ETV Bharat / state

Electricity bill: ಕಡೂರಲ್ಲಿ ಅಂಗಡಿಯೊಂದಕ್ಕೆ ಬಂದ 10 ಲಕ್ಷ ರೂ. ವಿದ್ಯುತ್​ ಬಿಲ್.. ಮಾಲೀಕನಿಗೆ ಪವರ್​ ಶಾಕ್​!

ಅಂಗಡಿ ಮಾಲೀಕರೊಬ್ಬರಿಗೆ ಆಗಸ್ಟ್​ ತಿಂಗಳಿಗೆ 10 ಲಕ್ಷ ರೂಪಾಯಿ ವಿದ್ಯುತ್​ ಬಿಲ್​ ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.

10-lakh-rupees-electricity-bill-for-shop-in-chikkamagaluru
ಅಂಗಡಿಯೊಂದಕ್ಕೆ ಬಂದ 10 ಲಕ್ಷ ಕರೆಂಟ್ ಬಿಲ್ : ದಂಗಾದ ಮಾಲೀಕ
author img

By ETV Bharat Karnataka Team

Published : Sep 11, 2023, 6:16 PM IST

ಚಿಕ್ಕಮಗಳೂರು : ಅಂಗಡಿ ಮಾಲೀಕರೊಬ್ಬರಿಗೆ ಒಂದು ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ವಿದ್ಯುಲ್​ ಬಿಲ್​ ಬಂದಿದ್ದು, ವಿದ್ಯುತ್​ ಬಿಲ್​ ಕಂಡು ಅಂಗಡಿ ಮಾಲೀಕರು ಬೆಚ್ಚಿಬಿದ್ದಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್ ನಲ್ಲಿರುವ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳಿಗೆ 10,26,054 ರೂಪಾಯಿ ವಿದ್ಯುತ್​ ಬಿಲ್​ ನೀಡಲಾಗಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000ರಿಂದ 4,500 ರೂಪಾಯಿ ಮಾತ್ರ ಬರುತ್ತಿತ್ತು. ಆದರೆ ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ಬಂದಿದೆ ಎಂದು ಮಾಲೀಕರು ಹೇಳಿದ್ದಾರೆ.

ಬಿಲ್​ನಲ್ಲಿ 1/8/2023 ರಿಂದ 1/9/23ರ ವರೆಗಿನ ಅವಧಿಯನ್ನು ನಮೂದಿಸಲಾಗಿದೆ. ಬಿಲ್ ನಂ.259 ಆಗಿದ್ದು, 8,35,737 ರೂ. ಎಫ್‍ಪಿಪಿಎಸಿ (1.16) ಮತ್ತು ಟ್ಯಾಕ್ಸ್ 9% (75,216.33 ರೂ.ಗಳು) ಒಟ್ಟು 10,260,54 ರೂ. ಎಂದು ಬಿಲ್​ನಲ್ಲಿ ನಮೂದಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂಗಡಿ ಮಾಲೀಕ, ಈ ಹಿಂದೆ ವಿದ್ಯುತ್ ಬಿಲ್​ನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳು ಕೂಡ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ, ಈ ತಿಂಗಳು 10 ಲಕ್ಷ ರೂಪಾಯಿ ಬಿಲ್ ಬಂದಿದೆ. ಈ ಸಂಬಂಧ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ. ಅವರು ಸರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ನಾಲ್ಕು ದಿನ ಕಳೆದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಮೆಸ್ಕಾಂ ಸಿಬ್ಬಂದಿ, ತಾಂತ್ರಿಕ ದೋಷದಿಂದ ಈ ರೀತಿ ಬಿಲ್​ ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗಿದ್ದು, ಗ್ರಾಹಕರಿಗೆ ಸರಿಯಾದ ಬಿಲ್​ ತಲುಪಿಸಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಉಳ್ಳಾಲದ ಮನೆಯೊಂದಕ್ಕೆ 7 ಲಕ್ಷ ವಿದ್ಯುಲ್​ ಬಿಲ್​ : ಕಳೆದ ಎರಡು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮನೆಯೊಂದಕ್ಕೆ ಏಳು ಲಕ್ಷ ರೂಪಾಯಿ ವಿದ್ಯುತ್​ ಬಿಲ್​ ಬಂದಿತ್ತು. ಈ ಬಿಲ್​ನ್ನು ಕಂಡು ಮನೆ ಮಾಲೀಕರು ದಂಗಾಗಿದ್ದರು. ಉಳ್ಳಾಲಬೈಲ್​​ ನಿವಾಸಿ ಸದಾಶಿವ ಆಚಾರ್ಯ ಎಂಬವರ ಮನೆಗೆ 7 ಲಕ್ಷ ರೂ. ಬಿಲ್​ ಬಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮನೆ ಮಾಲೀಕ ಸದಾಶಿವ ಆಚಾರ್ಯ, ವಿದ್ಯುತ್ ಬಿಲ್​ನಲ್ಲಿ 99,338 ಯೂನಿಟ್ ವಿದ್ಯುತ್​ ಖರ್ಚಾಗಿದ್ದು 7,71,072 ರೂಪಾಯಿ ಬಿಲ್ ನಮೂದಿಸಲಾಗಿದೆ. ತಮಗೆ ಈ ಮೊದಲು ಕೇವಲ 3,000 ರೂಪಾಯಿಯಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು. ಬಿಲ್ಲನ್ನು ನೋಡಿ ಮನೆ ಮಂದಿಯೆಲ್ಲ ನಿಜಕ್ಕೂ ಶಾಕ್ ಆದೆವು ಎಂದು ಹೇಳಿದ್ದರು.

ಇದನ್ನೂ ಓದಿ : ತಗಡಿನ ಶೆಡ್​​, ಉರಿಯೋದು ಎರಡೇ ಬಲ್ಬ್​​​... ಬರೋಬ್ಬರಿ 1,03,315 ರೂ ಬಿಲ್ ನೀಡಿದ ಜೆಸ್ಕಾಂ.. ಬಿಲ್ ನೋಡಿ ಶಾಕ್ ಆದ ವೃದ್ಧೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.