ಚಿಕ್ಕಬಳ್ಳಾಪುರ: ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತೆರೆದ ವಾಹನದ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ರು.
ಎಲ್ಲಾ ಪಕ್ಷಗಳಿಗೂ ನಾನು ಸುಧಾಕರ್ ಸೋಲಿಸುವಂತೆ ಮನವಿ ಮಾಡುತ್ತಿದ್ದೇವೆ. ಯಡಿಯೂರಪ್ಪ ಹಿಂಬಾಗಿಲಿನಿಂದ ಬಂದು ಸರ್ಕಾರ ರಚಿಸಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ.18 ಜನ ಶಾಸಕರನ್ನು 25-30 ಕೋಟಿ ಕೊಟ್ಟು ವ್ಯಾಪಾರ ಮಾಡಿ ಅಧಿಕಾರ ಹಿಡಿದ್ರು. ಅವರಿಗೆ ಮೆಜಾರಿಟಿ ಇತ್ತಾ. ಅವರಿಗೆ ಯಾವ ನೈತಿಕತೆ ಇದೆ ನನ್ನ ಬಗ್ಗೆ ಹೇಳುವುದಕ್ಕೆ. ನಾನು ಐದು ವರ್ಷ ಸಿಎಂ ಆಗಿದ್ದೆ. ಈ ರೀತಿ ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಸಾಕಷ್ಟು ಬಾರಿ ಸುಧಾಕರ್‌ಗೆ ಬೆಂಬಲ ಸೂಚಿಸಿದ್ದೆ. ಆದರೆ ಈ ರೀತಿ ಬೆನ್ನಿಗೆ ಚೂರಿ ಹಾಕ್ತಾನೆ ಅಂತಾ ಅಂದ್ಕೊಂಡಿರಲಿಲ್ಲ. ನಿಯಂತ್ರಣ ಮಂಡಳಿಯ ಕುಮಾರಸ್ವಾಮಿ ಅವರು ಬೇಡ ಅಂದ್ರು. ಆದರೆ ಸುಧಾಕರ್‌ಗೆ ಕೊಡಲೇಬೇಕು ಅಂತ ಕೊಡಿಸಿದ್ದೆ. ಆದರೆ ಅದು ಕಿತ್ತು ಹೋಯ್ತು ಎಂದರು.
ಸುಧಾಕರ್‌ಗೆ ಶಾಸಕ ಸ್ಥಾನ ಬೇಡ ಅಂದ್ರು ಆದರೆ ನಾನೇ ತಪ್ಪು ಮಾಡಿಬಿಟ್ಟೆ. ಈಗ ಪಶ್ಚಾತ್ತಾಪ ಪಡ್ತಾ ಇದ್ದೀನಿ. ಪಕ್ಷ ಬಿಟ್ಟು ಹೋಗಲ್ಲ ಎಂದು ಪ್ರಮಾಣ ಮಾಡಿದ್ದ. ಆದರೆ ಈ ರೀತಿ ಡೋಂಗಿ ರಾಜಕೀಯ ನಡೆಸುತ್ತಾನೆಂದು ಅಂದುಕೊಂಡಿರಲಿಲ್ಲ. ಚಿಕ್ಕಬಳ್ಳಾಪುರಕ್ಕೆ ಅನುದಾನ ಬಂದಿದೆ ಅಂದ್ರು ಅದು ಯಾರು ಕೊಡಿಸಿದ್ದು ನನ್ನ ಅವಧಿಯಲ್ಲಿ ಬಂದಿದ್ದು ಎಂದು ಕಿಡಿಕಾರಿದ್ರು.