ಚಿಕ್ಕಬಳ್ಳಾಪುರ: ಕುರಿ ತೊಳೆಯಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲ ಕುಂಟೆ ಕೆರೆ ಬಳಿ ನಡೆದಿದೆ.
ಕಾರುಡಿಪಲ್ಲಿ ಗ್ರಾಮದ ಶಂಕರ್ (25) ಬಾಬು (20) ಮೃತ ಯುವಕರು. ಮಧ್ಯಾಹ್ನ 12 ಘಂಟೆ ಸಮಯದಲ್ಲಿ ಕುರಿಗಳನ್ನು ತೊಳೆಯಲು ಹೋದ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕೆರೆಯ ಆಳ ಪರಿಕ್ಷಿಸಿಲು ನೀರಿಗೆ ಇಳಿದಿದ್ದ ಶಂಕರ್, ಈಜು ಬಾರದೆ ಮುಳುಗುತ್ತಿದ್ದ, ಈ ವೇಳೆ ಬಾಬು ಸಹಾಯಕ್ಕೆ ಧಾವಿಸಿದ್ದು, ಇಬ್ಬರು ಮೇಲೆ ಬರಲಾಗದೆ ಮುಳುಗಿರುವುದಾಗಿ ತಿಳಿದು ಬಂದಿದೆ.
ಅಗ್ನಿ ಶಾಮಕ ಸಿಬ್ಬಂದಿ ಇಬ್ಬರು ಯುವಕರ ಮೃತದೇಹಗಳನ್ನೂ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಗೌರಿ ಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.