ETV Bharat / state

ಹೆಚ್ಚಿದ ಕೊರೊನಾ ಭೀತಿ ಸ್ವಯಂ ಲಾಕ್ ಡೌನ್ ಮಾಡಿಕೊಂಡ ಚಿಂತಾಮಣಿ ಶಿಡ್ಲಘಟ್ಟ ಜನತೆ

ಕೊರೊನಾದಿಂದ ಕೊಂಚ ನಿರಾಳವಾಗಿದ್ದ ಚಿಕ್ಕಬಳ್ಳಾಪುರದಲ್ಲಿ ಮತ್ತೆ ಸೋಂಕು ಪತ್ತೆಯಾದ ಹಿನ್ನೆಲೆ ಇಲ್ಲಿನ ಚಿಂತಾಮಣಿ-ಶಿಡ್ಲಘಟ್ಟ ಜನತೆ ಸ್ವಯಂ ಲಾಕ್​ಡೌನ್ ಘೋಷಿಸಿಕೊಂಡಿದ್ದಾರೆ. ಸಂಜೆ 4ರ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿ ತೆರೆಯುವುದಾಗಿ ಚಿಂತಾಮಣಿ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಶನ್ ತಿಳಿಸಿದೆ.

Shidlaghatta-Chintamani people announcing self-lockdown
ಹೆಚ್ಚಾದ ಕೊರೊನಾ ವರಸೆ: ಸ್ವಯಂ ಲಾಕ್​​ಡೌನ್​ ಘೋಷಿಸಿಕೊಂಡ ಶಿಡ್ಲಘಟ್ಟ-ಚಿಂತಾಮಣಿ ಜನತೆ
author img

By

Published : Jun 23, 2020, 5:29 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳು ಕಂಡುಬರುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಶಿಡ್ಲಘಟ್ಟ ನಗರ ಹಾಗೂ ಚಿಂತಾಮಣಿ ನಗರದ ಜನತೆ ಸ್ವಯಂ ಲಾಕ್​​ಡೌನ್​​ಗೆ ಕರೆ ಕೊಟ್ಟಿದ್ದಾರೆ.

ಹೆಚ್ಚಾದ ಕೊರೊನಾ ವರಸೆ: ಸ್ವಯಂ ಲಾಕ್​​ಡೌನ್​ ಘೋಷಿಸಿಕೊಂಡ ಶಿಡ್ಲಘಟ್ಟ-ಚಿಂತಾಮಣಿ ಜನತೆ

ಇನ್ನೂ ಚಿಂತಾಮಣಿ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಶನ್ ವತಿಯಿಂದ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ವಹಿವಾಟಿಗೆ ಅನುವು ಮಾಡಿಕೊಡಲು ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿದ್ದರು. ಇದೇ ವೇಳೆ ನಾಗರಿಕರು ಹಾಗೂ ತಾಲೂಕು ಆಡಳಿತ ಸಹಕರಿಸಬೇಕು ಎಂದು ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ವತಿಯಿಂದ ಸಂಘದ ಸದಸ್ಯರು ಶಾಸಕರಿಗೆ ಮತ್ತು ನಗರ ಠಾಣೆಯ ಸರ್ಕಲ್ ಇನ್ಸ್​​ಪೆಕ್ಟರ್ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಇನ್ನೂ‌ ಯಾವುದೇ ಸೋಂಕಿತರಿಲ್ಲದ ತಾಲೂಕ್ಕಾಗಿದ್ದ ಶಿಡ್ಲಘಟ್ಟದ ವ್ಯಾಪ್ತಿಯಲ್ಲಿ‌ 4 ಮಂದಿ ಸೋಂಕಿತರು ಪತ್ತೆಯಾದ ಹಿನ್ನೆಲೆ ನಗರದ ವ್ಯಾಪಾರ ವ್ಯವಹಾರಕ್ಕೆ ಬ್ರೇಕ್ ನೀಡಿದ್ದಾರೆ. ಮುಂಜಾನೆಯಿಂದ ಸಂಜೆ 4ರ ವರೆಗೆ ಮಾತ್ರ ಅಂಗಡಿ ಮುಂಗ್ಗಟ್ಟುಗಳು ತೆರೆಯುವುದಾಗಿ ಸ್ವಯಂ ಘೋಷಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.