ETV Bharat / state

ಚಿಕ್ಕಬಳ್ಳಾಪುರ: ಟೆಂಪೋ ಪಲ್ಟಿಯಾಗಿ ಕ್ರೀಡಾಕೂಟಕ್ಕೆ ತೆರಳುತ್ತಿದ್ದ 25 ವಿದ್ಯಾರ್ಥಿಗಳಿಗೆ ಗಾಯ

ಶಾಲೆಯಿಂದ ಕ್ರೀಡಾಕೂಟಕ್ಕೆ ವಿದ್ಯಾರ್ಥಿಗಳು ತೆರಳುತ್ತಿದ್ದ ಟೆಂಪೋ ಪಲ್ಟಿಯಾಗಿದೆ.

author img

By

Published : Aug 3, 2023, 5:30 PM IST

Updated : Aug 3, 2023, 7:39 PM IST

Tempo flipped: 25 children injured on their way to sports competition
ಟೆಂಪೋ ಪಲ್ಟಿ: ಕ್ರೀಡಾ ಸ್ಪರ್ಧೆಗೆ ತೆರಳುತ್ತಿದ್ದ 25 ಮಕ್ಕಳಿಗೆ ಗಾಯ

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿದ್ದ ಟೆಂಪೋ‌ ಪಲ್ಟಿಯಾಗಿ, ಟೆಂಪೋದಲ್ಲಿದ್ದ 25 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು, ಆಸ್ಪತ್ರೆಗೆ ರವಾನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಟಿ ಹೊಸಹಳ್ಳಿ ಗೇಟ್ ಬಳಿ‌ ನಡೆದಿದೆ. ತಾಲೂಕಿನ ಸಂತೇಕಲ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಸಂತೇಕಲ್ಲ ಹಳ್ಳಿಯಿಂದ ಮಸ್ತೇನಹಳ್ಳಿ ಶಾಲೆಗೆ ಸ್ಪೋರ್ಟ್ಸ್ ಸ್ಪರ್ಧೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಬಸ್​ನಲ್ಲಿ‌ ಹೋದರೆ ತಡವಾಗುತ್ತದೆ ಎಂದಿದ್ದ ಶಿಕ್ಷಕ ನಂತರ ಟೆಂಪೋ ಮುಖಾಂತರ ಪ್ರಯಾಣ ಬೆಳೆಸಿದ್ದಾರೆ. ಆದರೆ ಬೈಕ್ ಓವರ್ ಟೇಕ್ ಮಾಡಲು ಹೋದ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ಟಿ ಹೊಸಹಳ್ಳಿ ಗೇಟ್ ಬಳಿ ಟೆಂಪೋ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಕೈ ಮುರಿದಿದ್ದು, ಹಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆಂದು ಎರಡು ಕಾರುಗಳು ಹಾಗೂ 112 ಪೊಲೀಸ್​ ಇಲಾಖೆ ವಾಹನದ ಮೂಲಕ ಚಿಂತಾಮಣಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್​- ಕಾರು ಅಪಘಾತ- ಸವಾರ ಸ್ಥಳದಲ್ಲೇ ಸಾವು: ಅತೀ ವೇಗದಿಂದ ಬಂದ ಎಕ್ಸ್​ಯುವಿ ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದು, ಸುಮಾರು ದೂರದ ವರೆಗೂ ತಳ್ಳಿಕೊಂಡು ಹೋದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂದೆ ಇದ್ದ ಸಹ ಪ್ರಯಾಣಿಕ ಗಾಯಗೊಂಡಿರುವ ಬೀಕರ ಅಪಘಾತ ಹರಿಯಾಣದ ಪಂಚಕುಲದಲ್ಲಿ ನಿನ್ನೆ ರಾತ್ರಿ ನಡೆದಿತ್ತು. ಅಪಘಾತ ಸಂಭವಿಸಿದ ಬಳಿಕ ಕಾರು ಚಾಲಕ ಸವಾರನ ಮೃತದೇಹವನ್ನು ತಳ್ಳಲು ಪ್ರಯತ್ನಿಸಿದ್ದು ಮಾತ್ರವಲ್ಲದೆ, ವಾಹನದ ನಂಬರ್​ ಪ್ಲೇಟ್​ ಬದಲಾಯಿಸಲು ಪ್ರಯತ್ನಿಸಿದ್ದನು. ಆದರೆ ಈ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದನು. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಮೂವರು ಸ್ಥಳದಿಂದ ಪರಾರಿಯಾಗಿದ್ದರು. ಆರೋಪಿ ಚಾಲಕನನ್ನು ಸಾರ್ವಜನಿಕರು ಹಿಡಿದಿದ್ದು, ಪಂಜಾಬ್​ನ ಅಬೋಹರ್​ ನಿವಾಸಿ ಕುಲರಾಜ್​ ಎಂದು ಗುರುತಿಸಲಾಗಿತ್ತು. ಪಾನಮತ್ತರಾಗಿ ವಾಹನ ಚಲಾಯಿಸಿದ್ದರು. ಈ ಬಗ್ಗೆ ಪಂಚಕುಲದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿತ್ತು.

ಟೋಲ್​ಗೆ ಟ್ರಕ್​ ಡಿಕ್ಕಿ: ಟೋಲ್​ಗೆ ಟ್ರಕ್ ಡಿಕ್ಕಿಯಾಗಿ ಸಿಬ್ಬಂದಿ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಮಧುರೈನ ಮಸ್ತಾನಪಟ್ಟಿ ಟೋಲ್​ಗೇಟ್​ನಲ್ಲಿ ನಡೆದಿತ್ತು. ವೇಗವಾಗಿ ಬಂದ ಟ್ರಕ್​ ಬ್ರೇಕ್​ ಫೈಲ್​ ಆಗಿದ್ದ ಕಾರಣ ನಿಯಂತ್ರಣ ತಪ್ಪಿತ್ತು. ಟೋಲ್​ ಗೇಟ್​ನಲ್ಲಿ ಮೃತ ದುರ್ದೈವಿ ಸತೀಶ್​ ಕುಮಾರ್​ ಟ್ರಕ್​ ನಿಲ್ಲಿಸಲು ಪ್ರಯತ್ನಿಸಿದ್ದರು. ಈ ವೇಳೆ ಟ್ರಕ್​ ಅವರಿಗೆ ಗುದ್ದಿಗೆ ಕೆಲವು ಮೀಟರ್​ಗಳವರೆಗೆ ಸಿಬ್ಬಂದಿಯನ್ನು ಎಳೆದೊಯ್ದಿತ್ತು. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದನು.

ಇದನ್ನೂ ಓದಿ: ಬೈಕ್​ - ಕಾರು ಮಧ್ಯ ಭೀಕರ ಅಪಘಾತ... ಬೈಕ್​ ಸವಾರರಿಬ್ಬರನ್ನು 100 ಮೀಟರ್​ವರೆಗೆ ಎಳೆದೊಯ್ದ ವಾಹನ!

Last Updated : Aug 3, 2023, 7:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.