ETV Bharat / state

ಪ್ರೇಯಸಿ ಜೊತೆಗಿನ ಕ್ಷಣದ ಫೋಟೋ ಕಳಿಸಿದ ಗಂಡ: ಮನನೊಂದು ಹೆಂಡತಿ ಆತ್ಮಹತ್ಯೆ

ಪತಿಯು ಪ್ರೇಯಸಿಯೊಂದಿಗೆ ಸುತ್ತಾಡುತ್ತಿರುವುದರಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

wife-committed-suicide-in-chikkaballapur
ಪ್ರೇಯಸಿ ಜೊತೆ ಗಂಡ ಎಂಜಾಯ್ : ತವರು ಮನೆಯಲ್ಲಿ ಹೆಂಡತಿ ಆತ್ಮಹತ್ಯೆ
author img

By

Published : Oct 12, 2022, 8:42 PM IST

Updated : Oct 13, 2022, 7:10 PM IST

ಚಿಕ್ಕಬಳ್ಳಾಪುರ : ಪತಿಯು ತನ್ನ ಪ್ರೇಯಸಿಯೊಂದಿಗೆ ಕಾಲ ಕಳೆಯುತ್ತಿರುವುದರಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿ ಗ್ರಾಮದ ಮೋನಿಕಾ (20) ಆತ್ಮಹತ್ಯೆ ಮಾಡಿಕೊಂಡವಳು. ಎಂಟು ತಿಂಗಳ ಹಿಂದೆ ಚಿಕ್ಕಬಳ್ಳಾಪುರ ನಗರದ ನಿವಾಸಿ ಭಾರ್ಗವ್ ಎಂಬಾತನ ಜೊತೆ ಮೋನಿಕಾ ವಿವಾಹವಾಗಿತ್ತು. ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕ್ಕಬಳ್ಳಾಪುರದ ಸಮುದಾಯ ಭವನದಲ್ಲಿ ಅದ್ಧೂರಿ ಮದುವೆ ಮಾಡಿದ್ದರು.

ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಭಾರ್ಗವ್​​ ದಸರಾ ಹಬ್ಬಕ್ಕೆ ಎಂದು ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ಆದರೆ ಬಳಿಕ ವಾಪಸ್ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಅನುಮಾನಗೊಂಡ ಮೋನಿಕಾ ಕರೆದುಕೊಂಡು ಹೋಗುವಂತೆ ಹೇಳಿದಾಗ ಇಲ್ಲಸಲ್ಲದ ಕಾರಣ ಹೇಳಿ ನುಣುಚಿಕೊಂಡಿದ್ದ.

ಈ ನಡುವೆ ಭಾರ್ಗವ್ ತನ್ನ​ ಪ್ರೇಯಸಿ ಜೊತೆ ಸುತ್ತಾಡುತ್ತಿರುವ ಫೋಟೊಗಳನ್ನು ವಾಟ್ಸ್​ಆ್ಯಪ್​ ಮೂಲಕ ಪತ್ನಿಗೆ ಕಳುಹಿಸಿದ್ದನಂತೆ. ಇದನ್ನು ಕಂಡು ದಂಗಾದ ಮೋನಿಕಾ ತವರು ಮನೆಯಲ್ಲೇ ನೇಣು ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಡ್ಯ: ಟ್ಯೂಷನ್​ಗೆ ಕರೆದು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಸಂಪ್​ಗೆ ಎಸೆದ ಕಿರಾತಕ

Last Updated : Oct 13, 2022, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.