ETV Bharat / state

ಸರ್ಕಾರಿ ಜಾಬ್​ ಸಿಗುವವರೆಗೂ ಉಚಿತ ತರಬೇತಿ ಎಂದು ಎಗರಿಸಿದ್ದು ಎಷ್ಟು ಗೊತ್ತಾ..! - ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್

ಚಿಂತಾಮಣಿ ನಗರದ ಚೇಳೂರ ವೃತ್ತದ ಬಳಿ ಇರುವ 'ಟರ್ನಿಂಗ್ ಪಾಯಿಂಟ್ ಸಂಸ್ಥೆ'ಯು 200ಕ್ಕೂ ಅಧಿಕ ಅಭ್ಯರ್ಥಿಗಳು, ತರಬೇತಿದಾರರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದು, ನ್ಯಾಯ ನೀಡುವಂತೆ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.

24 lacks fraud from comparative exams coaching center
author img

By

Published : Aug 22, 2019, 5:26 PM IST

ಚಿಕ್ಕಬಳ್ಳಾಪುರ: ಬಹುಕೋಟಿ ರೂಪಾಯಿ ಹಗರಣಗಳಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿರುವ ವಿಷಯಗಳು ನಮ್ಮ ಕಣ್ಣ ಮುಂದಿವೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುವುದಾಗಿ ಹೇಳಿ ₹ 24 ಲಕ್ಷ ಲಪಟಾಯಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಜಿಲ್ಲೆಯ ಚಿಂತಾಮಣಿ ನಗರದ ಚೇಳೂರ ವೃತ್ತದ ಬಳಿ ಇರುವ 'ಟರ್ನಿಂಗ್ ಪಾಯಿಂಟ್ ಸಂಸ್ಥೆ'ಯವರು 200ಕ್ಕೂ ಅಧಿಕ ಅಭ್ಯರ್ಥಿಗಳು, ತರಬೇತಿದಾರರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದೆ. ಬ್ಯಾಕಿಂಗ್ ಸೇರಿದಂತೆ ವಿವಿಧ ಸರ್ಕಾರಿ ಉದ್ಯೋಗಗಳಿಗೆ ತರಬೇತಿ ನೀಡಲಾಗುವುದೆಂದು ಹೇಳಿದ್ದ ಸಂಸ್ಥೆ ಈಗ ಬೀಗ ಜಡಿದಿದೆ.

ವಂಚನೆಗೊಳಗಾದ ವಿದ್ಯಾರ್ಥಿಗಳು
ಮೂರ್ನಾಲ್ಕು ವರ್ಷಗಳಿಂದ ಸಂಸ್ಥೆ ಮುಚ್ಚಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದ ಅಭ್ಯರ್ಥಿಗಳನ್ನೇ ಗುರಿಯಾಗಿಸಿಕೊಂಡು ಇತ್ತೀಚೆಗೆ ಸಂಸ್ಥೆ ತನ್ನ ಸೇವೆ ಆರಂಭಿಸಿತು. ಕೇವಲ ₹ 12 ಸಾವಿರ ಪಾವತಿಸಿದರೆ ಉದ್ಯೋಗ ದೊರೆಯುವವರೆಗೂ ಉಚಿತ ತರಬೇತಿ ನೀಡುವುದಾಗಿ ಹೇಳಿತ್ತು. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ₹ 24 ಲಕ್ಷ ವಂಚಿಸಿ ಪರಾರಿಯಾಗಿದ್ದಾರೆ.ಬಹುತೇಕ ಅಭ್ಯರ್ಥಿಗಳು ಹಳ್ಳಿಯವರೇ ಆಗಿದ್ದಾರೆ. ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಹಂಬಲದಿಂದ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. ಆದರೀಗ ಈ ಸಂಸ್ಥೆ ಕೈಕೊಟ್ಟಿರುವ ಪರಿಣಾಮ ವಿದ್ಯಾರ್ಥಿಗಳಿಗೆ ದಿಕ್ಕುತೋಚದಂತಾಗಿದೆ. ನಮಗೆ ನ್ಯಾಯದೊರಕಿಸಿ ಕೊಡಿ ಎಂದು ವಿದ್ಯಾರ್ಥಿಗಳು, ತರಬೇತಿದಾರರು ಒತ್ತಾಯಿಸುತ್ತಿದ್ದಾರೆ.

Intro:ಬಹುಕೋಟಿ ಹಗರಣಗಳಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿರುವ ವಿಷಯಗಳು ಇನ್ನೂ ಕಣ್ಣ ಮುಂದೆ ಇದೆ.ಆದರೆ ಉಚಿತವಾಗಿ ಬ್ಯಾಂಕಿಂಗ್ ಕೋಚಿಂಗ್ ನೀಡಲಾಗುವುದೆಂದು ವಂಚಿಸಿ ಸರಿಸುಮಾರು 24 ಲಕ್ಷ ರೂಪಾಯಿಗಳ ಹಣವನ್ನು ಲಪಟಾಯಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Body:ಹೌದು ಜಿಲ್ಲೆಯ ಚಿಂತಾಮಣಿ ನಗರದ ಚೇಳೂರ ಸರ್ಕಲ್ ಬಳಿಯಿರುವ ಟರ್ನಿಂಗ್ ಪಾಯಿಂಟ್ ಸಂಸ್ಥೆ ಸುಮಾರು 200 ವಿದ್ಯಾರ್ಥಿಗಳಿಗೂ ಅಧಿಕ ತರಬೇತಿದಾರರಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿ ಪರಾರಿಯಾಗಿದ್ದಾರೆ. ಬ್ಯಾಕಿಂಗ್,ಎಸ್ಎಸ್ಸಿ ರೈಲ್ವೆ ಸೇರಿದಂತೆ ವಿವಿಧ ಸರ್ಕಾರಿ ಸರ್ಕಾರಿ ಉದ್ಯೋಗಗಳಿಗೆ ತರಬೇತಿ ನೀಡಲಾಗುವುದೆಂದು ಹೇಳಿ ಈಗ ಸಂಸ್ಥೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ.

ಮೂರುನಾಲ್ಕು ವರ್ಷಗಳಿಂದ ತರಬೇತಿಯನ್ನು ನೀಡದ ಸಂಸ್ಥೆ ಈಗ ಏಕಾಏಕಿ ಉಡಾಫೆ ಮಾತುಗಳ್ಳನ್ನು ಹೇಳಿ ಸಂಸ್ಥೆಯನ್ನು ಬಂದ್ ಮಾಡಿದ್ದಾರೆ. ಕೆವಲ 12 ಸಾವಿರ ಹಣ ಪಾವತಿ ಮಾಡಿದರೆ ಸಾಕು ಉದ್ಯೋಗ ಸಿಗುವವರೆಗೂ ಉಚಿತ ತರಬೇತಿಯನ್ನು ನೀಡುವುದಾಗಿ ಹೇಳಿ ಈ‌ಗ ಸರಿಸುಮಾರು 24 ಲಕ್ಷ ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ.

ಬಹುತೇಕ ವಿದದ್ಯಾರ್ಥಿಗಳು ಸೇರಿದಂತೆ ನಿರುದ್ಯೋಗ ಯುವಜನತೆ ನಗರದ ಹಳ್ಳಿಗಳಿಂದ ಸೇರ್ಪಡೆಗೊಂಡಿದ್ದು ಸರ್ಕಾರಿ ಉದ್ಯೋಗಕ್ಕಾಗಿ ಹಣವನ್ನು ಖರ್ಚು ಮಾಡಿ ಸಂಸ್ಥೆಗೆ ಸೇರ್ಪಡೆಗೊಂಡಿದ್ದಾರೆ.ಆದರೆ ಈಗ ಅಮಾಯಕ ವಿದ್ಯಾರ್ಥಿಗಳ ಪಾಲಿಗೆ ಈ ಸಂಸ್ಥೆ ಕೈಕೊಟ್ಟಿದ್ದು ವಿದ್ಯಾರ್ಥಿಗಳಿಗೆ ದಿಕ್ಕುತೋಚದಂತಾಗಿದೆ.ಸದ್ಯ ನಮಗೆ ನ್ಯಾಯದೊರಕಿಸಿ ಕೊಡಿ ಎಂದು ವಿದ್ಯಾರ್ಥಿಗಳು ,ತರಬೇತಿದಾರರಯ ಪೊಲೀಸ್ ಹಾಗೂ ಮಾಧ್ಯಮಗಳ ಮೊರೆ ಹೋಗಿದ್ದಾರೆ.

ಇನ್ನೂ ಇದರ ಬಗ್ಗೆ ವಿದ್ಯಾರ್ಥಿಗಳ ಜೊತೆ ಚಿಟ್ ಚಾಟ್..

ದತ್ತಾತ್ರೇಯ ಈಟಿವಿ ಭಾರತ ಚಿಕ್ಕಬಳ್ಳಾಪುರ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.