ETV Bharat / state

ಬಾಳೆಹೊನ್ನೂರು: ಭದ್ರಾ ನದಿಯಲ್ಲಿ ಅಪರೂಪದ ನೀರುನಾಯಿ ಹಿಂಡು ಪ್ರತ್ಯಕ್ಷ! - beaver flock

ಬಾಳೆಹೊನ್ನೂರಿನ ಭದ್ರಾ ನದಿಯಲ್ಲಿ ಅಪರೂಪದ ನೀರುನಾಯಿಗಳು ಕಾಣಿಸಿಕೊಂಡಿವೆ. ಸದಾ ನೀರಿನಲ್ಲಿಯೇ ವಾಸಿಸುವ ಇವು ಭದ್ರಾ ನದಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.

A rare beaver flock was caught in the Bhadra River Bhadra River
ಬಾಳೆಹೊನ್ನೂರಿನ ಭದ್ರಾ ನದಿಯಲ್ಲಿ ಅಪರೂಪದ ನೀರುನಾಯಿ ಹಿಂಡು ಪ್ರತ್ಯೆಕ್ಷ
author img

By

Published : Apr 24, 2020, 7:18 PM IST

ಚಿಕ್ಕಮಗಳೂರು: ಸಾಮಾನ್ಯವಾಗಿ ಜನರಿಂದ ದೂರವಿದ್ದು, ತೀರಾ ಅಪರೂಪದ ಪ್ರಾಣಿಯಾದ ನೀರುನಾಯಿ ಇಲ್ಲಿನ ಬಾಳೆಹೊನ್ನೂರಿನಲ್ಲಿ ಕಾಣಿಸಿಕೊಂಡಿದೆ. ಸದಾ ನೀರಿನಲ್ಲಿಯೇ ವಾಸಿಸುವ ನೀರುನಾಯಿ ಇಲ್ಲಿನ ಭದ್ರಾ ನದಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಸುಮಾರು 8ರಿಂದ 10 ನೀರುನಾಯಿಗಳು ನೀರಿನಲ್ಲಿ ಆಟವಾಡುತ್ತಿದ್ದು, ಸ್ಥಳೀಯರ ಮೊಬೈಲ್​​ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

ಬಾಳೆಹೊನ್ನೂರಿನ ಭದ್ರಾ ನದಿಯಲ್ಲಿ ಅಪರೂಪದ ನೀರುನಾಯಿ ಹಿಂಡು ಪ್ರತ್ಯಕ್ಷ

ಸಾಮಾನ್ಯವಾಗಿ ಇವು ತಿಳಿ ನೀರಿನಲ್ಲಿ, ಜನರು ಇಲ್ಲದ ಪ್ರದೇಶದ ನೀರಿನ ಭಾಗದಲ್ಲಿ ಹೆಚ್ಚು ವಾಸ ಮಾಡುತ್ತವೆ. ಜನರಿಗೆ ಈ ನೀರುನಾಯಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಆದರೆ ಗುಂಪು ಗುಂಪಾಗಿ ಒಂದೇ ಜಾಗದಲ್ಲಿ ಇಷ್ಟೊಂದು ನೀರುನಾಯಿಗಳು ಕಾಣಿಸಿಕೊಂಡಿರೋದು ವಿಶೇಷ. ಭದ್ರಾ ನದಿಯ ಬ್ರಿಡ್ಜ್ ಪಕ್ಕದಲ್ಲಿಯೇ ಈ ನೀರುನಾಯಿಗಳು ಒಟ್ಟಾಗಿ ಸಂತೋಷದಿಂದ ಇರುವ ದೃಶ್ಯ ಸೆರೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.