ಚಿಕ್ಕಬಳ್ಳಾಪುರ: ಶಾಸಕ ಶಿವಶಂಕರ್ ರೆಡ್ಡಿ ಮಾಡಿರುವ ಆರೋಪ ನೋಡಿದರೆ ನಗು ಬರುತ್ತದೆ. ಏಕೆಂದರೆ ಪಕ್ಷಕ್ಕೆ ಮೋಸ ಮಾಡುವುದನ್ನು ತಾಲ್ಲೂಕಿನಲ್ಲಿ ಪ್ರಾರಂಭ ಮಾಡಿದ್ದೇ ಈ ಪುಣ್ಯಾತ್ಮ ಎಂದು ಕಾಂಗ್ರೆಸ್ ಪಕ್ಷ ತೊರೆದ ಕ್ಷೇತ್ರದ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
1991 ರಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಂದು ಪಕ್ಷದ ಅಧಿಕೃತ ಅಭ್ಯರ್ಥಿ G V ಕೃಷ್ಣಮೂರ್ತಿಯವರ ವಿರುದ್ಧ ಕೆಲಸ ಮಾಡಿ, ನಿಮ್ಮ ನೆಂಟರು ಜನತಾ ದಳ ಅಭ್ಯರ್ಥಿ ಶ್ರೀಮತಿ ಜ್ಯೋತಿ ರೆಡ್ಡಿ ಯವರ ಗೆಲುವಿಗೆ ಸಹಕರಿಸಿ, ಪಕ್ಷಕ್ಕೆ ಮೋಸ ಮಾಡಲು ಪ್ರಾರಂಭಿಸಿದ್ದು ನೀವೆ. ಪಕ್ಷದ ಅಧಿಕೃತ ಅಭ್ಯರ್ಥಿ ನಿಮ್ಮ ರಾಜಕೀಯ ಗುರುಗಳು ಆದ ಶ್ರೀ S V ಅಶ್ವಥನಾರಾಯಣ ರೆಡ್ಡಿ ವಿರುದ್ಧ ಪಕ್ಷೇತರರಾಗಿ ನಿಂತು ಮತ ಎಣಿಕೆ ಯಲ್ಲಿ ಮೋಸ ಮಾಡಿ ಗೆಲವು ಸಾಧಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದಿದ್ದಾರೆ.
ರಾಜ್ಯಸಭಾ ಚುನಾವಣೆ ಯಲ್ಲಿ ವಿಜಯ್ ಮಲ್ಯ ರಿಂದ ಹಣ ಪಡೆದು ಮತ ಚಲಾಯಿಸಿದ್ದು. ವಿಧಾನ ಪರಿಷತ್ ಚುನಾವಣೆ ಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕದೆ ಹಣ ಪಡೆದು ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕೋಲಾರ, ಚಿಕ್ಕಬಳ್ಳಾಪುರ ಚುನಾಯಿತ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಶ್ರೀ ಅನಿಲ್ ಕುಮಾರ್ ರಿಂದ ಹಣ ಪಡೆದು ಜೆಡಿಎಸ್ ಪಕ್ಷದ ಅಭ್ಯರ್ಥಿ C R ಮನೋಹರ್ ರವರಿಂದ ಹೆಚ್ಚು ಹಣ ಪಡೆದು ಪಕ್ಷಕ್ಕೆ ದ್ರೋಹ ಮಾಡಿ ಮನೋಹರ್ ಗೆಲುವಿನ ಹಿಂದೆ ನಿಮ್ಮ ಕೈವಾಡವಿದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಆರೋಪ ಮಾಡಿದ್ದಾರೆ.
ನಿಮ್ಮ ಪಕ್ಷ ದ್ರೋಹ ಕೆಲಸ ಹಣ ವಸೂಲಿ ದಂಧೆ ತಾಲೂಕಿನಲ್ಲಿ ಎಲ್ಲರಿಗೂ ಗೊತ್ತಿದೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅನ್ನೋ ಹಾಗೆ ನೀವು ನಮ್ಮ ಮೇಲೆ ಆರೋಪ ಮಾಡುತ್ತಿರುವ ಉದ್ಯಮಿಯಿಂದ ಎಷ್ಟು ಹಣ ಪಡೆದುಕೊಂಡಿದ್ದೀರಿ ಶಾಸಕರೇ. ಇದನ್ನ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಜನತೆಯ ಮುಂದೆ ತರುತ್ತೆವೆ ಹುಷಾರ್. ನೀವು ನಮ್ಮ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲದ ತಾಲೂಕಿನ ಅತಿದೊಡ್ಡ ಸೂಟ್ಕೇಸ್ ಗಿರಾಕಿ ಎಂದರು.
ನಿಮ್ಮ ಮುಖವಾಡ ಕಳಚುವ ದಿನಗಳು ಹತ್ತಿರ ಬರುತ್ತಿವೆ ಸಮಯ ಸಾಧಕ ಸ್ವಾರ್ಥ ರಾಜಕಾರಣಕ್ಕೆ ಅಂತ್ಯ ಸಮೀಪಿಸಿದೆ, ನೈತಿಕತೆ ಇದ್ದರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಕ್ಷೇತ್ರದ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೋರೆದ ಮಾಜಿ ನಗರಸಭೆ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್ ವಿ ಮಂಜುನಾಥ್ ಸೇರಿದಂತೆ ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದರು.