ಚಿಕ್ಕಬಳ್ಳಾಪುರ: ಕೆಆರ್‌ಪೇಟೆ ಬೈ ಎಲೆಕ್ಷನ್‌ನ ನಾಮಪತ್ರ ಸಲ್ಲಿಕೆ ವೇಳೆ ಚಪ್ಪಲಿ ಎಸೆತದ ಬಗ್ಗೆ ಹೇಳಿಕೆ ನೀಡಿದ್ದ ಸಚಿವ ಸಿ ಟಿ ರವಿ, ಥರ್ಡ್ ಗ್ರೇಡ್ ರಾಜಕೀಯ ವ್ಯಕ್ತಿಗಳು ಈ ರೀತಿಯ ಕೃತ್ಯ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.
ಇಂತಹ ಕೆಲಸಗಳಿಗೆ ಭಯಪಡುವ ವ್ಯಕ್ತಿಗಳು ನಾವಲ್ಲ. ಈ ಬಾರಿಯ ಚುನಾವಣೆಯಲ್ಲಿ ಗೆದ್ದು ತೋರಿಸಲಿದ್ದೇವೆ. ಥರ್ಡ್ ಗ್ರೇಡ್ ಪೊಲಿಟಿಕ್ಸ್ ಯಾರು ಮಾಡ್ತಾರೋ, ಯಾರಿಗೆ ಸಂಸ್ಕಾರ, ಸಂಸ್ಕೃತಿ ಇರುವುದಿಲ್ಲಾವೋ ಅವರೇ ಇಂತಹ ಕೆಲಸವನ್ನು ಮಾಡ್ತಾರೆ. ಬಿಜೆಪಿ ಕಾರ್ಯಕರ್ತರು ಕೆಆರ್‌ಪೇಟೆಯ ಜನ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ಇದಕ್ಕೆಲ್ಲಾ ಹೆದರುವುದಿಲ್ಲ. ಚುನಾವಣೆಯಲ್ಲಿ ಗೆದ್ದು ಬರಲಿದ್ದೇವೆಂದು ಹೇಳಿಕೆ ನೀಡಿದ್ದಾರೆ.
ಇನ್ನು, ಕಳೆದ ಎಂಪಿ ಚುನಾವಣೆಯಲ್ಲಿ ಸುಮಲತಾ ಅವರನ್ನು ಸೋಲಿಸಬೇಕೆಂದು ಸಾಕಷ್ಟು ಕಸರತ್ತು ಮಾಡಿದ್ದರು. ಆದರೆ, ಸಾಧ್ಯವಾಗಲಿಲ್ಲ. ಕನಕಪುರಕ್ಕೆ ಹಾಗೂ ಚೆನ್ನಪಟ್ಟಣಕ್ಕೆ ಹುಲಿಗಳಿರಬಹುದು. ಆದರೆ, ಚಿಕ್ಕಬಳ್ಳಾಪುರ ಜನತೆಯ ಮುಂದೆ ಇದ್ಯಾವುದೂ ಸಾಧ್ಯವಿಲ್ಲ ಎಂದು ತಿಳಿಸಿದರು.