ETV Bharat / state

ದೇವರೇ.. 'ನನ್ನ ಮಗ ರಾತ್ರಿ ಬೇಗ ಮಲಗುವಂತೆ ಮಾಡು'.. ಹುಂಡಿಯಲ್ಲಿ ಭಕ್ತನ ಪತ್ರ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ವೇಳೆ ಭಕ್ತರೊಬ್ಬರ ಪತ್ರವೊಂದು ಕಂಡು ಬಂದಿದೆ. ಭಕ್ತನೊಬ್ಬ ತನ್ನ ಮಗನ ಬದುಕು ಬದಲಿಸು ಎಂದು ಪತ್ರ ಬರೆದು ಬೇಡಿಕೊಂಡಿದ್ದಾನೆ.

a-devotee-wrote-letter-to-god-kalaseshwara
ದೇವರ ಹುಂಡಿಯಲ್ಲಿ ಭಕ್ತನ ಪತ್ರ
author img

By

Published : Apr 1, 2022, 8:03 PM IST

ಚಿಕ್ಕಮಗಳೂರು: ದೇವರ ಮುಂದೆ ಭಕ್ತರು ವಿವಿಧ ರೀತಿಯ ಹರಕೆಗಳನ್ನು ಹೊರುವುದು, ಅವು ಈಡೇರಿದಾಗ ಹರಕೆ ತೀರಿಸುವುದು ಸಾಮಾನ್ಯ. ಆದರೆ, ಭಕ್ತರೊಬ್ಬರು ತಮ್ಮ ಮಗ ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು ಭಗವಂತ ಎಂದು ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ವೇಳೆ ಪತ್ರ ಕಂಡು ಬಂದಿದೆ. ಕಳಸೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಭಕ್ತನೊಬ್ಬ ದೇವರೇ ನನ್ನ ಮಗನ ಬದುಕನ್ನು ಬದಲಿಸು ಎಂದು ಪತ್ರ ಬರೆದು ಬೇಡಿಕೊಂಡಿದ್ದಾನೆ. ಮಗನ ಹೆಸರು ಬರೆದಿರುವ ಅಪ್ಪ, ಆತನ ಕುಡಿತ ಚಟ ಬಿಡಿಸಿ ಒಳ್ಳೆಯ ಬುದ್ಧಿ ಕೊಡು. ಬೇಗ ಕೆಲಸ ಸಿಗುವಂತೆ ಮಾಡು ಎಂದು ಪ್ರಾರ್ಥಿಸಿದ್ದಾನೆ.

ಮಗನು ಭಾರಿ ಮುಂಗೋಪಿ, ಅದನ್ನೂ ಕಡಿಮೆ ಮಾಡು. ಆತನ ಚಂಚಲ ಸ್ವಭಾವ ತೊಲಗಿಸು, ರಾತ್ರಿ ಹೊತ್ತು ಆತ ಬೇಗ ಮಲಗುವಂತೆ ಮಾಡು, ಅವನಿಗಿರುವ ಭಯ ಹೋಗಲಾಡಿಸಿ ಧೈರ್ಯ ತುಂಬು, ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿಕೊಡು. ಮೊಮ್ಮಕ್ಕಳಿಗೂ ವಯಸ್ಸಿಗೆ ತಕ್ಕಂತೆ ಬುದ್ಧಿ ನೀಡು. ಮಗಳ ಸಂಸಾರ ಚೆನ್ನಾಗಿ ಕಾಪಾಡು ತಂದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ: ಚುನಾವಣಾ ಅಜೆಂಡಾ ಸೆಟ್ ಮಾಡ್ತಾರಾ ಬಿಜೆಪಿ ಚಾಣಕ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.