ETV Bharat / state

ಚಿಕ್ಕಮಗಳೂರಲ್ಲಿ  94  ಕೊರೊನಾ ಪ್ರಕರಣ ಪತ್ತೆ - Chikkamagaluru corona latest news

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು 94 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರ ಜೊತೆಗೆ ಇಂದು 50 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Chikkamagaluru
Chikkamagaluru
author img

By

Published : Aug 19, 2020, 5:47 PM IST

ಚಿಕ್ಕಮಗಳೂರು : ಇಂದು ಹೊಸದಾಗಿ 94 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,511 ಕ್ಕೆ ಏರಿಕೆಯಾಗಿದೆ.

ಈ ದಿನ ತಾಲೂಕಿನಲ್ಲಿ 29, ಕಡೂರು ತಾಲೂಕಿನಲ್ಲಿ 39, ತರೀಕೆರೆ ತಾಲೂಕಿನಲ್ಲಿ 12, ಮೂಡಿಗೆರೆ ತಾಲೂಕಿನಲ್ಲಿ 05,ಕೊಪ್ಪ ತಾಲೂಕಿನಲ್ಲಿ 02, ಶೃಂಗೇರಿ ತಾಲೂಕಿನಲ್ಲಿ 03, ಎನ್ ಆರ್ ಪುರ ತಾಲೂಕಿನಲ್ಲಿ 04 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಇಂದು ಸೋಂಕಿಗೆ ಒಬ್ಬರು ಬಲಿಯಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 50 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೂ ಜಿಲ್ಲೆಯಲ್ಲಿ ಒಟ್ಟು 1,601 ಜನ ಸೋಂಕಿತರು ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 860 ಸಕ್ರಿಯ ಪ್ರಕರಣಗಳಿವೆ.

ಈ ದಿನ ಪತ್ತೆಯಾದ ಸೋಂಕಿತರು ವಾಸ ಮಾಡುತ್ತಿದ್ದ ಏರಿಯಾವನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಂಪೂರ್ಣ ಸೀಲ್ ಡೌನ್ ಮಾಡಿ ಕಟ್ಟೆಚ್ಚರ ವಹಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.