ETV Bharat / state

ವೈರಲ್‌ ಆಗ್ತಿವೆ ಮತ ಹಾಕುವ ವಿಡಿಯೋಗಳು! ತಪ್ಪಿತಸ್ಥರ ವಿರುದ್ಧ ಕ್ರಮ ಏಕಿಲ್ಲ? - undefined

ಮತ ಹಾಕುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಲಾಗಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಮತದಾನದ ವಿಡಿಯೋಗಳ ವೈರಲ್
author img

By

Published : Apr 19, 2019, 8:24 PM IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಶೇ 76.76 ರಷ್ಟು ಮತದಾನವಾಗಿದೆ. ಆದರೆ, ಕೆಲವರು ವೋಟ್‌ ಮಾಡುತ್ತಿರುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದ ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ, ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.

ವೈರಲ್‌ ಆಗಿವೆ ಮತದಾನದ ವಿಡಿಯೋಗಳು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾರರಿಗೆ ಗುಪ್ತ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರ ಯಾವ ಪಕ್ಷ ಅಥವಾ ವ್ಯಕ್ತಿಗೆ ಮತ ಹಾಕಿದರೂ ಅದು ಆತನಿಗೆ ಮಾತ್ರ ತಿಳಿದಿರಬೇಕು. ಅದೇ ಕಾರಣಕ್ಕೆ ಚುನಾವಣಾ ಆಯೋಗ ಪ್ರತಿಬಾರಿಯೂ ಗುಪ್ತ ಮತದಾನಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಗುಪ್ತ ಮತದಾನವಾಗಬೇಕೆನ್ನುವ ಉದ್ದೇಶದಿಂದ ಮತಗಟ್ಟೆಯಲ್ಲಿಯೂ ಮತಯಂತ್ರಗಳು ಕಾಣದ ಹಾಗೆ ಮರೆಮಾಚಲಾಗುತ್ತದೆ.

ಅದರೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೆಲವರು ತಾವು ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ಮತ್ತೊಬ್ಬರಿಗೆ ತೋರಿಸುವ ಸಲುವಾಗಿ ಆ ದೃಶ್ಯಾವಳಿಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ.

ಯುಪಿಪಿ ಅಭ್ಯರ್ಥಿ ಮುನಿರಾಜು ಮತದಾನದ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ, ಪಕ್ಷದ ಕಾರ್ಯಕರ್ತರು ತಾವು ವೋಟ್ ಮಾಡಿದ ದೃಶ್ಯವನ್ನು ಸೆರೆ ಹಿಡಿದು ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್, ವಾಟ್ಸಾಪ್ ಗ್ರೂಪ್​ಗಳಲ್ಲಿ ಶೇರ್ ಮಾಡುವ ಮೂಲಕ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಚಿಕ್ಕಬಳ್ಳಾಪುರ ಲೊಕಸಭಾ ಕ್ಷೇತ್ರದಲ್ಲಿ ಈ ರೀತಿಯ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಕುರಿತು ಸಾಕಷ್ಟು ದೂರುಗಳು ಬಂದರೂ ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Intro:ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದದಲ್ಲಿ ಮತದಾನದ ವಿಡಿಯೋಗಳ ವೈರಲ್
ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ
Body:ಬೆಂಗಳೂರು ಗ್ರಾಮಾಂತರ : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದದಲ್ಲಿ ಶೇಕಡಾ 76.76 ರಷ್ಟು ಮತದಾನವಾಗಿದೆ. ಮತದಾನ ಮಾಡಿದ ಕೆಲವರು ಮತ ಹಾಕುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳ ಬೇಕಾದ ಜಿಲ್ಲಾಡಳಿತ ಮಾತ್ರ ಕೈಕಟ್ಟಿ ಕುಳಿತ್ತಿದೆ.

ಗುಪ್ತ ಮತದಾನ ವ್ಯವಸ್ಥೆ ನಮ್ಮಲ್ಲಿದ್ದು . ನಾವು ಯಾವ ಪಕ್ಷ ಅಥವಾ ವ್ಯಕ್ತಿಗೆ ಮತ ಹಾಕಿದರು ಅದು ಮತದಾರನಿಗೆ ಮಾತ್ರ ತಿಳಿದಿರಬೇಕು. ಮತ್ತೊಬ್ಬ ವ್ಯಕ್ತಿಗೆ ಯಾರಿಗೆ ಮತ ಹಾಕಿದ್ದಾರೆ ಅನ್ನುವ ಬಗ್ಗೆ ತಿಳಿಯ ಬಾರದು. ಅದೇ ಕಾರಣಕ್ಕೆ ಚುನಾವಣಾ ಅಯೋಗ ಗುಪ್ತಮತದಾನಕ್ಕೆ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಂಡಿದೆ. ಮತಗಟ್ಟೆಯಲ್ಲಿಯು ಸಹ ಗುಪ್ತ ಮತದಾನಕ್ಕೆ ರಟ್ಟಿನ ಶೀಟ್ ನಿಂದ ಮರೆಮಾಡುವ ವ್ಯವಸ್ಥೆ ಮಾಡಿದೆ. ಅದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ದಲ್ಲಿ ಕೆಲವರು ತಾವು ಯಾರಿಗೆ ಮತ ಹಾಕಿದ್ದೆವೆ ಅನ್ನೊದನ್ನು ಮತ್ತೂಬ್ಬರಿಗೆ ತೋರಿಸುವ ಕಾರಣಕ್ಕೆ ಮೊಬೈಲ್ ನಲ್ಲಿ ಸೆರೆ ಹಿಡಿದು ಆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ನಿಯಮ ಉಲ್ಲಂಖನೆ ಮಾಡಿದ್ದಾರೆ. ಈ ಕುರಿತು ಸಾಕಷ್ಟು ದೂರು ಬಂದರು ಸಹ ಜಿಲ್ಲಾಡಳಿತ ತಪಿತಸ್ಥರ ವಿರುದ್ಧ ಕ್ರಮ ತೆಗೆದು ಕೊಳ್ಳುವ ಗೋಜಿಗೆ ಹೋಗಿಲ್ಲ.

ನಿನ್ನೆ ನಡೆದ ಚುನಾವಣೆಯಲ್ಲಿ ಸ್ವತಃ ಯು.ಪಿ.ಪಿ ಅಭ್ಯರ್ಥಿ ಮುನಿರಾಜು ರಿಂದ ಮತದಾನದ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು, ಜೊತೆಗೆ ಪಕ್ಷದ ಕಾರ್ಯಕರ್ತರು ತಾವು ಓಟ್ ಮಾಡಿದ ದೃಶ್ಯವನ್ನು ಸೆರೆ ಹಿಡಿದು ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್, ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿದರು. ಇದಕ್ಕೆ ಸಂಬಂಧಪಟ್ಟಂತೆ
ಚಿಕ್ಕಬಳ್ಳಾಪುರ ಲೊಕಸಭಾ ಕ್ಷೇತ್ರದಲ್ಲೇ ಸುಮಾರು 15 ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವ ಹಂಗಿಲ್ಲದೆ ಮತದಾನದ ದೃಶ್ಯಗಳು ಹರಿದಾಡುತ್ತಿವೆ. ಅದರೆ ಇದರ ವಿರುದ್ಧ ಕ್ರಮ ಕೈಗೊಳ್ಳದೆ ಜಿಲ್ಲಾಡಳಿತದ ನಿರ್ಲಕ್ಷ್ಯ ವಹಿಸಿದೆ ಇದರ ವಿರುದ್ದ ಜನರು ಆಕ್ರೊಶ ವ್ಯಕ್ತ ಪಡಿಸಿದ್ದಾರೆ.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.