ETV Bharat / state

ಗಿಡ-ಮರ ಬೆಳೆಸಿ, ತಮ್ಮ ತನವನ್ನು ಉಳಿಸಿ: ಪಂಕಜಾರೆಡ್ಡಿ

author img

By

Published : Jun 5, 2020, 11:30 PM IST

ನ್ಯಾಷನಲ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚಾರಣೆ ಆಯೋಜಿಸಲಾಗಿತ್ತು. ಈ ವೇಳೆ ಗಿಡ-ಮರ ಬೆಳೆಸುವುದರ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ಈ ಮೂಲಕ ನಮ್ಮ ತನವನ್ನು ಉಳಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಂಕಜಾರೆಡ್ಡಿ ತಿಳಿಸಿದರು.

World environment day
World environment day

ಬಾಗೇಪಲ್ಲಿ: ಗಿಡ-ಮರ ಬೆಳೆಸುವುದರ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ಈ ಮೂಲಕ ನಮ್ಮ ತನವನ್ನು ಉಳಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಂಕಜಾರೆಡ್ಡಿ ತಿಳಿಸಿದರು.

ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚಾರಣೆಯಲ್ಲಿ, ಗಿಡ ನೆಟ್ಟು ಅದಕ್ಕೆ ನೀರುಣಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಲೆನಾಡಿನ ಪ್ರದೇಶದಲ್ಲಿ ಪ್ರತಿ ಮನೆಯ ಮುಂದೆ ಗಿಡ-ಮರ ಬೆಳೆಸುವಲ್ಲಿ ಹೆಚ್ಚಿನ ಕಾಳಜಿ ತೋರಿಸಿ ಪರಿಸರ ಕಾಪಾಡುತ್ತಾರೆ. ಆದರೆ ತಾಲೂಕಿನಲ್ಲಿ ಪುರಸಭೆ ವತಿಯಿಂದ ನಾವೇ ಗಿಡ ಕೊಟ್ಟರೂ ಕೂಡಾ ಅದನ್ನು ನೆಟ್ಟು ಪೋಷಿಸಲು ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಕೇಳಿದರೆ, ಇಲ್ಲಿ ನೀರಿನ ಅಭಾವ ಜಾಸ್ತಿ ಎಂದು ಹೇಳುತ್ತಾರೆ. ಆದರೆ ನಾವು ಪ್ರತಿನಿತ್ಯ ಕೈ ತೊಳೆಯುವಾಗ ಪೋಲು ಮಾಡುವ ನೀರನ್ನೇ ಗಿಡದ ಮೇಲೆ ಹಾಕಿದರೂ ಸಾಕು, ಹಾಗಾಗಿ ಇನ್ನಾದರೂ ಜಾಗೃತರಾಗಬೇಕು ಎಂದು ತಿಳಿಸಿದರು.

World environment day
ವಿಶ್ವ ಪರಿಸರ ದಿನಾಚರಣೆ

ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್. ಸತ್ಯನಾರಾಯಣರೆಡ್ಡಿ ಮಾತನಾಡಿ, ಪ್ರತಿಯೊಬ್ಬರೂ ಪ್ರಾಣಾಯಾಮ ಮಾಡಬೇಕು. ಆರೋಗ್ಯದಲ್ಲಿ ಗಟ್ಟಿತನ ಕಾಪಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ ಎಂದು ಎಚ್ಚರಿಸಿದರು. ಜೊತೆಗೆ ನಮ್ಮ ಜೀವನ ಶೈಲಿಯನ್ನು ಮೊದಲು ಬದಲಿಸಿಕೊಳ್ಳಬೇಕು. ಪ್ರಕೃತಿಯ ಜೊತೆಗೆ ನಾವು ಹೊಂದಾಣಿಕೆ ಯಾಗಬೇಕು ಎಂದು ತಿಳಿಸಿದರು.

ಇನ್ನೂ ತಾಲೂಕಿನಲ್ಲಿ 26 ಕೊರೊನಾ ಸೋಂಕಿತ ಪ್ರಕರಣಗಳಿದ್ದು, ಇಂದಿಗೂ ಅವರಲ್ಲಿ ಚೇತರಿಕೆ ಕಾಣಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರು ವಿಧಿಯಿಲ್ಲದೆ ಕೊರೊನಾದೊಂದಿಗೆ ಜೀವಿಸಬೇಕು. ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಪಾಲಿಸಿ, ಎಚ್ಚರಿಕೆ ವಹಿಸಬೇಕಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.