ಚಿಕ್ಕಬಳ್ಳಾಪುರ: ವಾಲ್ಮೀಕಿ ಸಮುದಾಯದ ಯುವಕರು, ಸಮಾಜ ಕಲ್ಯಾಣಾಧಿಕಾರಿಯ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.
ತಾಲೂಕು ಅಧಿಕಾರಿಗಳು ನಗರಸಭೆ ಆವರಣದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಈ ಘಟನೆ ನಡೆದಿದೆ. ಕಳೆದ 10 ವರ್ಷಗಳಿಂದ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರದಲ್ಲಿ ವಾಲ್ಮೀಕಿ ಹಾಗೂ ಅಂಬೇಡ್ಕರ್ ಭವನ ಇನ್ನೂ ನಿರ್ಮಾಣವಾಗದ ಸಂಬಂಧ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರ ನಡುವೆ ಜಟಾಪಟಿ ನಡೆಯಿತು.
ನಗರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಆರಂಭವಾಗಿ 9 ವರ್ಷ ಹಾಗೂ ವಾಲ್ಮೀಕಿ ಭವನದ ಕಾಮಗಾರಿ 3 ವರ್ಷಗಳು ಕಳೆದರೂ ಕೂಡ ಇನ್ನು ಕಾಮಗಾರಿ ಮುಗಿಯದಿರುವ ಬಗ್ಗೆ ಇಲಾಖೆ ಅಧಿಕಾರಿ ಸಿದ್ಧನಾರಾಯಣ ಅವರನ್ನು ಕೇಳಿದಾಗ ಅವರ ಬೇಜವಾಬ್ದಾರಿ ಉತ್ತರ ನೀಡಿದ ಹಿನ್ನೆಲೆ ಮಾತಿನ ಚಕಮಕಿ ನಡೆದು, ಅಧಿಕಾರಿಯ ಕೊರಳಪಟ್ಟಿ ಹಿಡಿದಿದ್ದರು. ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.