ETV Bharat / state

ಮತ್ತೊಮ್ಮೆ ಮದ್ಯದ ಬಾಟಲಿಗಳ ಕಳವು.....ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2ನೇ ಕಳ್ಳತನ - theft in chickballapura

ಜಿಲ್ಲೆಯಲ್ಲಿ ಮತ್ತೊಂದು ಮದ್ಯ​ ಕಳ್ಳತನ ಪ್ರಕರಣ ನಡೆದಿದ್ದು, ಚೇಳೂರು ವೃತ್ತದ ಪಕ್ಕದಲ್ಲಿರುವ ವುಡ್ ಲ್ಯಾಂಡ್ ಲಾಡ್ಜ್ ಬಳಿ ಇರುವ ಬಾರೊಂದರ ಗೋಡೆ ಕೊರೆದು ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ದೋಚಿ ಪರಾರಿಯಾಗಿದ್ದಾರೆ.

Theft of liquor bottles again in Chickballapura
ಮತ್ತೊಮ್ಮೆ ಮದ್ಯದ ಬಾಟಲಿಗಳ ಕಳವು.....ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2ನೇ ಕಳ್ಳತನ
author img

By

Published : Apr 17, 2020, 1:32 PM IST

ಚಿಕ್ಕಬಳ್ಳಾಪುರ: ಬಾರ್​​ಗೆ ಕನ್ನ ಹಾಕಿ ಅಪಾರ ಪ್ರಮಾಣದ ಮದ್ಯದ ಬಾಟಲಿ​​ಗಳನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ಮತ್ತೊಮ್ಮೆ ಮದ್ಯದ ಬಾಟಲಿಗಳ ಕಳವು.....ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2ನೇ ಕಳ್ಳತನ

ನಗರದ ಚೇಳೂರು ವೃತ್ತದ ಪಕ್ಕದಲ್ಲಿರುವ ವುಡ್ ಲ್ಯಾಂಡ್ ಲಾಡ್ಜ್ ಬಳಿ ಇರುವ ಬಾರೊಂದರ ಗೋಡೆ ಕೊರೆದು ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಇನ್ನೂ ಕಳೆದ‌ ಎರಡು ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಗರದ ಬಾರ್​​ನಲ್ಲಿಯೂ ಸಹ ಮದ್ಯದ ಬಾಟಲಿಗಳನ್ನು ದೋಚಿ ಪರಾರಿಯಾಗಿದ್ದರು. ಇನ್ನು ಸ್ಥಳಕ್ಕೆ ಅಬಕಾರಿ ಇಲಾಖೆಯ ಡಿ.ಸಿ ನರೇಂದ್ರ ಕುಮಾರ್, ಡಿವೈಎಸ್ಪಿ ಅನಿಲ್ ಕುಮಾರ್, ಇನ್ಸ್ ಪೆಕ್ಟರ್ ಮೋಹನ್ ಕುಮಾರ್, ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.