾಲ್ವರ್‌ಗೆ ನಿಗದಿತ ಶುಲ್ಕ ಭರಿಸಬೇಕಾಗುತ್ತದೆ. ಪಿಸ್ತೂಲ್‌ಗೆ ₹ 80 ಸಾವಿರದಿಂದ ₹ 3.50 ಲಕ್ಷದವರೆಗೆ ಬೆಲೆ ಇದೆ.

ಅರ್ಹತೆ ಏನು?: ಕನಿಷ್ಠ 21 ವರ್ಷ ವಯಸ್ಸಾಗಿರ­ಬೇಕು. ಪೊಲೀಸ್‌ ಇಲಾಖೆ/ ಕರ್ನಾಟಕ ರೈಫಲ್‌ ಸಂಸ್ಥೆಯಿಂದ ಶಸ್ತ್ರಾಸ್ತ್ರ ಬಳ­ಕೆ ತರ­ಬೇತಿ ಪಡೆದಿರಬೇಕು. ವಾಸ ದೃಢೀಕರಣ ಮತ್ತಿತರ ದಾಖಲೆ ಕಡ್ಡಾಯ. ಪತಿ–ಪತ್ನಿ, ತಂದೆ–ಮಗ ಇಬ್ಬರೂ ಒಂದೇ ಬಂದೂಕು ಉಪಯೋಗಿಸುವ ಪರವಾನಗಿ ಪಡೆಯಬಹುದು. ಇದಕ್ಕಾಗಿ ಇಬ್ಬರೂ ಬಳಕೆಯ ತರಬೇತಿ ಪಡೆದಿರಬೇಕು.

Last Updated : Dec 25, 2020, 9:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.