ETV Bharat / state

ಜನರಿಂದ ತಿರಸ್ಕೃತರಾದವರ ಮಾತುಗಳಿಗೆ ಬೆಲೆಯಿಲ್ಲ: ಸಚಿವ ಸುಧಾಕರ್ - politics

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶುದ್ಧ ಅಂತಃಕರಣದಿಂದ ಕೆಲಸ ಮಾಡಿದ್ದೇನೆ - ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ನಾನು ಜನರನ್ನು ನಂಬಿ ಕಣದಲಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಆರೋಗ್ಯ ಸಚಿವ ಸುಧಾಕರ್​.

the-words-of-those-rejected-by-the-people-are-priceless-minister-sudhakar
ಜನರಿಂದ ತಿರಸ್ಕೃತರಾದವರ ಮಾತುಗಳಿಗೆ ಬೆಲೆಯಿಲ್ಲ: ಸಚಿವ ಸುಧಾಕರ್
author img

By

Published : Jan 28, 2023, 8:52 PM IST

Updated : Jan 28, 2023, 10:59 PM IST

ಜನರಿಂದ ತಿರಸ್ಕೃತರಾದವರ ಮಾತುಗಳಿಗೆ ಬೆಲೆಯಿಲ್ಲ: ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಜನರಿಂದ ತಿರಸ್ಕೃತರಾದವರ ಮಾತುಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿಯನ್ನು ಕಂಡಿರುವ ಜನ ಮತ ಚಲಾಯಿಸಲಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷದಿಂದ ಕ್ಷೇತ್ರಕ್ಕೆ ನನ್ನದೇ ಆದ ಸೇವೆ ಮಾಡಿದ್ದೀನಿ, ಅದೇ ಸೇವೆ ಮುಂದುವರಿಸಬೇಕು ಎಂಬ ತೀರ್ಮಾನ ಮತದಾರರು ಮಾಡಿದರೆ ಶಾಸಕರಾಗಿ ಆಯ್ಕೆಯಾಗಲಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನಾನು ಮಾಡಿದ ಸೇವೆ ಕ್ಷೇತ್ರದ ಜನತೆಗೆ ತೃಪ್ತಿ ತಂದಿದ್ದರೆ ಜನರು ಪುನಃ ಆಯ್ಕೆ ಮಾಡಲಿದ್ದಾರೆ, ಎಲ್ಲವನ್ನೂ ತೀರ್ಮಾನ ಮಾಡುವವರು ಜನರು. ಹಾಗಾಗಿ ಅವರ ತೀರ್ಮಾನವೇ ಅಂತಿಮ ಎಂದು ಹೇಳಿದರು.

’ಚಿರತೆಯಾದರೂ ಬರಲಿ, ಕತ್ತೆನಾದರೂ ಬರಲಿ‘: ಕಾಂಗ್ರೆಸ್​ನವರು ಚಿಕ್ಕಬಳ್ಳಾಪುರಕ್ಕೆ ಚಿರತೆ ಕರೆತರುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ 10 ವರ್ಷದಲ್ಲಿ ತಾವು ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಜನರ ಮುಂದಿದೆ. ಚಿರತೆನಾದರೂ ಬರಲಿ, ಕೋತಿನಾದರೂ ಬರಲಿ, ಕತ್ತೆನಾದರೂ ಬರಲಿ, ತೀರ್ಮಾನ ಮಾಡುವವರು ಜನ, ನಾನು ಕ್ಷೇತ್ರಕ್ಕೆ ಶುದ್ಧ ಅಂತಃಕರಣದಿಂದ ಕೆಲಸ ಮಾಡಿದ್ದು, ಆ ಸೇವೆ ಅವರಿಗೆ ತೃಪ್ತಿ ತಂದಿದ್ದರೆ ಅವರು ನನ್ನನ್ನು ಆಯ್ಕೆ ಮಾಡುತ್ತಾರೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದಂತೆ ಜನರು ನನ್ನನ್ನು ಮನೆಗೆ ಕಳುಹಿಸುತ್ತಾರೋ ಅಥವಾ ಎಲ್ಲಿಗೆ ಕಳುಹಿಸ್ತಾರೆ ಎಂಬುದನ್ನು ನೋಡೋಣ. ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ನಾನು ಜನರನ್ನು ನಂಬಿ ಕಣದಲಿರುತ್ತೇನೆ. ಅವಕಾಶ ಸಿಕ್ಕರೆ ಮತ್ತೇ ಆಯ್ಕೆಯಾಗಿ ಜನರ ಸೇವೆ ಮುಂದುವರಿಸುತ್ತೇನೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಹಿರಿಯ ಮುಖಂಡ ಆರ್ ಅಶೋಕ್ ಅವರ ವಿರುದ್ಧ ಗೋಬ್ಯಾಕ್ ಚಳವಳಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮಂಡ್ಯಕ್ಕೆ ಅವರು ಇದೇ ಮೊದಲ ಬಾರಿಗೆ ಹೋಗುತ್ತಿಲ್ಲ, ಆರ್. ಅಶೋಕ್ ಅವರು ಬಿಜೆಪಿ ಪಕ್ಷದ ಹಿರಿಯ ನಾಯಕರು, ಈ ಹಿಂದೆಯೂ ಹಲವು ಬಾರಿ ಮಂಡ್ಯಕ್ಕೆ ಹೋಗಿದ್ದಾರೆ, ಅವರು ಆರ್​ಎಸ್ಎಸ್ ಮೂಲದಿಂದ ಬಂದವರು, ನಾಲ್ಕು ದಶಕದಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಬೆಳೆದು ಬಂದಿದ್ದಾರೆ ಎಂದರು.

ಆರ್. ಅಶೋಕ್​ ನಾಯಕತ್ವದಲ್ಲಿ ನಾಲ್ಕು ಸ್ಥಾನಗಳಿಸಬಹುದು: ಇಂತಹ ನಾಯಕರನ್ನು ಉಸ್ತುವಾರಿಗಾಗಿ ಮಂಡ್ಯ ಜಿಲ್ಲೆಗೆ ವರಿಷ್ಠರು ಕಳುಹಿಸಿದ್ದು, ಅವರನ್ನು ಯಾವುದೇ ಜಿಲ್ಲೆಗೆ ನೇಮಿಸಿದರೂ ಸರ್ಕಾರಕ್ಕೆ ಲಾಭ ಇದೆ, ಅವರ ನಾಯಕತ್ವದಿಂದ ಮಂಡ್ಯ ಜಿಲ್ಲೆಯಲ್ಲಿ ಮೂರರಿಂದ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಲಿದ್ದು, ಇದನ್ನು ಸಹಿಸಲಾರದೇ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

ಅಲ್ಲಿ ಷಡ್ಯಂತ್ರ ರೂಪಿಸಿದವರು ಯಾರು ಎಂಬ ಬಗ್ಗೆ ಈಗಾಗಲೇ ಹಲವು ಮಾಹಿತಿ ಲಭ್ಯವಾಗಿದೆ, ಆರ್​. ಅಶೋಕ್​ ಅವರ ಆಗಮನದಿಂದ ಮಂಡ್ಯ ಜಿಲ್ಲೆಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಭವಾನಿ ರೇವಣ್ಣ ಅವರನ್ನು ಬಿಜೆಪಿಗೆ ಆಹ್ವಾನಿಸಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಚಿವರು, ಅದು ಅವರ ಪಕ್ಷದ ತೀರ್ಮಾನ, ಆ ಪಕ್ಷದ ವರಿಷ್ಠರನ್ನು ಕೇಳಬೇಕು. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿಟಿ ರವಿ ಅವರು ಮಾತನಾಡಬಹುದು, ನಾನು ಮಾತನಾಡುವುದು ಸೂಕ್ತವಲ್ಲ ಎಂದು ತಿಳಿಸಿದರು.

ಸಂವಿಧಾನದಲ್ಲಿ ನಿಯಮ ಇಲ್ಲದ ಕಾರಣ ಲಾಭ ಪಡೆಯುತ್ತಿದ್ದಾರೆ : ಎಚ್​ಡಿ ದೇವೇಗೌಡರ ಕುಟುಂಬದಿಂದ ಅನೇಕರು ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನ ಮತ ನೀಡುತ್ತಿರುವ ಕಾರಣ ಅವರು ಸ್ಪರ್ಧಿಸುತ್ತಿದ್ದಾರೆ. ಒಂದೇ ಮನೆಯಿಂದ ಸ್ಪರ್ಧಿಸಬಾರದು ಎಂದು ಸಂವಿಧಾನದಲ್ಲಿ ನಿಯಮ ಇಲ್ಲದ ಕಾರಣ ಅವರು ಲಾಭ ಪಡೆಯುತ್ತಿದ್ದಾರೆ ಎಲ್ಲಿಯವರೆಗೂ ಜನರು ಅವರನ್ನು ಆಯ್ಕೆ ಮಾಡುತ್ತಾರೆ ಅಲ್ಲಿಯವರೆಗೂ ಇದು ಮುಂದುವರಿಯಲಿದೆ ಎಂದು ಹೇಳಿದರು.

ಇದನ್ನೂ ಓದಿ: Watch.. ಮಹಾರಾಷ್ಟ್ರದ ಕೃಷಿ ಉತ್ಸವದಲ್ಲಿ ಕರ್ನಾಟಕದ ಗಜೇಂದ್ರನ ನೋಡಲು ಮುಗಿಬಿದ್ದ ರೈತರು

Last Updated : Jan 28, 2023, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.