ETV Bharat / state

9ನೇ ತಾರೀಖಿನ ನಂತರ ಅಧಿಕಾರ ನನ್ನ ಕೈಗೆ ಬರುತ್ತೆ : ಕುಮಾರಸ್ವಾಮಿ - ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ಆಕ್ರೋಶ

ಸಿದ್ದರಾಮಯ್ಯ 53 ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದಾರೆ. ಆದ್ರೆ ಅಲ್ಲಿಗೆ ಯಾವುದೇ ಬಿಡಿಗಾಸು ಬಿಡುಗಡೆಯಾಗಿಲ್ಲ, ಮಂಚೇನಹಳ್ಳಿ ತಾಲೂಕಾಗಲು ಎಷ್ಟು ವರ್ಷ ಬೇಕೊ ಗೊತ್ತಿಲ್ಲ. ಆದ್ರೆ 9 ನೇ ತಾರೀಖಿನ ನಂತ್ರ ಮತ್ತೆ ನನ್ನ ಕೈಗೆ ಅಧಿಕಾರ ಬರುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಮುನ್ಸೂಚನೆಯನ್ನು ನೀಡಿದ್ದಾರೆ.

kumaraswamy
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
author img

By

Published : Dec 2, 2019, 9:09 PM IST

Updated : Dec 2, 2019, 11:57 PM IST

ಚಿಕ್ಕಬಳ್ಳಾಪುರ: ಮೆಡಿಕಲ್ ಕಾಲೇಜು ಕಟ್ಟೋದೆ ದೊಡ್ಡದು ಅಂತ ಪ್ರಚಾರ ತಗೋತಿದಾರೆ. ಸಿದ್ದರಾಮಯ್ಯ ಮೆಡಿಕಲ್ ಕಾಲೇಜು ನೀಡಿದ್ರು. ಆದರೆ ಸಿದ್ದರಾಮಯ್ಯ ಹಣ ನೀಡಿಲ್ಲ ಎಂದು ಹೆಚ್​.ಡಿ. ಕುಮಾರಸ್ವಾಮಿ ಆರೋಪಿಸಿದರು.

ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಹೆಚ್​.ಡಿ. ಕುಮಾರಸ್ವಾಮಿ, ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಕೇಂದ್ರವನ್ನು ಕೊಟ್ಟಿದ್ದೇನೆ, ತಾಲೂಕು ಕೇಂದ್ರ ಯಾವ ದೊಡ್ಡ ವಿಷಯ. ಸಿದ್ದರಾಮಯ್ಯ 53 ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿದ್ದಾರೆ. ಆದ್ರೆ ಅಲ್ಲಿಗೆ ಯಾವುದೇ ಬಿಡಿಗಾಸು ಬಿಡುಗಡೆಯಾಗಿಲ್ಲ, ಮಂಚೇನಹಳ್ಳಿ ತಾಲೂಕಾಗಲು ಎಷ್ಟು ವರ್ಷ ಬೇಕೊ ಗೊತ್ತಿಲ್ಲ. ಆದ್ರೆ 9ನೇ ತಾರೀಖಿನ ನಂತ್ರ ಮತ್ತೆ ನನ್ನ ಕೈಗೆ ಅಧಿಕಾರ ಬರುತ್ತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಮುನ್ಸೂಚನೆಯನ್ನು ನೀಡಿದರು.

ಮಾಜಿ ಸಿಎಂ ಕುಮಾರಸ್ವಾಮಿ

ನಗರದಲ್ಲಿ ಇಂದು ಜೆಡಿಎಸ್ ಅಭ್ಯರ್ಥಿ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಮತ ಯಾಚಿಸಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಮನೆ ಬಳಿ ಬರುವವರು ಯಾರೂ ಶ್ರೀಮಂತರಲ್ಲ, ಬೆಳಗ್ಗೆ ಆದರೆ ಬರುವವರು ಹಲವಾರು ಬಡ ಹೆಣ್ಣು ಮಕ್ಕಳು, ಚಿಕ್ಕ ಚಿಕ್ಕ ಮಕ್ಕಳನ್ನ ಎತ್ತಿಕೊಂಡು ಬರ್ತಾರೆ. ಹಾಗಾಗಿ ಈ ರಾಜ್ಯದಲ್ಲಿ ರೈತರ ಪರವಾದ, ಬಡವರ ಪರವಾದ ಸರ್ಕಾರವನ್ನು ಪುನಃ ತರುವುದಕ್ಕೆ ನೀವು ಭತ್ತದ ತೆನೆ ಹೊತ್ತಿರುವ ಮಹಿಳೆ ಗುರುತಿನ ಅಭ್ಯರ್ಥಿ ರಾಧಾಕೃಷ್ಣನ್ ಅವರಿಗೆ ಮತವನ್ನು ಹಾಕಿ ಆಶೀರ್ವದಿಸಿ ಎಂದು ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿಕೊಂಡರು

ಅಲ್ಲದೇ, ನಮ್ಮ ಪಕ್ಷದ ಲಿಂಗಾಯತ ಅಭ್ಯರ್ಥಿ ಮೂಲತಃ ಒಬ್ಬ ರೈತ ಕುಟುಂಬದವರಾಗಿದ್ದು, ಸರಳ ಸಜ್ಜನಿಕೆಯ ವ್ಯಕ್ತಿ, ಇವರ ಬಳಿ ಹಣವಿಲ್ಲ. ಇವತ್ತು ಲಿಂಗಾಯತ ಸಮುದಾಯದ ಹಲವಾರು ರೈತರು ಮಳೆಯ ಹೊಡೆತಕ್ಕೆ ಸಿಲುಕಿ ರಸ್ತೆ ಮೇಲೆ ವಾಸ ಮಾಡುವಂತಾಗಿದೆ. ಆದ್ರೆ ಯಡಿಯೂರಪ್ಪಗೆ ಅವರ ಮೇಲೆ ಯಾವುದೇ ಕರುಣೆ ಇಲ್ಲದಂತಾಗಿದೆ, ಅನರ್ಹ ಶಾಸಕರನ್ನು ಗೆಲ್ಲಿಸಿಕೊಡಿ ಎಂದು ಅವರು ಕೇಳಿಕೊಳ್ಳುತ್ತಿದ್ದಾರೆ, ಇವರು ಕೇವಲ ಮತಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಕಾಕ್​ನಲ್ಲಿರುವ 80.000 ಸಾವಿರ ಬಡ ರೈತರ ನೋವಿನ ಮೇಲೆ ಇವರು ಅಧಿಕಾರವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ, ಹಾಗಾಗಿ ಲಿಂಗಾಯಿತ ಸಮುದಾಯ ಒಂದಾಗಬೇಕಿದೆ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.

Intro:ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅನರ್ಹ ಶಾಸಕ ಸುಧಾಕರ್ ವಿರುದ್ದ ಕಿಡಿಕಾರಿದ್ದಾರೆ.Body:ಸುಧಾಕರ್ ಅನಿತಕ್ಕನ ನೆಂಟ‌ ಅಂತಾನೆ.ನಾನು ಮುಂದಿನ‌ ಚುನಾವಣೆಯಲ್ಲಿ ನಿಮ್ಮ ಪಕ್ಷ‌ಸೇರ್ತೇನೆ ಅಂತ್ತಿದ್ದ .ನನಗೆ ಯಾವುದಾದ್ರೂ ಒಂದು ಖಾತೆ ಕೊಟ್ಟು ಬಿಡಿ ಅಂತಿದ್ದ ಆದರೆ ಈಗ ಸರ್ಕಾರ ಉರಳಿಸಲು ಕಾರಣನಾಗಿ ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾನೆ ಎಂದು ಕಿಡಿಕಾರಿದ್ರು..

ಮೆಡಿಕಲ್ ಕಾಲೇಜು ಕಟ್ಟೋದೆ ದೊಡ್ಡ ಪ್ರಚಾರ ತಗೋತಿದಾರೆ.ಕಟ್ಟೋದೆ ದೊಡ್ಡ ವಿಷಯ ಅಲ್ಲ, ಸಿದ್ದರಾಮಯ್ಯ ಮೆಡಿಕಲ್ ಕಾಲೇಜು ನೀಡಿದ್ರು.ಆದರೆ ಸಿದ್ದರಾಮಯ್ಯ ಹಣ ನೀಡಿಲ್ಲ ನಾನು ಅನುಧಾನ ಕೊಟ್ಟೆ ಆದರೆ ಈಗ ಕುಮಾರಸ್ವಾಮಿ ಗೆ ತಿಳುವಳಿಕೆ ಇಲ್ಲ ಅಂತ್ತೀದ್ದಾನೆ.

ಟಿವಿಯವರು ನನ್ನ ಅಫ್ರಿಷಿಯೇಟ್ ಮಾಡ್ದೆ ಇದ್ರು ಪರವಾಗಿಲ್ಲ.ಬಡವರಿಗೆ ಒಳ್ಳೆಯದಾಗೋ ಸುದ್ದಿ ತೋರ್ತೀರ ಅದಕ್ಕೆ ನಾನು ಟೀವಿ ನೋಡೋದು.ನಾನು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೊಟ್ಟಿದ್ದೇನೆ, ತಾಲ್ಲೂಕು ಯಾವ ದೊಡ್ಡ ವಿಷಯ. ಸಿದ್ದರಾಮಯ್ಯ 53 ತಾಲ್ಲೂಕು ಮಾಡಿದ್ರು.ಯಾವ್ದು ಅನುಷ್ಠಾನ ಆಗಿದೆ, ಮಂಚೇನಹಳ್ಳಿ ತಾಲೂಕಾಗಲು ಎಷ್ಟು ವರ್ಷ ಬೇಕೊ ಗೊತ್ತಿಲ್ಲ ಎಂದು ನೂತನ ತಾಲೂಕಿನ ಬಗ್ಗೆ ವ್ಯಖ್ಯಾನಿಸಿದ್ರು..
9 ನೇ ತಾರೀಖು ಮತ್ತೆ ನನ್ನ ಕೈಗೆ ಅಧಿಕಾರ ಬರುತ್ತೆ ಎಂದು ಸಮ್ಮಿಶ್ರ ಸರ್ಕಾರದ ಮುನ್ಸೂಚನೆ ಯನ್ನು ನೀಡಿದ ಕುಮಾರಸ್ವಾಮಿ.ಜೆಡಿಎಸ್ ರೈತರ ಪಕ್ಷ, ಅಪ್ಪ ಮಕ್ಕಳ ಪಕ್ಷ ಅಲ್ಲ.ಜೆಡಿಎಸ್ ಬೇರು ರೈತ ಬುಡದಲ್ಲಿದೆ, ಅದನ್ನ ಅಷ್ಟು ಸುಲಭವಾಗಿ ಅಳಿಸಕ್ಕೆ ಯಾರಿಂದಲೂ ಸಾಧ್ಯವಾಗಲ್ಲಾ ಎಂದು ತಿರುಗೇಟು ನೀಡಿದ್ರು. ಆಗಲಿಲ್ಲ

ಯಡಿಯೂರಪ್ಪ ಒಂದು ಮಂತ್ರಿ ಸ್ಥಾನಕ್ಕಾಗಿ ನನ್ನ ಮನೆ ಬಾಗಿಲಿಗೆ ಬಂದವರು.ನಾನು ಯಾರ ಮನೆ ಬಾಗಿಲಿಗೂ ಹೋಗಲಿಲ್ಲ.ಕಾಂಗ್ರೇಸ್, ಬಿಜೆಪಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು.ಕೊಡೆ ಹಿಡಿಯೋ ಪಕ್ಷ ನಮ್ಮದಲ್ಲಾ.ಶ್ರೀನಿವಾಸ್ ಪ್ರಸಾದ್ ಬಳಿ ಹೋಗಿ ಕೊಡೆ ಹಿಡಿಯಲಿಲ್ಲ.ಬಿಸಿಲಲ್ಲಿ ನಿಂತಿದೀಯ ಬಾರಪ್ಪ ಕೊಡೆ ಹಿಡೀತೀನಿ ಅಂತ ಹೋಗಿಲ್ಲ.ಸಿದ್ದರಾಮಯ್ಯ ಅಧಿಕಾರದಲ್ಲಿ ಮನೆ ಕೊಟ್ಟಿದೆ ಕೊಟ್ಟದ್ದು.29 ಸಾವಿರ ಕೋಟಿ ಬೇಕಾಯ್ತು, 22 ಲಕ್ಷ ಮನೆ ಕಟ್ಟಲು 3 ಸಾವಿರ ಕೋಟಿ ಕೊಟ್ರು.ಚುನಾವಣೆಯಲ್ಲಿ ಮತಕ್ಕಾಗಿ 4 ರಿಂದ 7 ಕೆಜಿ ಅಕ್ಕಿ ಘೋಷಣೆ ಮಾಡಿದ್ರು ಆದರೆ ಅದಕ್ಕೆಲ್ಲಾ 800 ಕೋಟಿ ಹೆಚ್ಚುವರಿ ಹಣ ಬೇಕಾಗಿತ್ತು.ಸಿದ್ದರಾಮಯ್ಯ ಒಂದು ಕೆಜಿ ಹಕ್ಕಿ ಕಮ್ಮಿ‌ಕೊಡಲಿಕ್ಕೆ ಆಗಲ್ಲ ಅಂದ್ರು

ನನಗೆ ಸ್ವತಂತ್ರ ಸರ್ಕಾರ ಕೊಟ್ರ, ನಿಮ್ಮನ್ನ ಬೆಳಸಲಿಕ್ಕೆ ಏನು ಮಾಡ್ಬೇಕು ಅಂತ ಗೊತ್ತಿದೆ ನಿಮ್ಮ ಹಣ ಹೊಡೆದು ಅಂತಸ್ತಿನ ಮೆಲೆ ಅಂತಸ್ತು ಆಸ್ತಿ ಕೆಳಲಿಲ್ಲ: ನನ್ನ ಅದೃಷ್ಟ,

ಹಣಕ್ಕಾಗಿ, ಆಮಿಷ ಗಳಿಗೆ ಒಳಗಾಗ ಬೇಡಿ

ಚಿಕ್ಕಬಳ್ಳಾಪುರ ದಲ್ಲಿ ಆಲೂಗೆಡ್ಡೆ, ದ್ರಾಕ್ಷಿ ನೋಡಲಿಕ್ಕೆ ಆಗ್ತಿಲ್ಲ

ನಮ್ಮ ತಂದೆ ಹೊಲದಲ್ಲಿ ಕೆಲಸ ಮಾಡ್ತಾ ಶಾಸಕ ಆಗಿದ್ದಾಗ್ಲೂ ಇಲ್ಲಿಗೆ ಬರ್ತಿದ್ರು.ಇಲ್ಲಿಂದ ಆಲೂಗೆಡ್ಡೆ ತೆಗೆದುಕೊಂಡು ಹೋಗ್ತಿದ್ವಿ.ನಮ್ಮ ತಂದೆಗೂ ಈ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ ಎಂದು ಜಿಲ್ಲೆಯ ಜೊತೆಗಿನ ಸಂಬಂದದ ಬಗ್ಗೆ ತಿಳಿಸಿದ್ರು.

ಮಾಜಿ ಶಾಸಕ ಬಚ್ಚೇಗೌಡರಿಗೆ ಐವತ್ತು ಕೋಟಿ ಆಫರ್ ನೀಡಿದ್ರು ಆದರೆ ಮಾರಾಟ ಆಗುವ ವ್ಯಕ್ತಿ ಅಲ್ಲ ಬಚ್ಚೇಗೌಡ ಅಲ್ಲಾ.ಬಿಜೆಪಿ ಅಭ್ಯರ್ಥಿ ಏನೇ ಕೊಟ್ರು ತಗೋಳಿ, ಓಟು ಜೆಡಿಎಸ್ ಗೆ ಹಾಕಿ ರಾಧಾಕೃಷ್ಣ ರಿಗೆ ಮತ ನೀಡಿ ಗೆಲ್ಲಿಸಿ, ನನ್ನನ್ನ ಉಳಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.Conclusion:
Last Updated : Dec 2, 2019, 11:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.