ಚಿಕ್ಕಮಗಳೂರು: ಜೂಜು ಅಡ್ಡೆ ಮೇಲೆ ಬೀರೂರು ಪೊಲೀಸರು ದಾಳಿ ಮಾಡಿ 17 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯ ಪರದೇಶಿ ಹಾಳು ಗ್ರಾಮದ ಸರ್ಕಾರಿ ನೀಲಗಿರಿ ಕಾಡಿನಲ್ಲಿ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಬೀರೂರು ಪೊಲೀಸರು ದಾಳಿ ಮಾಡಿ 17 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಮೂವರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರಿಂದ 1,90,245 ಲಕ್ಷ ರೂ. ಸೇರಿದಂತೆ 17 ಮೊಬೈಲ್, ನಾಲ್ಕು ಕಾರು, ಮೂರು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.