ಚಿಕ್ಕಬಳ್ಳಾಪುರ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.
ನಗರದ ಹೂವಿನ ಪೇಟೆ ವಜೀರ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ವಜೀರ್ ದಂಪತಿ ಮಕ್ಕಳೊಂದಿಗೆ ಮದುವೆಗೆ ಹೋಗುವುದನ್ನು ಗಮನಿಸಿದ ಕಳ್ಳರು ಕಳೆದ ರಾತ್ರಿ ಕೈಚಳಕ ತೋರಿ ಚಿನ್ನಾಭರಣ ಸೇರಿದಂತೆ ಮೂವತ್ತು ಸಾವಿರ ನಗದನ್ನು ದೋಚಿದ್ದಾರೆ.
ಇನ್ನು ಮದುವೆ ಮುಗಿಸಿಕೊಂಡು ಮನೆಗೆ ಬಂದ ವೇಳೆ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದ್ದು, ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.