ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬನನ್ನು ಆತನ ಜಮೀನಿನಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಬೆಳ್ಳಾವಳಹಳ್ಳಿ ಗ್ರಾಮದ ವೆಂಕಟೇಶ್ @ಡ್ರೈವರ್ ವೆಂಕಟೇಶ್ (45) ಕೊಲೆಯಾದ ವ್ಯಕ್ತಿ. ಈತ ನಿನ್ನೆ ಸಂಜೆ ಜಮೀನಿನ ಬಳಿ ಹೋಗಿದ್ದು, ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡು ಅವರ ಮಗ ಹೊಲದ ಬಳಿ ಹೋಗಿ ನೋಡಿದಾಗ ವೆಂಕಟೇಶ್ ಕೊಲೆಯಾಗಿರುವ ವಿಚಾರ ಬೆಳೆಕಿಗೆ ಬಂದಿದೆ.
ಓದಿ: ಕಂದಕಕ್ಕೆ ಉರುಳಿ ಬಿದ್ದ ಬಸ್... 26 ಯಾತ್ರಿಗಳು ಸಾವು!
ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್, ಡಿವೈಎಸ್ಪಿ ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಎಸ್ಪಿ ಮಿಥುನ್ ಮಾತನಾಡಿದ್ದು, ಘಟನೆಗೆ ಸಂಬಂಧಪಟ್ಟಂತೆ ಇಬ್ಬರು ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯಿಂದ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದು ತಿಳಿಸಿದ್ದಾರೆ.