ETV Bharat / state

ಮಕ್ಕಳಿಲ್ಲದ ಮನೆಗೆ ಸಂತಾನಭಾಗ್ಯ ಕರುಣಿಸಿದ ದೇವರು : ಸದ್ದಿಲ್ಲದೇ ಸಾಗಿದೆ ಸೌಹಾರ್ದತೆಯ ಮೊಹರಂ ಆಚರಣೆ - ಮೊಹರಂ ಆಚರಣೆ

ಚಿಕ್ಕಮಗಳೂರು: ಮೊಹರಂ ಎಂದ್ರೆ ಮುಸ್ಲಿಂರಿಗೆ ತ್ಯಾಗ-ಬಲಿದಾನದ ಹಬ್ಬ. ಆದ್ರೆ ನಗರದಲ್ಲಿರುವ ಹಿಂದೂ ಕುಟುಂಬವೊಂದರ ಮನೆಯಲ್ಲಿ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ಭಾವೈಕ್ಯತೆಯ ಸಂದೇಶ ಸಾರಲಾಗುತ್ತಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಮೊಹರಂ ಆಚರಣೆ
author img

By

Published : Sep 11, 2019, 1:28 PM IST

ಚಿಕ್ಕಮಗಳೂರಿನಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರಿನಲ್ಲಿ ಮೊಹರಂ ಆಚರಣೆ
Intro:Kn_Ckm_05_Hindu moharam_pkg_7202347Body:ಚಿಕ್ಕಮಗಳೂರು :-

ಮೊಹರಂ ಎಂದರೇ ಬಹುತೇಕ ಮುಸ್ಲೀಂ ರ ಪವಿತ್ರ ಹಬ್ಬ ಎಂದೇ ಪರಿಗಣಿಸಲಾಗುವುದು, ಆದರೇ ಚಿಕ್ಕಮಗಳೂರಿನ ಹಿಂದೂ ಕುಟುಂಬವೊಂದರ ಮನೆಯಲ್ಲಿ ಇದನ್ನು ಶ್ರದ್ಧಾ ಭಕ್ತಿಯಿಂದ ದಶಕಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಮುಸ್ಲೀಂರು ಕೂಡ ಮೊಹರಂ ಹಬ್ಬದ ವೇಳೆ ಇವರ ಮನೆಗೆ ಬಂದು ಪೂಜೆ ಸಲ್ಲಿಸುತ್ತಿರುವುದು ಭಾವೈಕ್ಯತೆಯ ದ್ಯೋತಕವಾಗಿದೆ..ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ....

ಹೌದು ನಗರದ ಬಸವನಹಳ್ಳಿ ಬಡಾವಣೆಯಲ್ಲಿರುವ ಕೇಶವಮೂರ್ತಿ ಎಂಬುವರ ಮನೆಯಲ್ಲಿ ಮೊಹರಂ ಹಬ್ಬ ಬಂತು ಎಂದರೇ ಹಿಂದೂ-ಮುಸ್ಲೀಂರಿಗೆ ಸಂಭ್ರಮ ಹಾಗೂ ಶ್ರದ್ದಾಭಕ್ತಿಯ ಕೇಂದ್ರವಾಗಿ ಬಿಡುತ್ತದೆ. ಏಕೆಂದರೇ ಇವರ ಮನೆಯಲ್ಲಿ ಪ್ರತಿಷ್ಟಾಪಿಸಲಾಗುವ ಮುಸ್ಲೀಂರ ನಂಬಿಕೆಗೆ ಅನುಗುಣವಾಗಿರುವ ಐದು ದೇವರುಗಳೆಂದರೇ ಪೂಜಿಸಲ್ಪಡುವ ಹಂಟರ್ ಬಾಬಾ, ಮೌಲಾಲಿ, ಕಟಾರ್, ಇಮಾಮಿಕಾಸಿಮ್, ಝುಲ್ಪಿಕರ್, ಸಂದಲ್ ಗಳಿಗೆ ನಮನ ಸಲ್ಲಿಸಲಾಗುವುದು. ಐದು ದಿನಗಳ ಕಾಲ ಇವುಗಳನ್ನು ಇರಿಸಿ ಮುಸ್ಲೀಂ ಪದ್ಧತಿ ಅನುಸಾರವಾಗಿ ಪೂಜೆ ಸಲ್ಲಿಸಲಾಗುವುದು. ಹಿಂದೂಗಳು ಮತ್ತು ಮುಸ್ಲೀಂರು ತಮ್ಮದೇ ಆದ ರೀತಿಯಲ್ಲಿ ಇಲ್ಲಿ ನಮನ ಸಲ್ಲಿಸಿ ಪೂಜಿಸುತ್ತಾರೆ.

80 ವರ್ಷಗಳಿಂದ ಹಿಂದೂ ಕುಟುಂಬವೊಂದು ಮುಸ್ಲೀಂ ದೇವರುಗಳನ್ನು ಸದ್ದಿಲ್ಲದೆ ಪೂಜಿಸಿ ಕೊಂಡು ಬರುತ್ತಿದೆ. ಕೇಶವಮೂರ್ತಿ ಅವರ ತಾತ, ಅಜ್ಜಿ ಎಚ್. ಆಂಜನಪ್ಪ ಮತ್ತು ರಾಮ ಮುನಿಯಮ್ಮ ಅವರಿಗೆ ಮಕ್ಕಳಿಲ್ಲದ್ದ ವೇಳೆ ಮೊಹರಂ ಹಬ್ಬದಲ್ಲಿ ಮುಸ್ಲೀಂ ದೇವರುಗಳಿಗೆ ಹರಕೆ ಕಟ್ಟಿಕೊಂಡಿದ್ದರಂತೆ. ಬೇಡಿಕೆ ಈಡೇರಿದ ನಂತರ ಆ ದೇವರುಗಳನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ವಿಧಿವಿಧಾನದಂತೆ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಮೊಹರಂ ಕಡೆ ದಿನ ಚಿಕ್ಕಮಗಳೂರು ನಗರದಲ್ಲಿ ಸಾಗುವ ಬೃಹತ್ ಮೆರವಣಿಗೆಯಲ್ಲಿ ಈ ದೇವರುಗಳನ್ನೂ ತೆಗೆದುಕೊಂಡು ಹೋಗಲಾಗುವುದು. ಆನಂತರ ಮನೆಯಲ್ಲಿ ಜೋಪಾನವಾಗಿ ಪೆಟ್ಟಿಗೆಯಲ್ಲಿಟ್ಟು ರಕ್ಷಿಸಲಾಗುವುದು.

ಒಟ್ಟಾರೆಯಾಗಿ ಚಿಕ್ಕಮಗಳೂರು ನಗರದಲ್ಲಿ ಒಂದು ಯಾವುದೇ ಪ್ರಚಾರವಿಲ್ಲದೆ ಭಾವೈಕ್ಯತೆಯ ಸಂಕೇತವೆಂಬಂತೆ ಕೇಶವಮೂರ್ತಿ ಅವರು 80 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಹಾಗೂ ಸಮಾಜಕ್ಕೆ ಮಾದರಿಯಾಗಿದೆ ಎಂದೇ ಹೇಳಬಹುದಾಗಿದೆ...

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.