ಚಿಕ್ಕಬಳ್ಳಾಪುರ: ಪ್ರಪಂಚದಲ್ಲಿ ಕೊರೊನಾ ಸೋಂಕು ಸೃಷ್ಟಿ ಮಾಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ. ಭಾರತದಲ್ಲಿ ದಿನೇ ದಿನೇ ಸೊಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಇನ್ನೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡಿದಿರಲು ಗ್ರಾಮಸ್ಥರು ವಿಶೇಷ ಪೂಜೆ ಮಾಡಿದ್ದಾರೆ. ಗೌರಿಬಿದನೂರು ತಾಲೂಕಿನ ಬಂದಾರ್ಲಹಳ್ಳಿಯಲ್ಲಿ ತಮ್ಮ ಗ್ರಾಮಕ್ಕೆ ಕೊರೊನಾ ಬರಬಾರದೆಂದು, ಗ್ರಾಮದಲ್ಲಿ ವಿಶಿಷ್ಟವಾಗಿ ಪೂಜೆಯನ್ನು ಮಾಡಿದ್ದಾರೆ.
ನೂರಾರು ವರ್ಷಗಳ ಹಿಂದೆ ಮಹಾಮಾರಿ ರೋಗಗಳಾದ ಪ್ಲೇಗ್, ಕಾಲರಾ ರೋಗಗಳು ಬಂದಾಗ ಸಾಕಷ್ಟು ಪೂಜೆ ಪುನಾಸ್ಕಾರಗಳನ್ನು ಮಾಡುತ್ತಿದ್ದರು. ಸದ್ಯ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ತಮ್ಮ ಗ್ರಾಮಕ್ಕೆ ಕೊರೊನಾ ಸೋಂಕು ಹರಡದಂತೆ ಬೇವಿನ ಮರಕ್ಕೆ ಅಜ್ಜಿಯೊಬ್ಬರು ಪೂಜೆಯನ್ನು ನೆರವೇರಿಸಿದ್ದಾರೆ.
ಪೂರ್ವಜರು ಗ್ರಾಮದಲ್ಲಿ ಪ್ಲೇಗ್ಕಾ, ಕಾಲರಾದಂತಹ ವ್ಯಾಧಿಗಳು ಬಂದಾಗ ಗ್ರಾಮದವರೆಲ್ಲ ಸೇರಿ ಪೂಜೆ ಮಾಡಲಾಗುತ್ತಿತ್ತು. ಸದ್ಯ ಅದೇ ನಂಬಿಕೆಯನ್ನು ಬರ್ದಾಲಹಳ್ಳಿ ಗ್ರಾಮಸ್ಥರು ಈಗ ಮುಂದುವರೆಸಿದ್ದಾರೆ.
ಗ್ರಾಮದ ಪುರುಷರೆಲ್ಲರು ಸೇರಿ ಹೊರವಲಯದ ಪೂರ್ವ ದಿಕ್ಕಿನ ಬೇವಿನ ಮರ ಸುತ್ತಲೂ ವಿಶೇಷ ರೀತಿಯಲ್ಲಿ ಪೂಜೆ ಕಾರ್ಯಗಳನ್ನು ಕೈಗೊಂಡಿದ್ದರು. ತಮ್ಮ ಮನೆಯಿಂದ ಪ್ರತಿಯೊಬ್ಬರು ಹೋಳಿಗೆ, ಮೊಸರನ್ನ, ಅರಿಶಿನ ಕುಂಕುಮ, ದೀಪ ಹಾಗೂ ಬಂಗಾರವನ್ನು ತಂದು, ಮರದ ಕೆಳಗೆ ಇಟ್ಟು ಹೂವುಗಳಿಂದ ಮರವನ್ನು ಅಲಂಕರಿಸಿದ್ದಾರೆ. ಬಳಿಕ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಎಡೆ ಹಾಕಿ ಅಲ್ಲೇ ಬಿಟ್ಟು ಹಿಂತಿರುಗದೆ ತಮ್ಮ ಗ್ರಾಮಕ್ಕೆ ಹೊರಡಿದ್ದಾರೆ.
ಹಿಂದಿನ ಕಾಲದಲ್ಲಿ ಈ ರೀತಿ ಪೂಜೆ ಮಾಡಲಾಗುತ್ತಿತ್ತು. ಈ ರೀತಿ ಮಾಡಿದರೆ ಗ್ರಾಮಕ್ಕೆ ಯಾವುದೇ ರೋಗ ಬರುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.