ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿರುವ ಶೃಂಗೇರಿಯ ಶಾರದಾ ಮಠದ ಆವರಣದೊಳಗೆ ನುಗ್ಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ. ಸೆರೆ ಸಿಕ್ಕ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ನೋಡಿ ಭಕ್ತರು ಬೆಚ್ಚಿಬಿದ್ದಿದ್ದಾರೆ.
ಮಠದ ಆವರಣದ ಸುತ್ತಮುತ್ತ ಬರೋಬ್ಬರಿ 14 ಅಡಿ ಉದ್ದದ ಕಾಳಿಂಗ ಸರ್ಪ ಸಂಚಾರ ಮಾಡುತ್ತಿರುವುದನ್ನು ಕಂಡ ಮಠದ ಸದಸ್ಯರು, ಕೂಡಲೇ ಉರಗತಜ್ಞ ಅರ್ಜುನ್ಗೆ ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ನೇಕ್ ಅರ್ಜುನ್ ಸತತ ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆ ಹಿಡಿದ ಕೆಲ ಸಮಯ ಮಠದ ಆವರಣದಲ್ಲಿ ಕಾಳಿಂಗ ಸರ್ಪವನ್ನು ಆರೈಕೆ ಮಾಡಲಾಗಿದ್ದು, ತಂತಿ ಬೇಲಿ ದಾಟುವ ವೇಳೆ ಕಾಳಿಂಗ ಸರ್ಪಕ್ಕೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಸೆರೆ ಹಿಡಿದ 14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗವನ್ನು ನಂತರ ಕೆರೆಕಟ್ಟೆ ಅರಣ್ಯಕ್ಕೆ ಉರಗ ಪ್ರೇಮಿ ಅರ್ಜುನ್ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ