ETV Bharat / state

ಮುನ್ಸೂಚನೆಯಿಲ್ಲದೇ ವಿದುರಾಶ್ವತ್ಥ ದನಗಳ ಜಾತ್ರೆಗೆ ನಿರ್ಬಂಧ: ಅಧಿಕಾರಿಗಳ ನಡೆಗೆ ರೈತರು ಗರಂ

ಮುನ್ಸೂಚನೆಯಿಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ದನಗಳ ಜಾತ್ರೆಗೆ ನಿರ್ಬಂಧ ಹೇರಿದ್ದರಿಂದ ರೈತರು ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Vidurashvatha cattle fair
ಮುನ್ಸೂಚನೆಯಿಲ್ಲದೇ ವಿದುರಾಶ್ವತ್ಥ ದನಗಳ ಜಾತ್ರೆಗೆ ನಿರ್ಬಂಧ: ಅಧಿಕಾರಿಗಳ ನಡೆಗೆ ರೈತರು ಗರಂ
author img

By

Published : Apr 17, 2021, 1:09 PM IST

ಚಿಕ್ಕಬಳ್ಳಾಪುರ: ಕರ್ನಾಟಕದಲ್ಲೇ ಅತಿ ದೊಡ್ಡ ದನಗಳ ಜಾತ್ರೆಯೆಂದು ಪ್ರಸಿದ್ದಿ ಪಡೆದ ವಿದುರಾಶ್ವತ್ಥ ದನಗಳ ಜಾತ್ರೆಯಲ್ಲಿ ರೈತರು ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ‌ ನಡೆದಿದೆ.

ಮುನ್ಸೂಚನೆಯಿಲ್ಲದೇ ವಿದುರಾಶ್ವತ್ಥ ದನಗಳ ಜಾತ್ರೆಗೆ ನಿರ್ಬಂಧ: ಅಧಿಕಾರಿಗಳ ನಡೆಗೆ ರೈತರು ಗರಂ

ದೊಡ್ಡಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದುರಾಶ್ವತ್ಥ ದನಗಳ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಜಾತ್ರೆಯಾಗಿದೆ. ಪ್ರತಿ ವರ್ಷವು ದನಗಳ ವಿಜೃಂಭಣೆಯಿಂದ ನಡೆಯುತ್ತಿದ್ದು, ಕಳೆದ ವರ್ಷ ಕೊರೊನಾ ಸೋಂಕು ಹಿನ್ನೆಲೆ ಜಾತ್ರೆ ರದ್ದು ಮಾಡಲಾಗಿತ್ತು. ಸದ್ಯ, ದೇಶದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದು, ಸೋಂಕು ಹರಡದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದೆ. ಯಾವುದೇ ಜಾತ್ರೆ, ಸಮಾರಂಭ, ಹಬ್ಬ ಹರಿದಿನಗಳನ್ನು ಗುಂಪಾಗಿ ಆಚರಿಸದಂತೆ ಸುತ್ತೋಲೆ ಹೊರಡಿಸಿದೆ.

ಆದರೆ, ವಿದುರಾಶ್ವತ್ಥ ಕ್ಷೇತ್ರವು ಮುಜರಾಯಿ ಇಲಾಖೆಯಡಿಯಲ್ಲಿದ್ದು, ಇಲ್ಲಿನ ಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಮರಿರಾಜು ಸರ್ಕಾರ ಹೊರಡಿಸಿರುವ ಆದೇಶಗಳನ್ನುಗಾಳಿಗೆ ತೂರಿ ಶುಕ್ರವಾರದಿಂದ ಧನಗಳ ಜಾತ್ರೆ ನಡೆಸುತ್ತಿದ್ದಾರೆ. ಈ ಜಾತ್ರೆಗೆ ಹೊರ ರಾಜ್ಯಗಳಿಂದ ಹಾಗೂ ರಾಜ್ಯದ ಮೂಲೆ - ಮೂಲೆಗಳಿಂದ ದನಗಳನ್ನು ಕೊಳ್ಳಲು ಹಾಗೂ ಮಾರಾಟ ಮಾಡಲು 5 ಸಾವಿರಕ್ಕೂ ಹೆಚ್ಚು ರೈತರು ಜಮಾಯಿಸಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಜಾತ್ರೆಗೆ ಬಂದಿರುವ ರೈತರಿಗೆ ಸರ್ಕಾರ ಹೊರಡಿಸಿರುವ ಆದೇಶದ ಬಗ್ಗೆ ಅರಿವು ಮೂಡಿಸಿ ಜಾತ್ರೆಯಿಂದ ತಮ್ಮ ಊರುಗಳಿಗೆ ತೆರಳಲು ಮನವಿ ಮಾಡಿಕೊಂಡರು.

ದೂರದ ಊರಿಗಳಿಂದ ಬಂದ ರೈತರನ್ನು ಏಕಾಏಕಿ ತಮ್ಮ ಊರುಗಳಿಗೆ ತೆರಳಲು ತಿಳಿಸುತ್ತಿದ್ದಾರೆ. ರಾಜ್ಯದಲ್ಲೇ ದೊಡ್ಡ ಜಾತ್ರೆಯಾದ್ದರಿಂದ ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ನೆರೆ ರಾಜ್ಯಗಳಿಂದಲೂ ರೈತರು ತಮ್ಮ ದನಗಳನ್ನು ತಂದಿದ್ದಾರೆ. ಸಮೀಪ ಇರುವವರು ವಾಹನಗಳ ವ್ಯವಸ್ಥೆ ಮಾಡಿಕೊಂಡು ಹೋಗುತ್ತಾರೆ. ಆದರೆ, ದೂರದ ಸ್ಥಳಗಳಿಂದ ಬಂದವರು ಯಾವ ರೀತಿ ಮನೆಗಳನ್ನು ಸೇರಬೇಕೆಂದು ಅಧಿಕಾರಿಗಳ ವಿರುದ್ಧ ರೈತರು ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಓದಿ: ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿಗೆ ಕೊರೊನಾ ದೃಢ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.