ETV Bharat / state

ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ಸ್ನೇಹಿತನ ಕತ್ತು ಕೊಯ್ದು ಹತ್ಯೆ - ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ

ಕುಡಿದ ಅಮಲಿನಲ್ಲಿ ಸ್ನೇಹಿತನ ಕೊಯ್ದು ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

youth murdered in chikkaballapura
ದುರ್ಗೇಶ್ ಅಲಿಯಾಸ್ ಚಿನ್ನಾ -ಮೃತ ವ್ಯಕ್ತಿ
author img

By

Published : Oct 4, 2022, 1:22 PM IST

Updated : Oct 4, 2022, 1:41 PM IST

ಚಿಂತಾಮಣಿ(ಚಿಕ್ಕಬಳ್ಳಾಪುರ): ನಗರದ ಹೊರವಲಯದ ಕನ್ನಂಪಲ್ಲಿಯ ಬುಲೆಟ್ ಶೋರೂಂ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಲು ಸೇರಿದ ಸ್ನೇಹಿತರ ಗುಂಪಿನ ಪೈಕಿ ಓರ್ವನನ್ನು ಮಾರಕಾಸ್ತ್ರದಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.

ನರಸಿಂಹಪೇಟೆಯ ನಿವಾಸಿ ದುರ್ಗೇಶ್ ಅಲಿಯಾಸ್ ಚಿನ್ನಾ (25) ಮೃತ ವ್ಯಕ್ತಿ. ಈತ ಬೆಂಗಳೂರು ಜೋಡಿ ರಸ್ತೆಯ ಸ್ಪೆಕ್ಸ್ ಇನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ರಾತ್ರಿ ಸ್ನೇಹಿತರೊಬ್ಬರ ಹುಟ್ಟುಹಬ್ಬದ ಪ್ರಯಕ್ತ ಬೆಂಗಳೂರು ರಸ್ತೆಯ ಕಟಮಾಚನಹಳ್ಳಿ ಸಮೀಪದ ಡಾಬಾದ ಬಳಿ ಸೇರಿದ್ದು, ಅಲ್ಲಿ ಗಲಾಟೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಕುಡಿದ ಅಮಲಿನಲ್ಲಿ ಸ್ನೇಹಿತನ ಕತ್ತು ಕೊಯ್ದು ಹತ್ಯೆ ..

ನಂತರ ರಾತ್ರಿ ಡಾಬಾ ಬಾಗಿಲು ಹಾಕಿದ ನಂತರ ಕನ್ನಂಪಲ್ಲಿಯ ಬುಲೆಟ್ ಶೋರೂಂ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಲು ಸೇರಿದ್ದರು. ಈ ಸಂದರ್ಭಧಲ್ಲಿ ಗಲಾಟೆ ನಡೆದಿದ್ದು ಮಾರಕಾಸ್ತ್ರಗಳಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಎಎಸ್‌ಪಿ ಕೌಶಲ್ ಚೌಕ್ಸಿ, ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ಸುಧಾಕರ್ ರೆಡ್ಡಿ, ನಗರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್ ರಂಗ ಶಾಮಯ್ಯ ಮತ್ತಿತರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಸಹೋದರ ಅರವಿಂದ್ ನೀಡಿದ ದೂರಿನ ಮೇಲೆ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ಭೇದಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಡಿಜಿ ಕೊಲೆ ಕೇಸ್​.. ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ, ಮನೆಗೆಲಸದವನೇ ಪ್ರಮುಖ ಆರೋಪಿ

Last Updated : Oct 4, 2022, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.