ETV Bharat / state

ಬಲ್ಲಾಳರಾಯನ ದುರ್ಗಕ್ಕೆ ಟ್ರೆಕ್ಕಿಂಗ್​ ತೆರಳಿದ ನಾಲ್ವರು ಯುವಕರು ಕಣ್ಮರೆ! - ವಾಸಕ್ಕೆಂದು ತೆರಳಿದ 4 ಯುವಕರು ಕಣ್ಮರೆ

ಮೂಡಿಗೆರೆ ತಾಲೂಕಿನ ರಾಣಿ ಝರಿಯಿಂದ ಬಲ್ಲಾಳರಾಯನ ದುರ್ಗಕ್ಕೆ ಟ್ರೆಕ್ಕಿಂಗ್​ಗೆ ತೆರಳಿದ ನಾಲ್ವರು ಯುವಕರು ನಾಪತ್ತೆಯಾಗಿದ್ದಾರೆ. ತಾಲೂಕಿನ ಕೊಟ್ಟಿಗೆಹಾರ ರಸ್ತೆಗೆ ವಾಪಸ್ ಬರುವ ವೇಳೆ ಸರಿಯಾಗಿ ರಸ್ತೆ ತಿಳಿಯದೆ ಯುವಕರು ದಾರಿ ತಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

4 youngsters missed in mudigere who went to trip
ಮೂಡಿಗೆರೆ: ಪ್ರವಾಸಕ್ಕೆಂದು ತೆರಳಿದ 4 ಯುವಕರು ಕಣ್ಮರೆ...!
author img

By

Published : Sep 27, 2020, 6:59 AM IST

ಚಿಕ್ಕಮಗಳೂರು: ನಾಲ್ವರು ಜನ ಯುವಕರು ಟ್ರೆಕ್ಕಿಂಗ್​ಗೆ ತೆರಳಿದಾಗ ಕಣ್ಮರೆಯಾಗಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮೂಡಿಗೆರೆ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಸಹಾಯಕ್ಕಾಗಿ ನಾಲ್ಕು ಜನ ಯುವಕರು ಅಂಗಲಾಚುತ್ತಿದ್ದಾರೆಂಬ ಮಾಹಿತಿಯು ಬಲ್ಲ ಮೂಲಗಳಿಂದ ದೊರೆತಿದೆ. ಮೂಡಿಗೆರೆ ತಾಲೂಕಿನ ರಾಣಿ ಝರಿಯಿಂದ ಬಲ್ಲಾಳರಾಯನ ದುರ್ಗಕ್ಕೆ ಟ್ರೆಕ್ಕಿಂಗ್ ತೆರಳಿದಾಗ ಈ ಯುವಕರು ನಾಪತ್ತೆಯಾಗಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ರಸ್ತೆಗೆ ವಾಪಸ್ ಬರುವ ವೇಳೆ ಸರಿಯಾಗಿ ರಸ್ತೆ ತಿಳಿಯದೆ ಯುವಕರು ದಾರಿ ತಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಯುವಕರಿಗಾಗಿ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿಯಿಂದ ಶೋಧಕಾರ್ಯ ನಡೆಯುತ್ತಿದೆ.

ಈ ನಾಲ್ಕು ಜನ ಯುವಕರು ಚಿಕ್ಕಮಗಳೂರು ಮೂಲದವರಾಗಿದ್ದು, ಕೆಲವೊಮ್ಮೆ ಈ ಯುವಕರ ಫೋನ್ ಸಂಪರ್ಕಕ್ಕೆ ಸಿಗುತ್ತಿದ್ದರೆ, ಕೆಲವೊಮ್ಮೆ ಫೋನ್ ಸಂಪರ್ಕ ಸರಿಯಾಗಿ ಸಿಗುತ್ತಿಲ್ಲ. ಸರಿಯಾದ ಫೋನ್ ಲೋಕೇಶನ್ ಮಾಹಿತಿ ಇಲ್ಲದೆ ಯುವಕರು ಪರದಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.