ETV Bharat / state

ಚಿಂತಾಮಣಿಯಲ್ಲಿ ಮನೆ ಹಿಂಭಾಗದಲ್ಲೇ ಗಾಂಜಾ ಬೆಳೆದಿದ್ದ ಮಹಿಳೆ ಆರೆಸ್ಟ್​ - ಮನೆಯ ಹಿಂಭಾಗ ಗಾಂಜಾ

ಯಾರಿಗೂ ಗೊತ್ತಾಗದ ಹಾಗೆ ಮನೆಯ ಹಿಂಭಾಗದಲ್ಲಿ ಗಾಂಜಾ ಗಿಡ ಬೆಳೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

marijuana grower arres
ಗಾಂಜಾ ಗಿಡವನ್ನು ಪೊಲೀಸರು ತೆರವುಗೊಳಿಸಿದರು
author img

By

Published : Aug 1, 2021, 11:52 AM IST

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಇರಗಂಪಲ್ಲಿ ಗ್ರಾಮದಲ್ಲಿ ಮನೆಯ ಹಿಂಭಾಗ ಗಾಂಜಾ ಗಿಡ ಬೆಳೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಮ್ಮ ಬಂಧಿತ ಮಹಿಳೆ.

ಮಹಿಳೆ ಮನೆಯ ಹಿಂಭಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಮಾಹಿತಿ ಪಡೆದ ಬಟ್ಲಹಳ್ಳಿ ಠಾಣೆಯ ಸಬ್​ ಇನ್ಸ್​​ಪೆಕ್ಟರ್​​ ನಾರಾಯಣ್ ಸ್ವಾಮಿ ಮತ್ತು ತಂಡ ದಾಳಿ ನಡೆಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದು, ಆರೋಪಿ ವಿಜಯಮ್ಮಳನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

ಗಾಂಜಾ ಗಿಡವನ್ನು ಪೊಲೀಸರು ತೆರವುಗೊಳಿಸಿದರು

ಓದಿ : ಸಾಲಗಾರರ ಕಾಟದಿಂದ ಸರಗಳ್ಳತನಕ್ಕೆ ಇಳಿದಿದ್ದ ಎಂಬಿಎ ಪದವೀಧರ: ಬಂಧನ

ಜಿಲ್ಲೆಯಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬ್ಬಂದಿಗೆ ಸೂಚಿಸಿದ್ದಾರೆ. ಹಾಗಾಗಿ, ಪೊಲೀಸರು ಗಾಂಜಾ ಮಾರಾಟಗಾರರ ಮೇಲೆ ನಿಗಾ ಇಟ್ಟಿದ್ದು, ಯಾರಿಗೂ ಗೊತ್ತಾಗದ ಹಾಗೆ ಗಾಂಜಾ ಬೆಳೆಯುತ್ತಿರುವವರನ್ನು ಪತ್ತೆ ಹೆಚ್ಚುವ ಕಾರ್ಯ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.