ETV Bharat / state

ಸಂಸದರು ಬರುವುದಕ್ಕೂ ಮೊದಲೇ ಗುದ್ದಲಿ‌ಪೂಜೆ ನೆರವೇರಿಸಿದ ಶಾಸಕ: ಬೆಂಬಲಿಗರ ಜಟಾಪಟಿ - ಸಂಸದ ಮುನಿಸ್ವಾಮಿ

ಕಾರ್ಯಕ್ರಮಕ್ಕೆ ಸಂಸದ ಮುನಿಸ್ವಾಮಿ ಸಮಯಕ್ಕೆ ಬಾರದ ಹಿನ್ನೆಲೆ ಶಾಸಕ ಎಂ.ಕೃಷ್ಣಾರೆಡ್ಡಿ ಗುದ್ದಲಿಪೂಜೆ ನೆರವೇರಿಸಿದ್ದು, ಸಂಸದ ಮುನಿಸ್ವಾಮಿ ಬೆಂಬಲಿಗರು ಆಕ್ರೋಶಗೊಂಡಿದ್ದರು. ಇದೇ ವೇಳೆ ನಗರಸಭೆ ಅಧಿಕಾರಿಗಳನ್ನು ಎರಡೂ ಕಡೆಯ ಬೆಂಬಲಿಗರು ಎಳೆದಾಡಿ ಗದ್ದಲ್ಲಕ್ಕೆ ಕಾರಣವಾಯಿತು.

uproar-between-mla-ministers-supporters-in-chikkaballapura
ಬೆಂಬಲಿಗರ ಮಾತಿನ ಜಟಾಪಟಿ
author img

By

Published : Apr 17, 2021, 8:08 PM IST

ಚಿಕ್ಕಬಳ್ಳಾಪುರ: ಸಂಸದರು ಆಗಮಿಸುವ ಮೊದಲೇ ಸ್ಥಳೀಯ ಶಾಸಕರು ಗುದ್ದಲಿಪೂಜೆ ನೆರವೇರಿಸಿದ ಹಿನ್ನೆಲೆ ಸಂಸದ ಹಾಗೂ ಶಾಸಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.

ಸಂಸದರು ಬರುವುದಕ್ಕೂ ಮೊದಲೇ ಗುದ್ದಲಿಪೂಜೆ ನೆರವೇರಿಸಿದ ಶಾಸಕ

ಚಿಂತಾಮಣಿ ನಗರದಲ್ಲಿ 2.80 ಲಕ್ಷ ರೂ. ಮೊತ್ತದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಸಂಸದ ಮುನಿಸ್ವಾಮಿಯವರಿಂದ ಗುದ್ದಲಿಪೂಜೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಂಸದ ಮುನಿಸ್ವಾಮಿ ಸಮಯಕ್ಕೆ ಬಾರದ ಹಿನ್ನೆಲೇ ಶಾಸಕ ಎಂ.ಕೃಷ್ಣಾರೆಡ್ಡಿ ಗುದ್ದಲಿಪೂಜೆ ನೆರವೇರಿಸಿದ್ದು, ಸಂಸದ ಮುನಿಸ್ವಾಮಿ ಬೆಂಬಲಿಗರು ಆಕ್ರೋಶಗೊಂಡಿದ್ದರು. ಇದೇ ವೇಳೆ ನಗರಸಭೆ ಅಧಿಕಾರಿಗಳನ್ನು ಎರಡು ಕಡೆಯ ಬೆಂಬಲಿಗರು ಎಳೆದಾಡಿ ಗದ್ದಲ್ಲಕ್ಕೆ ಕಾರಣವಾಯಿತು.

ಸಂಸದರ ಬೆಂಬಲಿಗರು ಶಾಕಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‌ಇದೇ ವೇಳೆ ಕೋವಿಡ್ 2ನೇ ಅಲೆ ಆತಂಕ ಇದ್ದರೂ ಗುದ್ದಲಿಪೂಜೆ ಕಾರ್ಯಕ್ರಮ ಜನಜಂಗುಳಿಯಿಂದ ಕೂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.