ETV Bharat / state

ಪುಟ್ಟಸ್ವಾಮಿಗೌಡರ ಬಣದಿಂದ ಗುರುತಿಸಿಕೊಂಡ ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ

ಚುನಾವಣೆಗೆ ಸ್ಪರ್ಧಿಸಿದ ನೂರ ಎಪ್ಪತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಗೆದ್ದಿರುವುದು ಹಾಗೂ ತಾಲೂಕಿನ ಎಲ್ಲ ಪಂಚಾಯತ್‌ಗಳಲ್ಲೂ ಪುಟ್ಟಸ್ವಾಮಿ ಗೌಡರ ಬಣದ ಮತ ಬ್ಯಾಂಕ್ ಸೃಷ್ಟಿಯಾಗಿರುವುದು ಶಾಸಕರ ನಿದ್ದೆಗೆಡುವಂತಾಗಿದೆ..

honour programme
ಅಭಿನಂದನಾ ಸಮಾರಂಭ
author img

By

Published : Jan 10, 2021, 4:52 PM IST

ಚಿಕ್ಕಬಳ್ಳಾಪುರ : ಕಾಂಗ್ರೆಸ್ ಪಕ್ಷ ಬಿಟ್ಟು ಹೋದ ನಾಯಕರುಗಳು ನಾಯಿಗಳು ಎಂದು ಸ್ಥಳೀಯ ಶಾಸಕರಾದ ಎನ್ ಹೆಚ್ ಶಿವಶಂಕರರೆಡ್ಡಿಯವರು ಹೇಳಿದ್ದಾರೆ ಎಂದು ಆರೋಪಿಸಿದ ಮಾಜಿ ಪುರಸಭಾ ಅಧ್ಯಕ್ಷ ಎನ್. ನರಸಿಂಹಮೂರ್ತಿ, ಇದು ಕ್ಯಾಬಿನೆಟ್ ದರ್ಜೆಯ ಸದಸ್ಯರಾಗಿದ್ದಂತಹ ರಾಜಕಾರಣಿಯ ಬಾಯಲ್ಲಿ ಬರುವಂತಹ ಮಾತುಗಳಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಚುನಾವಣೆಯಲ್ಲಿ ಪುಟ್ಟಸ್ವಾಮಿಗೌಡರ ಬಣದಿಂದ ಗೆದ್ದ ಅಭ್ಯರ್ಥಿಗಳಿಗೆ ತಾಲೂಕಿನ ಅಲಕಾಪುರ ಬಳಿ ಇರುವ ಏಷಿಯನ್ ಫ್ಯಾಬ್ ಟೆಕ್ ಲಿಮಿಟೆಡ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ 2 ಪಂಚಾಯತ್‌ಗಳನ್ನು ಮಾತ್ರ ವಶಕ್ಕೆ ಪಡೆದಿದೆ. ಈ ಹಿನ್ನಡೆಗೆ ಪುಟ್ಟಸ್ವಾಮಿಗೌಡರ ಸೇವಾ ಮನೋಭಾವ, ಸಮಾಜ ಸೇವೆ, ಸಮಾಜಮುಖಿ ಕೆಲಸ ಹಾಗೂ ದೀನ ದಲಿತರ, ಬಡವರ ಪರವಾಗಿ ಧ್ವನಿ ಎತ್ತಿ ತಾಲೂಕಿಗೆ ಅವರದೇ ಆದಂತಹ ಕೊಡುಗೆ ನೀಡಿದ ಫಲವೇ ಕಾರಣ ಎಂದರು.

ಪುಟ್ಟಸ್ವಾಮಿಗೌಡರ ಬಣದಿಂದ ಗುರುತಿಸಿಕೊಂಡ ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ..

ಇದಕ್ಕೆ ಸೂಕ್ತ ಉದಾಹರಣೆಯಂತೆ ಈ ಚುನಾವಣೆಯಲ್ಲಿ ತಮ್ಮ ಬಣದ ವತಿಯಿಂದ ಚುನಾವಣೆಗೆ ಸ್ಪರ್ಧಿಸಿದ ನೂರ ಎಪ್ಪತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಗೆದ್ದಿರುವುದು ಹಾಗೂ ತಾಲೂಕಿನ ಎಲ್ಲ ಪಂಚಾಯತ್‌ಗಳಲ್ಲೂ ಪುಟ್ಟಸ್ವಾಮಿ ಗೌಡರ ಬಣದ ಮತ ಬ್ಯಾಂಕ್ ಸೃಷ್ಟಿಯಾಗಿರುವುದು ಶಾಸಕರ ನಿದ್ದೆಗೆಡುವಂತಾಗಿದೆ ಎಂದು ಟಾಂಗ್​ ನೀಡಿದರು.

ಓದಿ: ಜನರಲ್ಲಿ ವಿಶ್ವಾಸ ಮೂಡಿಸಲು ನಾನೇ ಮೊದಲು ಲಸಿಕೆ ಪಡೆಯುವೆ: ಸಚಿವ ಸುಧಾಕರ್

ಇದನ್ನು ಸಹಿಸಲಾರದೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ರಾಜಕಾರಣ ಮಾಡುತ್ತಿದ್ದಾರೆ. ತಾಲೂಕಿನ ಜನತೆಗೆ ಇಷ್ಟು ದಿನ ನಿಮ್ಮ ಗೋಮುಖ ಮಾತ್ರ ತಿಳಿದಿತ್ತು. ಚುನಾವಣೆ ಫಲಿತಾಂಶದ ನಂತರ ಜನತೆಗೆ ನೀವು ಗೋವು ಅಲ್ಲ. ಗೋಮುಖ ವ್ಯಾಘ್ರ ಎಂಬುದು ಗೊತ್ತಾಗಿದೆ.

ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ. ನಿಮ್ಮ ಸ್ಥಾನಕ್ಕೆ ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ. ರಾಜಕಾರಣ ಮಾತ್ರ ಮಾಡಿ. ಪದ ಪ್ರಯೋಗ ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.