ETV Bharat / state

ವಿಡಿಯೋ: ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲಿ ಶಿಕ್ಷಕನಿಗೆ ಥಳಿಸಿದ ವಿದ್ಯಾರ್ಥಿಗಳ ಗುಂಪು! - ನಡುರಸ್ತೆಯಲ್ಲಿ ಯುವಕರ ಗುಂಪು ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಗಲಾಟೆ ನಡೆದಿದ್ದು, ಶಿಕ್ಷಕರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲಾಗಿದೆ. ಘಟನೆ ಸಂಬಂಧ ಬಾಗೇಪಲ್ಲಿ ಪೊಲೀಸ್‌ ಠಾಣೆಗೆ ಶಿಕ್ಷಕ ಹಾಗೂ ಆತನ ಸಂಬಂಧಿಕರು ದೂರು ನೀಡಿದ್ದಾರೆ.

Students group attacked on Lecturers for silly reason
ಬಾಗೇಪಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು
author img

By

Published : Aug 29, 2021, 11:26 AM IST

ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಬಸ್​​ನಲ್ಲಿ ಕಾಲು‌ ತಾಕಿದ್ದಕ್ಕೆ ಮಾತಿನ ಚಕಮಕಿ ತಾರಕಕ್ಕೇರಿದ ಪರಿಣಾಮ ವಿದ್ಯಾರ್ಥಿಗಳ ಗುಂಪೊಂದು ಶಿಕ್ಷಕ ಮತ್ತು ಆತನ ಅಣ್ಣನಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಾಗೇಪಲ್ಲಿ ತಾಲೂಕು ಗೂಳೂರು ಹೋಬಳಿ ಮಾರ್ಗಾನುಕುಂಟೆ ಗ್ರಾಮದಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲಿ ಶಿಕ್ಷಕರ ಥಳಿಸಿದ ವಿದ್ಯಾರ್ಥಿಗಳ ಗುಂಪು

ಶಿಕ್ಷಕ ರಾಜಕುಮಾರ್ ಮತ್ತವರ ಅಣ್ಣ ಶ್ರೀನಿವಾಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆ ಸಂಬಂಧ 10 ಮಂದಿ ವಿರುದ್ಧ ದೂರು ದಾಖಲಾಗಿದೆ. ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯಾರ್ಥಿಯೋರ್ವನಿಗೆ ಕಾಲು ತಾಕಿದೆ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಶಿಕ್ಷಕ‌ ರಾಜಕುಮಾರ್ ಕ್ಷಮೆ ಕೇಳಿದ್ದಾರೆ. ಇಷ್ಟಕ್ಕೆ‌ ಸುಮ್ಮನಾಗದ ವಿದ್ಯಾರ್ಥಿಗಳ ಗುಂಪು ಶಿಕ್ಷಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವಿಚಾರ ರಾಜಕುಮಾರ್ ಅಣ್ಣ ಶ್ರೀನಿವಾಸ್​​ಗೆ ತಿಳಿದು ಸ್ಥಳಕ್ಕೆ ಬಂದಾಗ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ.

ಘಟನೆ ಕುರಿತು ಬಾಗೇಪಲ್ಲಿ ಪೊಲೀಸ್‌ ಠಾಣೆಯಲ್ಲಿ ಶ್ರೀನಿವಾಸ್‌ ದೂರು ನೀಡಿದ್ದಾರೆ. ಸದ್ಯ ಹಲ್ಲೆ ಮಾಡಿದವರು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಓದಿ: ರಾಮನಗರ: ಎರಡು ಬೈಕ್​ಗಳ ನಡುವೆ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.