ETV Bharat / state

ಕಾಲೇಜು ಪ್ರಾಂಶುಪಾಲರಿಂದಲೇ ಲಕ್ಷಾಂತರ ರೂ. ವಂಚನೆ ಆರೋಪ.. ವಿದ್ಯಾರ್ಥಿಗಳಿಂದ ಪ್ರತಿಭಟನೆ!

author img

By

Published : Jun 2, 2022, 5:13 PM IST

ಅಸಲಿಗೆ ಹಣ ಪಡೆದು ತಮ್ಮ ಸ್ವಂತಕ್ಕೆ ಬಳಸಿಕೊಂಡಿರೋ ಆರೋಪ ಎದುರಿಸುತ್ತಿರುವ ಪ್ರಾಂಶುಪಾಲ ನಾರಾಯಣಸ್ವಾಮಿ ಕಳೆದ ಎರಡೂವರೆ ವರ್ಷಗಳ ಹಿಂದೆಯೇ ತುಮಕೂರಿನ ತಿಪಟೂರು ಕಾಲೇಜಿಗೆ ವರ್ಗಾವಣೆಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತಮಗೆ ಸಮವಸ್ತ್ರ ಕೊಡಿಸಿ, ಇಲ್ಲ ಹಣ ವಾಪಸ್ ಕೊಡಿಸಿ ಅಂತ ಪ್ರಾಂಶುಪಾಲರ ಮೂಲಕ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ದೂರು ನೀಡಿದ್ರು..

ವಿದ್ಯಾರ್ಥಿಗಳು
ವಿದ್ಯಾರ್ಥಿಗಳು

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಹಿಜಾಬ್ ವಿವಾದ ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲ. ವಿವಾದದ ನಡುವೆ ಎಲ್ಲ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿದರೆ ಒಳ್ಳೆಯದು, ವಿವಾದವೂ ಇರಲ್ಲ. ವಿದ್ಯಾರ್ಥಿಗಳ ನಡುವೆ ಭೇದ-ಭಾವವೂ ಇರೋದಿಲ್ಲ ಅನ್ನೋ ಅನಿಸಿಕೆ ಹಲವರದ್ದು. ಆದರೆ ಇಂತಹ ಸಮಯದಲ್ಲೇ ಅದೊಂದು ಪದವಿ ಕಾಲೇಜಿನಲ್ಲಿ ಸಮವಸ್ತ್ರ ಕೊಡ್ತೀವಿ ಅಂತ ವಿದ್ಯಾರ್ಥಿಗಳ ಬಳಿ ಹಣ ಪಡೆದ ಪ್ರಾಂಶುಪಾಲರೇ ಲಕ್ಷಾಂತರ ರೂಪಾಯಿ ನುಂಗಿ ನೀರು ಕುಡಿದಿದ್ದಾರೆ. ನಿರ್ಗಮಿತ ಪ್ರಾಂಶುಪಾಲರ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.

ನೊಂದ ವಿದ್ಯಾರ್ಥಿ ಭಾಸ್ಕರ್ ಮಾತನಾಡಿದರು

ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಪ್ರಥಮ ದರ್ಜೆ ಪದವಿ ಕಾಲೇಜಿನ ನಿರ್ಗಮಿತ ಪ್ರಾಂಶುಪಾಲ ನಾರಾಯಣಸ್ವಾಮಿ 2018-19 ನೇ ಸಾಲಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಬ್ಲೇಜರ್ ಕೊಡೋದಾಗಿ ಹೇಳಿ ತಲಾ ವಿದ್ಯಾರ್ಥಿಯಿಂದ ಸಮವಸ್ತ್ರಕ್ಕೆ 1500 ರೂಪಾಯಿ ಹಾಗೂ ವಿತ್ ಬ್ಲೇಜರ್ ಬೇಕಾದವರಿಗೆ 2,500 ರೂಪಾಯಿ ಹಣ ವಸೂಲಿ ಮಾಡಿದ್ದಾರೆ.

ಪ್ರಾಂಶುಪಾಲರ ವಿರುದ್ದ ಹಿಗ್ಗಾಮುಗ್ಗಾ ಆಕ್ರೋಶ: 500 ಕ್ಕೂ ಹೆಚ್ಚು ಮಂದಿಯಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ಕೇವಲ ಕೆಲವೇ ಕೆಲವರಿಗೆ ಮಾತ್ರ ಆರಂಭದಲ್ಲಿ ಸಮವಸ್ತ್ರ ನೀಡಿದ್ದಾರಂತೆ. ಇನ್ನುಳಿದವರಿಗೆ ಇನ್ನೇನು ಮೂರು ವರ್ಷದ ಪದವಿ ಕೋರ್ಸ್ ಮುಗಿದು ಹೋಗುತ್ತಿದ್ದರೂ ಸಮವಸ್ತ್ರವನ್ನೂ ಕೊಟ್ಟಿಲ್ಲ. ಕೊಟ್ಟ ಹಣ ಸಹ ವಾಪಸ್ ಕೊಟ್ಟಿಲ್ಲ.ಇದರಿಂದ ನೊಂದ ವಿದ್ಯಾರ್ಥಿಗಳು ನಿರ್ಗಮಿತ ಪ್ರಾಂಶುಪಾಲ ನಾರಾಯಣಸ್ವಾಮಿ ವಿರುದ್ದ ಹಿಗ್ಗಾಮುಗ್ಗಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಹಣ ಪಡೆದು ತಮ್ಮ ಸ್ವಂತಕ್ಕೆ ಬಳಸಿಕೊಂಡಿರೋ ಆರೋಪ ಎದುರಿಸುತ್ತಿರುವ ಪ್ರಾಂಶುಪಾಲ ನಾರಾಯಣಸ್ವಾಮಿ ಕಳೆದ ಎರಡೂವರೆ ವರ್ಷಗಳ ಹಿಂದೆಯೇ ತುಮಕೂರಿನ ತಿಪಟೂರು ಕಾಲೇಜಿಗೆ ವರ್ಗಾವಣೆಗೊಂಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ತಮಗೆ ಸಮವಸ್ತ್ರ ಕೊಡಿಸಿ, ಇಲ್ಲ ಹಣ ವಾಪಸ್ ಕೊಡಿಸಿ ಅಂತ ಪ್ರಾಂಶುಪಾಲರ ಮೂಲಕ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ದೂರು ನೀಡಿದ್ರು.

ದೂರಿನನ್ವಯ ತನಿಖೆಗೆ ಅಂತ ಮತ್ತೆ ಜಂಟಿ ನಿದೇರ್ಶಕರ ಜೊತೆ ಕಾಲೇಜಿಗೆ ಬಂದ ನಾರಾಯಣಸ್ವಾಮಿ ಇದ್ದ ಕೊಠಡಿಗೆ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ತಮ್ಮ ಹಣ ಕೊಡುವಂತೆ ಪಟ್ಟು ಹಿಡಿದು ಗಲಾಟೆ ಮಾಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಟೈಲರ್ ಒಬ್ಬರಿಗೆ ಹಣ ಕೊಟ್ಟು ಮೋಸ ಹೋಗಿದ್ದೇನೆ. ಆದಷ್ಟು ಬೇಗ ಹಣ ವಾಪಸ್ ಮಾಡ್ತೇನೆ ಅಂತಾರೆ.

ಮುಚ್ಚಳಿಕೆ ಪತ್ರ ಕೊಟ್ಟು ಅಲ್ಲಿಂದ ಎಸ್ಕೇಪ್.. ತಮ್ಮ ಹಣ ಕೊಡಬೇಕು, ಇಲ್ಲ ಸಮವಸ್ತ್ರವನ್ನಾದರೂ ಕೊಡಬೇಕು. ಇಲ್ಲ ಅಂದ್ರೆ ಪ್ರಿನ್ಸಿಪಾಲ್ ನ ಕಾಲೇಜಿಂದ ಹೊರಗೆ ಹೋಗೋಕೆ ಬಿಡಲ್ಲ ಅಂತ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ರು. ಆದರೆ, ಪೊಲೀಸರು ಮಧ್ಯ ಪ್ರವೇಶಮಾಡಿ ಗಲಾಟೆ ನಡೆಯದಂತೆ ಕ್ರಮ ವಹಿಸಿ, ಜೂನ್ 10 ರಂದು ವಿದ್ಯಾರ್ಥಿಗಳ ಹಣ ವಾಪಸ್​​ ಕೊಡುವುದಾಗಿ ಮುಚ್ಚಳಿಕೆ ಪತ್ರ ಕೊಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಓದಿ: ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತ್ತಿತ್ತು: ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.