ETV Bharat / state

ಮನೆಗಳ್ಳಿ ಗುಮಾನಿ ಗಾಯತ್ರಿ: ಒಂದೇ ದಿನದಲ್ಲಿ‌ ಚಿಂತಾಮಣಿ ಪೊಲೀಸರ ಅತಿಥಿ

ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಮನೆಯೊಂದರಲ್ಲಿ ಕಳ್ಳತನ ಎಸಗಿದ್ದ ಮಹಿಳೆಯನ್ನು ಚಿಂತಾಮಣಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಂತಾಮಣಿ ಕಳ್ಳತನ ಪ್ರಕರಣ
ಚಿಂತಾಮಣಿ ಕಳ್ಳತನ ಪ್ರಕರಣ
author img

By

Published : Dec 3, 2020, 7:18 PM IST

ಚಿಕ್ಕಬಳ್ಳಾಪುರ: ಮನೆಗಳ್ಳತನ‌ ಮಾಡಿ ಪರಾರಿಯಾಗಿದ್ದ ಮಹಿಳೆಯನ್ನು ಪೊಲೀಸರು ಒಂದೇ ದಿನದಲ್ಲಿ ಬಂಧಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ವ್ಯಾಪ್ತಿಯಲ್ಲಿ ನಡೆದಿದೆ.

ತಾಲೂಕಿನ ನೆಲಮಾಚನಹಳ್ಳಿ ಗ್ರಾಮದ ಗುಮಾನಿ ಗಾಯಿತ್ರಿ (21) ಬಂಧಿತ ಮಹಿಳೆ. ಅದೇ ಗ್ರಾಮದ ಆಂಜನೇಯರೆಡ್ಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಬೀಗ ತಗೆದುಕೊಂಡ ಗಾಯಿತ್ರಿ, ಮನೆಯಲ್ಲಿದ್ದ ಸುಮಾರು 4.60 ಲಕ್ಷ ಬೆಲೆಬಾಳುವ ಆಭರಣಗಳು ಹಾಗೂ 19,500 ರೂ. ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಇನ್ನು ಆಂಜನೇಯರೆಡ್ಡಿ ಕುಟುಂಬಸ್ಥರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ವೇಳೆ ಗ್ರಾಮದ ಗಾಯಿತ್ರಿ, ಆಂಜನೆಯರೆಡ್ಡಿ ಮನೆಯ ಕಡೆಗೆ ಹೋಗುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ತನಿಖೆ ಶುರು ಮಾಡಿದ ಪೊಲೀಸರು ಗಾಯಿತ್ರಿಯನ್ನು ಮಹಿಳಾ ಸ್ವಾಂತನ ಕೇಂದ್ರದಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಳ್ಳತನದ ಕೃತ್ಯ ಬಾಯ್ಬಿಟ್ಟಿದ್ದು, ಒಂದೇ ದಿನದಲ್ಲಿ ಕಳ್ಳಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.