ETV Bharat / state

ಕಾಫಿನಾಡಿನಲ್ಲಿ ಮಳೆ ಅಬ್ಬರ: 50 ಕೆರೆಗಳು ಸಂಪೂರ್ಣ ಭರ್ತಿ - ಮಳೆ ಅಬ್ಬರಕ್ಕೆ ಭರ್ತಿಯಾದ ಕೆರೆಗಳು

ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 70 ಕೆರೆಗಳಿವೆ. ಅದರಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 27 ಕೆರೆಗಳು ತುಂಬಿ ಕೋಡಿ ಬಿದ್ದಿದ್ದರೆ, ಮೂಡಿಗೆರೆ ತಾಲೂಕಿನಲ್ಲಿ 7 ಮತ್ತು ಕಡೂರು ತಾಲೂಕಿನಲ್ಲಿ 16 ಕೆರೆಗಳು ಭರ್ತಿಯಾಗಿವೆ.

lakes filled due to heavy rain in chikkamagaluru
ಮಳೆ ಅಬ್ಬರಕ್ಕೆ ಭರ್ತಿಯಾದ ಕೆರೆಗಳು
author img

By

Published : Aug 27, 2022, 10:18 AM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಅದರಲ್ಲಿಯೂ ಮುಂಗಾರು ಮಳೆ ಆರ್ಭಟಕ್ಕೆ ಸುಮಾರು 50 ಕೆರೆಗಳು ಭರ್ತಿಯಾಗಿ ಬಾಗಿನ ಅರ್ಪಿಸಿಕೊಂಡಿದ್ದರೆ, 20 ಕೆರೆಗಳಿಗೆ ಆ ಭಾಗ್ಯ ಇನ್ನೂ ಒದಗಿ ಬಂದಿಲ್ಲ.

ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 70 ಕೆರೆಗಳಿವೆ. ಅದರಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ 27 ಕೆರೆಗಳು ತುಂಬಿ ಕೋಡಿ ಬಿದ್ದಿದ್ದರೆ, ಮೂಡಿಗೆರೆ ತಾಲೂಕಿನಲ್ಲಿ 7 ಮತ್ತು ಕಡೂರು ತಾಲೂಕಿನಲ್ಲಿ 16 ಕೆರೆಗಳು ಭರ್ತಿಯಾಗಿವೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮುಂಗಾರು ಮಳೆ ತಡವಾಗಿ ಜಿಲ್ಲೆಯನ್ನು ಪ್ರವೇಶಿಸಿದೆ. ಆರಂಭದಲ್ಲಿ ಕೊಂಚ ಮಳೆ ಕಡಿಮೆಯಾದರೆ, ಬಳಿಕ ಆಶ್ಲೇಷ ಅಬ್ಬರಿಸಿದ್ದರಿಂದ ಬಹುತೇಕ ಕೆರೆಗಳು ಕೋಡಿ ಬೀಳಲು ಕಾರಣವಾಯಿತು.

ಮಳೆ ಅಬ್ಬರಕ್ಕೆ ಭರ್ತಿಯಾದ ಕೆರೆಗಳು: ಚಿಕ್ಕಮಗಳೂರು ತಾಲೂಕಿನ ಗುರುತ್ವಾಕರ್ಷಣೆ ಮೂಲಕ ನಗರಕ್ಕೆ ಕುಡಿವ ನೀರು ಸರಬರಾಜು ಮಾಡುವ ಹಿರೇ ಕೊಳಲೆಕೆರೆ, ಇಂದಾವರ ತಾವರೆಕೆರೆ, ಹುಲಿ ಗುಂದರಾಯನ ಕೆರೆ, ಮಾವಿನಹಳ್ಳಿಕಟ್ಟೆ, ಕರ್ತಿಕೆರೆ, ಹಿರೇಮಗಳೂರು ದೊಡ್ಡಕೆರೆ, ಹುಸಣವಳ್ಳಿಕೆರೆ, ಲಕ್ಷ್ಮೀಪುರ ಕೆರೆ, ತಾವರೆಕೆರೆ, ನಲ್ಲೂರು ಗೌರಿ ಕೆರೆ, ಮತ್ತಾವರ ಹುಣಸೆಕಟ್ಟೆ, ಮೂಕ್ತಿಹಳ್ಳಿ ಕೆರೆ, ಲಕ್ಕಮ್ಮನಹಳ್ಳಿ, ಕಳಸಾಪುರದ ತಿಮ್ಮಪ್ಪನಾಯಕನ ಕೆರೆ ಹಾಗೂ ಹಲವು ವರ್ಷಗಳ ಬಳಿಕ ಬೆಳವಾಡಿ ದೊಡ್ಡಕೆರೆ ತುಂಬಿ ಕೋಡಿ ಬಿದ್ದಿದೆ. ಈಶ್ವರಹಳ್ಳಿ ಊರ ಮುಂದಿನಕೆರೆ ಭರ್ತಿಯಾಗಿದೆ.

ಮರ್ಲೆ ದೊಡ್ಡಕೆರೆ, ಹರಿಹರದಹಳ್ಳಿಯ ಬಳಸೆಕಟ್ಟೆ ಕೆರೆ, ಆರದಹಳ್ಳಿಯ ದೊಡ್ಡಕೆರೆ, ಮಾಗಡಿ ದೊಡ್ಡಕೆರೆ, ಅಂಬಳೆದೊಡ್ಡಕೆರೆ, ಕೋಟೆವೂರು ನಾಗರ ಬಾವಿಕೆರೆ, ವಸ್ತಾರೆ ಹಿರೇಕೆರೆ, ಬಾಳೆಹಳ್ಳಿ ಕರಿಯಪ್ಪಗೌಡನ ಕೆರೆ, ಆಲ್ದೂರು ಊರ ಮುಂದಿನಕೆರೆ, ದೊಡ್ಡ ಮಾಗರವಳ್ಳಿ ಊರ ಮುಂದಿನಕೆರೆ,ನರಗನಹಳ್ಳಿ ರಾಮೇಶ್ವರಕೆರೆ, ಕಳಸಾಪುರ ಊರ ಮುಂದಿನಕೆರೆ, ದಾಸರಹಳ್ಳಿಕೆರೆ ಭರ್ತಿಯಾಗಿ ಗ್ರಾಮದ ಜನರಲ್ಲಿ ಸಂತಸ ಮೂಡಿದೆ.

ಭರ್ತಿಯಾಗದ ಕೆರೆಗಳು: ಮೂಡಿಗೆರೆ ತಾಲೂಕಿನ ಉದುಸೆ ದೇವೀರಮ್ಮನ ಕೆರೆ, ಜೋಗಣ್ಣನ ದಿಣ್ಣೇಕೆರೆ, ಅಂಗಡಿ ದೊಡ್ಡಕೆರೆ, ಮಾಕೋನಹಳ್ಳಿಯ ಬೈರಮ್ಮನಕೆರೆ, ಲೋಕವಳ್ಳಿಯ ಊರ ಮುಂದಿನಕೆರೆ, ಉದಕಿನರಸೀಕೆರೆ, ಹೊರಟ್ಟಿ ಬೈದಲಕೆರೆ ತುಂಬಿ ಹೋಗಿವೆ. ಕಡೂರು ತಾಲೂಕಿನ ಗರ್ಜೆಕೆರೆ, ಕಡೂರು ದೊಡ್ಡಕೆರೆ, ದೊಡ್ಡ ಬುಕ್ಕಸಾಗರ, ಐತಿಹಾಸಿಕ ಸಖರಾಯಪಟ್ಟಣದ ಅಯ್ಯನಕೆರೆ, ಯಳ್ಳಂಬಳಸ ಊರ ಮುಂದಿನಕೆರೆ, ಬೀರೂರು ದೇವನಕೆರೆ, ಹಿರಿಯಂಗಳ ಬಾರ್ತಿನಕೆರೆ, ಎಮ್ಮೆ ದೊಡ್ಡಿಯ ಮದಗದಕೆರೆ, ಕುಕ್ಕ ಸಮುದ್ರಕೆರೆ ಕೋಡಿ ಬಿದ್ದಿವೆ.

ಚಿಕ್ಕಮಗಳೂರು ತಾಲೂಕಿನ ನೆಲ್ಲಿಕೆರೆ, ಕುರುವಂಗಿದೊಡ್ಡಕೆರೆ, ದಂಟರಮಕ್ಕಿ ಕೆರೆ, ಸಿಂದಿಗೆರೆ ಊರ ಮುಂದಿನಕೆರೆ ತುಂಬಿಲ್ಲ, ಕಡೂರು ತಾಲೂಕಿನ ಗರಗದ ಹಳ್ಳಿ ನಾಯಕನಕೆರೆ, ಸಿಂಗಟಗೆರೆ, ಕೆ.ಬಿದರೆ, ಯಗಟಿ, ಹಿರೇನಲ್ಲೂರು ಊರ ಮುಂದಿನಕೆರೆ, ದೇವನೂರು ದೊಡ್ಡಕೆರೆ, ಎಸ್.ಬಿದರೆ ಊರಮುಂದಿನಕೆರೆ, ಹೋರಿತಿಮ್ಮನಹಳ್ಳಿಕೆರೆ, ಬಿಳವಾಲ, ಚೌಡಲಪುರ ಊರಮುಂದಿನಕೆರೆ, ಕೆರೆಸಂತೆ ವಿಷ್ಣು ಸಮುದ್ರ ಕೆರೆ,ಅಣ್ಣಿಗೆರೆ ಊರಮುಂದಿನಕೆರೆ, ಮಚ್ಚೇರಿಕೆರೆ, ಪುರಕೋಡಿಹಳ್ಳಿ, ಕುರುಬರಹಳ್ಳಿ ಸಮೀಪದ ನಿರ್ಮಾಣವಾಗುತ್ತಿರುವ ಕೆರೆಗಳ ಬಾಗಿನ ಅರ್ಪಿಸಿಕೊಳ್ಳುವ ಭಾಗ್ಯವನ್ನು ಕಳೆದುಕೊಂಡಿವೆ.

ಮಳೆಯ ಆರ್ಭಟಕ್ಕೆ ನೂರಾರು ಮನೆಗಳು, ರಸ್ತೆ, ವಿದ್ಯುತ್​​ ಕಂಬ, ವಿದ್ಯುತ್‌ ಲೈನ್, ಸೇತುವೆಗಳಿಗೆ ಹಾನಿಯಾಗಿ 219 ಕೋಟಿ ರೂ.ಹಾನಿಯಾಗಿದೆ. ಸರ್ಕಾರ ಹಾನಿಗೊಳಗಾಗಿರುವ ಸ್ಥಳಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೆಚ್ಚುವರಿಯಾಗಿ 10 ಕೋಟಿ ರೂ. ಬಿಡುಗಡೆಗೊಳಿಸಿದೆ.

ತುಂಬದ ಬಸವನಹಳ್ಳಿ-ಕೋಟೆಕೆರೆ: ಚಿಕ್ಕಮಗಳೂರು ನಗರದಲ್ಲಿರುವ ಬಸವನಹಳ್ಳಿಕೆರೆ ,ಕೋಟೆ ಕೆರೆಯನ್ನು ಮಾದರಿ ಕೆರೆನ್ನಾಗಿ ಮಾಡುವ ಉದ್ದೇಶದಿಂದ ಕೆರೆಯಲ್ಲಿ ಅಭಿವೃದ್ದಿ ಕಾಮಗಾರಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆರೆ ಕೋಡಿಯನ್ನು ತೆಗೆದು ನೀರು ಹೊರಬಿಟ್ಟಿದ್ದು, ಮಳೆಗಾಲದಲ್ಲಿ ಕೋಡಿ ಕಟ್ಟದ್ದರಿಂದ ನೀರು ನಿಲ್ಲದಂತಾಗಿದೆ.

ಇದನ್ನೂ ಓದಿ: ಕಾಫಿನಾಡು ಗಿರಿ ಶ್ರೇಣಿಯ ಮಡಿಲು ತುಂಬಿದ ಕುರಂಜಿ ಹೂ.. ಏನಿದರ ವಿಶೇಷತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.