ಬಾಗೇಪಲ್ಲಿ/ಚಿಕ್ಕಬಳ್ಳಾಪುರ : ಕೊರೊನಾ ಲಾಕ್ಡೌನ್ ಹಿನ್ನೆಲೆ ಮಂಗಳಮುಖಿಯರು ಹೊರಗಡೆ ಬರಲು ಆಗುತ್ತಿಲ್ಲ. ರಸ್ತೆಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ಮಂಗಳಮುಖಿಯರು ಈಗ ಅಕ್ಷರಶಃ ಉಪವಾಸವಿರುವಂತಾಗಿದೆ. ಹೀಗಾಗಿ, ಯಾರಾದರೂ ಸಹಾಯ ಮಾಡಿ ಎನ್ನುತ್ತಿದ್ದಾರೆ.
ಮಂಗಳಮುಖಿಯರ ಸಂಕಷ್ಟಕ್ಕೆ ತಾಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಸ್ಪಂದಿಸುತ್ತಿಲ್ಲ, ರಾಜ್ಯ ಸರ್ಕಾರ ನಮಗೆ ಬೇರೆ ರಾಜ್ಯಗಳಲ್ಲಿ ಮಂಗಳಮುಖಿಯರಿಗೆ ಅಂದರೆ ಆಂಧ್ರ ಪ್ರದೇಶದ ಹಾಗೂ ತೆಲಂಗಾಣ 2000 ರೂಪಾಯಿಗಳನ್ನು ನೀಡುವಂತೆ ನಮಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಬಾಗೇಪಲ್ಲಿ ಪಟ್ಟಣದ ಹೊರವಲಯದ ಮಂಗಳಮುಖಿಯರು ಮನವಿ ಮಾಡಿಕೊಂಡಿದ್ದಾರೆ.
ಲಾಕ್ಡೌನ್ನಿಂದಾಗಿ ಹೊರಗಡೆ ಹೋಗಲು ಆಗುತ್ತಿಲ್ಲ. ಹೊರಗಡೆ ಹೋದರೂ ಭಿಕ್ಷೆ ಸಿಗುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ನಿಂತು ಭಿಕ್ಷೆ ಬೇಡಲು ಆಗುತ್ತಿಲ್ಲ. ಈಗ ಉಪವಾಸ ಇರುವಂಥ ಸ್ಥಿತಿ ನಿರ್ಮಾಣವಾಗಿದೆ.
ನಮಗೆ ವಾಸಿಸಲು ಬಾಡಿಗೆಗೆ ಮನೆಯನ್ನು ಕೊಡುತ್ತಿಲ್ಲ,ನಮಗೆ ತಾಲೂಕು ವತಿಯಿಂದ ಗುರುತಿನ ಚೀಟಿ ನೀಡಬೇಕು ಹಾಗೂ ಸರ್ಕಾರದ ವತಿಯಿಂದ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.