ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪಿಡಿಒ ಶ್ರೀನಿವಾಸ್ 4,500 ರೂ. ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮೇನಹಳ್ಳಿ ಗ್ರಾಮದ ಚಿಂತಕಾಯಲಪಲ್ಲಿ ವೆಂಕಟೇಶ್ ಎಂಬವರಿಂದ ಇವರು ಹಣ ಪಡೆಯುತ್ತಿದ್ದರು.
ಇದನ್ನೂ ಓದಿ: ದುಬೈನಲ್ಲಿ ಪತಿ, ಇತ್ತ ಪತ್ನಿಯ ವಿವಾಹೇತರ ಸಂಬಂಧ: ಕುಡಿದ ಮತ್ತಲ್ಲಿ ಕತ್ತು ಕೊಯ್ದ ಪ್ರಿಯಕರ!
ಆರೋಪಿ ಶ್ರೀನಿವಾಸ್ ಮೂರು ಇ- ಖಾತೆಗಳನ್ನು ಮಾಡಿಕೊಡಲು 6 ಸಾವಿರ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಚಿಂತಕಾಯಲಪಲ್ಲಿ ವೆಂಕಟೇಶ್ ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.