ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಹಾಮಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ನಿನ್ನೆ ನೀರಿನಲ್ಲಿ ಕೊಚ್ಚಿಹೋಗಿದ್ದ ಬೋಯಿಪಲ್ಲಿ ಗ್ರಾಮದ ಯುವಕನ ಶವ ಇಂದು ಪತ್ತೆಯಾಗಿದೆ.
ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಕೆರೆ ಕೋಡಿ ಹರಿಯುತ್ತಿದೆ. ಇದನ್ನು ವೀಕ್ಷಿಸಲು ಹೋಗಿ ಬೋಯಿಪಲ್ಲಿ ಗ್ರಾಮದ ಐವರು ಯುವಕರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ನಾಲ್ವರು ಯುವಕರನ್ನು ರಕ್ಷಿಸಿದ್ದರು. ಆದರೆ ರಮಣ ಎಂಬಾತ ನೀರು ಪಾಲಾಗಿದ್ದ. ಇಂದು ಸ್ಥಳದಿಂದ 4 ಕಿಲೋ ಮೀಟರ್ ದೂರದಲ್ಲಿ ಯವಕನ ಶವ ಕಂಡುಬಂದಿದೆ.
WATCH : ಚಿಕ್ಕಬಳ್ಳಾಪುರದಲ್ಲಿ ಕೆರೆ ಕೋಡಿ ನೀರಿನಲ್ಲಿ ಕೊಚ್ಚಿ ಹೋದ ಯುವಕ
ಕಳೆದ ದಿನದಿಂದ ಹಗಲು ರಾತ್ರಿ ಎನ್ನದೇ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ಶವವನ್ನು ನೀರಿನಿಂದ ಹೊರತೆಗೆದ ರಕ್ಷಣಾ ಸಿಬ್ಬಂದಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.