ETV Bharat / state

ಚಿಕ್ಕಬಳ್ಳಾಪುರದಲ್ಲಿ ಕಿಡಿಗೇಡಿಗಳಿಂದ ಸಂತ ಆಂಟೋನಿ ವಿಗ್ರಹಕ್ಕೆ ಹಾನಿ - ಮತಾಂತರ ನಿಷೇಧ ವಿಧೇಯಕ

ಚಿಕ್ಕಬಳ್ಳಾಪುರ ತಾಲೂಕಿನ ಸೂಸೆಪಾಳ್ಯ ಗ್ರಾಮದಲ್ಲಿ ಕಿಡಿಗೇಡಿಗಳು ಸಂತ ಆಂಟೋನಿ ವಿಗ್ರಹಕ್ಕೆ ಹಾನಿ ಮಾಡಿರುವ ಘಟನೆ ನಡೆದಿದೆ.

st anthony statue vandalise case
ಸಂತ ಆಂಟೋನಿ ವಿಗ್ರಹಕ್ಕೆ ಹಾನಿ
author img

By

Published : Dec 23, 2021, 1:01 PM IST

Updated : Dec 23, 2021, 1:08 PM IST

ಚಿಕ್ಕಬಳ್ಳಾಪುರ: ಮತಾಂತರ ನಿಷೇಧ ವಿಧೇಯಕ ಮಂಡನೆ ಬೆನ್ನಲ್ಲೇ ತಾಲೂಕಿನ ಸೂಸೆಪಾಳ್ಯ ಗ್ರಾಮದಲ್ಲಿ ಕಿಡಿಗೇಡಿಗಳು ಸಂತ ಆಂಟೋನಿ ವಿಗ್ರಹಕ್ಕೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಸೂಸೆಪಾಳ್ಯ ಗ್ರಾಮದಲ್ಲಿ ವಿಗ್ರಹಕ್ಕೆ ಕಿಡಿಗೇಡಿಗಳು ಇಂದು ಬೆಳಗ್ಗೆ ಅಪಮಾನ ಎಸಗಿದ್ದಾರೆ ಎನ್ನಲಾಗ್ತಿದೆ. ಈ ವಿಗ್ರಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೂಸೆಪಾಳ್ಯ ಗ್ರಾಮದಲ್ಲಿ ಸುಮಾರು 80 ಕ್ರಿಶ್ಚಿಯನ್ ಕುಟುಂಬಗಳು ವಾಸಿಸುತ್ತಿದ್ದಾರೆ.

ರಂಗಧಾಮಯ್ಯ ಕೆರೆ ಕಟ್ಟೆ ಮೇಲಿರುವ ಸೈಂಟ್ ಆಂಟೋನಿ ವಿಗ್ರಹಕ್ಕೆ ಹಾನಿ ಮಾಡಲಾಗಿದೆ ಎಂದು ಚರ್ಚ್ ಫಾದರ್ಟ್ ಸೈಂಟ್​ ಆಂಟೋನಿ ಡ್ಯಾನಿಯಲ್​ ಅವರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ತುಮಕೂರು: 21ಕ್ಕೆ ಪ್ರೀತಿ-ಗೀತಿ ಯಾಕೆ ಎಂದಿದ್ದಕ್ಕೆ ಡೀಸೆಲ್​ ಸುರಿದುಕೊಂಡು ಯುವಕ ಸಾವು

Last Updated : Dec 23, 2021, 1:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.