ETV Bharat / state

ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ.. ಕಾದು ಸುಸ್ತಾಗಿ ಅಲ್ಲೇ ಮಲಗಿದ ಜನತೆ

author img

By

Published : Feb 4, 2021, 10:36 PM IST

ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಶುಲ್ಕ ಪಾವತಿಸದಿದ್ದರೆ ಸಾರ್ವಜನಿಕರಿಂದ ಸರ್ಕಾರ ದಂಡ ಪಡೆಯುತ್ತದೆ. ಜನರಿಗೆ ಆಗಿರುವ ತೊಂದರೆಗೆ ಹೊಣೆ ಯಾರು ಎಂದು ಚಿಂತಾಮಣಿ ತಾಲೂಕು ಕಚೇರಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಬಳಿ ದಿನವಿಡೀ ಕಾದು ವಾಪಸ್ ತೆರಳಿದ ಜಿಯಾವುಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.

register-office
ಸಬ್ ರಿಜಿಸ್ಟರ್ ಕಚೇರಿ

ಚಿಕ್ಕಬಳ್ಳಾಪುರ: ತಾಲೂಕು ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಸಾರ್ವಜನಿಕರು ಕಚೇರಿಯ ಬಳಿಯೇ ಮಲಗಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ವಾಪಸ್ ತೆರಳುತ್ತಿರುವ ದೃಶ್ಯ ಜಿಲ್ಲೆಯ ಚಿಂತಾಮಣಿ ತಾಲೂಕು ಕಚೇರಿಯಲ್ಲಿ ಕಂಡುಬರುತ್ತಿದೆ.

ಕಳೆದ 2 ದಿನಗಳಿಂದ ತಾಲೂಕು ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು ಬೆಳಗ್ಗೆಯಿಂದಲೇ ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರು ಕುಟುಂಬ ಸಮೇತ ಬಂದು ಕುಳಿತಿದ್ದರೂ ನೋಂದಣಿ ಕೆಲಸ ಮುಗಿಯಲಿಲ್ಲ ಎಂದು ಅಧಿಕಾರಿಗಳಿಗೆ ಬೈಯುತ್ತಲೇ ತೆರಳಿದರು. ಸರ್ಕಾರಕ್ಕೆ ರಾಜಸ್ವ ತಂದುಕೊಡುವ ಇಲಾಖೆಯನ್ನು ತಾಂತ್ರಿಕವಾಗಿಯೂ ಸಬಲಗೊಳಿಸಲು ಸರ್ಕಾರಕ್ಕೆ ಬೇಜವಾಬ್ದಾರಿ ಏಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ

ಬೇರೆಲ್ಲಾ ಕೆಲಸ ಬಿಟ್ಟು ಕುಟುಂಬ ಸಮೇತ ಬಂದು ಕುಳಿತಿದ್ದೇವೆ. ಸರ್ವರ್ ಸಮಸ್ಯೆ ಎಂದು ಕಾರಣ ತಿಳಿಸಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಇದೇ ಕೆಲಸಕ್ಕೆ ಮತ್ತೊಂದು ದಿನ ಕಚೇರಿಗೆ ಬರಬೇಕಾಗಿದೆ. ನಮ್ಮ ಸಮಯ ವ್ಯರ್ಥ ಆಗಿರುವುದಕ್ಕೆ ಪರಿಹಾರ ಕೊಡುವವರು ಯಾರು ಎಂದು ಪ್ರಶ್ನಿಸಿದರು.

ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಶುಲ್ಕ ಪಾವತಿಸದಿದ್ದರೆ ಸಾರ್ವಜನಿಕರಿಂದ ಸರ್ಕಾರ ದಂಡ ಪಡೆಯುತ್ತದೆ. ಜನರಿಗೆ ಆಗಿರುವ ತೊಂದರೆಗೆ ಹೊಣೆ ಯಾರು ಎಂದು ಚಿಂತಾಮಣಿ ತಾಲೂಕು ಕಚೇರಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಬಳಿ ದಿನವಿಡೀ ಕಾದು ವಾಪಸ್ ತೆರಳಿದ ಜಿಯಾವುಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.

ಈ ರೀತಿಯ ಸಮಸ್ಯೆ ಉಂಟಾಗುತ್ತಿರುವುದು ಇದೇ ಮೊದಲಲ್ಲ, ಆಗಾಗ ಸರ್ವರ್ ಸ್ಥಗಿತಗೊಳ್ಳುವುದು ಸಾಮಾನ್ಯ. ಈ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಐಎಂಎ ಬಹುಕೋಟಿ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಅಲಿಖಾನ್​ಗೆ ಹೈಕೋರ್ಟ್​ನಿಂದ ಜಾಮೀನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.