ಚಿಕ್ಕಮಗಳೂರು: ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಸಾವಿನ ಮನೆಗೆ ಹೋಗಿದ್ದ ಸುಮಾರು 30 ಜನರಲ್ಲಿ 22 ಜನರಿಗೆ ಸೋಂಕು ತಗುಲಿತ್ತು. ಇದೀಗ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 29 ಮಂದಿಗೂ ಸೋಂಕು ದೃಢಪಟ್ಟಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ರೂ, ಲೆಕ್ಕಿಸದೆ ಸಾವಿನ ಮನೆಗೆ ಹೋಗಿದ್ದ 30 ಜನರಲ್ಲಿ 22 ಜನರಿಗೆ ಸೋಂಕು ತಗುಲಿತ್ತು. ಇದೀಗ ಅವರ ಪ್ರಾಥಮಿಕ ಸಂಪರ್ಕಿತರಿಗೂ ಕೊರೊನಾ ತಗುಲಿ ಒಟ್ಟು ಸೋಂಕಿತರ ಸಂಖ್ಯೆ 51ಕ್ಕೆ ತಲುಪಿದೆ.
ಕಳೆದ ನಾಲ್ಕು ದಿನದ ಹಿಂದೆ ಕೋಡಿಹಳ್ಳಿ ಗ್ರಾಮದ ಓರ್ವ ವ್ಯಕ್ತಿ ಮೃತಪಟ್ಟಿದ್ದರಿಂದ ಅಂತ್ಯ ಸಂಸ್ಕಾರದಲ್ಲಿ ಇದೇ ಗ್ರಾಮದ 30 ಜನ ಭಾಗಿಯಾಗಿದ್ದರು. ಆದರೆ ಕೆಲವು ದಿನದ ನಂತರ ಮೃತ ವ್ಯಕ್ತಿಗೆ ಕೊರೊನಾ ಸೋಂಕು ಇದ್ದಿದ್ದು ದೃಢವಾಗಿದೆ. ಹೀಗಾಗಿ ತಾಲೂಕಿನ ಅಂಬಳೆ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ.
ಓದಿ: ಕೊರೊನಾ ಮುಕ್ತ ಗ್ರಾಮಕ್ಕೆ 25 ಸಾವಿರ ರೂ. ಬಹುಮಾನ: ಡಿಸಿ ರೋಹಿಣಿ ಸಿಂಧೂರಿ ಘೋಷಣೆ