ETV Bharat / state

ಕೊರೊನಾ ತಡೆಗೆ ರಾಜ್ಯ ಸರ್ಕಾರ ಉತ್ತಮ ಆಡಳಿತ ನಡೆಸಿದೆ.. ಶಾಸಕ ಕೃಷ್ಣಾರೆಡ್ಡಿ - state government has d preventing corona:

ಕೊರೊನಾ ಸೋಂಕು ತಡೆಗಟ್ಟುವುದರಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನಡೆಸಿದೆ ಎಂದು ಶಾಸಕ ಕೃಷ್ಣಾರೆಡ್ಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆನ್​ಲೈನ್​​​ ತರಗತಿಯನ್ನು 1 ರಿಂದ 9ರ ವರೆಗೂ ರದ್ದು ಮಾಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಸಲಹೆ ನೀಡಿದ್ದಾರೆ.

state government has done a good job in preventing corona: MLA Krishna Reddy
ಕೊರೊನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನಡೆಸಿದೆ: ಶಾಸಕ ಕೃಷ್ಣಾರೆಡ್ಡಿ
author img

By

Published : Jun 13, 2020, 9:46 PM IST

ಚಿಕ್ಕಬಳ್ಳಾಪುರ : ಕೊರೊನಾ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಉಪಸಭಾಧ್ಯಕ್ಷ ಹಾಗೂ ಚಿಂತಾಮಣಿ ಶಾಸಕ ಎಂ ಕೃಷ್ಣಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ರಾಜ್ಯದಲ್ಲಿಯೂ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರ ನಡುವೆಯೇ ಕೊರೊನಾ ಸೋಂಕು ತಡೆಗಟ್ಟುವುದರಲ್ಲಿ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕು ತಡೆಗಟ್ಟುವುದರಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನಡೆಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೇ ನಮ್ಮ ರಾಜ್ಯದಲ್ಲಿ ಉತ್ತಮ ನಿಯಂತ್ರಣ ನಡೆಯುತ್ತಿದೆ. ಇನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ ಎಂದರು. ಇನ್ನೂ ಆನ್​ಲೈನ್​​​ ತರಗತಿಯನ್ನು 1 ರಿಂದ 9ರವರೆಗೂ ರದ್ದು ಮಾಡಿದ್ರೆ ಉತ್ತಮವಾಗಿರುತ್ತಿತ್ತು.

ಸದ್ಯ 5ರವರೆಗೂ ಆನ್‌ಲೈನ್ ತರಗತಿಗಳನ್ನು ರದ್ದು ಮಾಡಿರುವುದು ಉತ್ತಮ ನಿರ್ಧಾರ. 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಲ್ಪವಾದ್ರೂ ತಿಳುವಳಿಕೆ ಇರುತ್ತದೆ. ಆದ್ದರಿಂದ 9ರವರೆಗೂ ರದ್ದು ಮಾಡಿದ್ರೆ ಉತ್ತಮ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.