ಚಿಕ್ಕಬಳ್ಳಾಪುರ: ನಗರದ ಹೆಚ್.ಎಸ್.ಗಾರ್ಡ್ನ ಬಳಿಯ ಹಾಸಿಗೆ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ- ಪಾಸ್ತಿಗೆ ಹಾನಿಯಾಗಿದೆ.
ಅಂಗಡಿಯ ಮಾಲೀಕ ಮೌಲಾ ಎಂಬುವವರು ಸುಮಾರು 10 ವರ್ಷಗಳಿಂದ ಇದೇ ವ್ಯಾಪಾರ ನಡೆಸುತ್ತಿದ್ದರು. ಅಂದಾಜು ₹ 10 ಲಕ್ಷ ಮೌಲ್ಯದ ವಸ್ತಗಳು ನಷ್ಟವಾಗಿದೆ ಎನ್ನಲಾಗಿದೆ.
ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.