ETV Bharat / state

50 ಸಾವಿರ ಲಂಚಕ್ಕೆ ಬೇಡಿಕೆ:ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸಿಬಿ ಬಲೆಗೆ

ಚಿಕ್ಕಬಳ್ಳಾಪುರ ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಏನೂ ತಿಳಿಯದ ಅಮಾಯಕ ಮಂದಿ ಭ್ರಷ್ಟ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಾರೆ. ಇ- ಖಾತೆ ಮಾಡಿಕೊಡಲು ಪ.ಪಂ. ಮುಖ್ಯಾಧಿಕಾರಿ ನಾಗರಾಜು ಸುಮಾರು 50 ಸಾವಿರ ರೂಪಾಯಿಗಳಿಗೆ ಬೇಡಿಕೆಯಿಟ್ಟದ್ದರು. ವಿಷಯ ತಿಳಿದ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಮುಖ್ಯಾಧಿಕಾರಿ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಕೈಗೊಂಡಿದ್ದಾರೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
author img

By

Published : May 24, 2019, 10:16 PM IST

ಚಿಕ್ಕಬಳ್ಳಾಪುರ: ಇ-ಖಾತೆ ಮಾಡಿಕೊಡಲು 50 ಸಾವಿರ ಹಣಕ್ಕೆ ಬೇಡಿಕೆಯಿಟ್ಟ ಸ್ಥಳೀಯ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ 5ನೇ ವಾರ್ಡ್‌ ನಿವಾಸಿ ಬಾಲಾಜಿ ಎಂಬ ವ್ಯಕ್ತಿಯು ತಮಗೆ ಸೇರಿದ 8 ನಿವೇಶನಗಳಿಗೆ ಸಂಬಂಧಿಸಿದ ಇ- ಖಾತೆಗಳನ್ನು ಮಾಡಿಕೊಡಲು ಅರ್ಜಿ ಹಾಕಿದ್ದರು. ಆದರೆ ಇ- ಖಾತೆ ಮಾಡಿಕೊಡಲು ಪ.ಪಂ.ಮುಖ್ಯಾಧಿಕಾರಿ ನಾಗರಾಜು ಸುಮಾರು 50 ಸಾವಿರ ರೂಪಾಯಿಗಳಿಗೆ ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ಬಾಲಾಜಿ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಮುಖ್ಯಾಧಿಕಾರಿ ನಾಗರಾಜ್‍ಗೆ 25 ಸಾವಿರ ಹಣ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ಡಿವೈಎಸ್‍ಪಿ ವೆಂಕಟೇಶ್‍ನಾಯ್ಡು, ಸಬ್‍ಇನ್ಸ್​ಪೆಕ್ಟರ್​ಗಳಾದ ಶಿವಮಲ್ಲವಯ್ಯ, ಲಕ್ಷ್ಮೀದೇವಿ ಈ ಕಾರ್ಯಾಚರಣೆ ನಡೆಸಿದ್ದು ಭ್ರಷ್ಟ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯವರ್ತಿಗಳ ಹಾವಳಿ:

ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಏನು ತಿಳಿಯದ ಅಮಾಯಕರು ಭ್ರಷ್ಟ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಾರೆ. ಸರ್ಕಾರಿ ಕೆಲಸ ಮಾಡಿಕೊಡಲು ಹಣ ಪೀಕುತ್ತಿದ್ದಾರೆ. ಆದರೆ ಈ ಬಗ್ಗೆ ದೂರು ನೀಡದೇ ಇರುವುದರಿಂದ ಮಧ್ಯವರ್ತಿಗಳ ಆಟ ಮುಂದುವರೆಯುತ್ತಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

Intro:ಇ-ಖಾತೆ ಮಾಡಿಕೊಡಲು 50 ಸಾವಿರಕ್ಕೆ ಬೇಡಿಕೆಯಿಟ್ಟ ಸ್ಥಳೀಯ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.Body:ಪಟ್ಟಣದ 5ನೇ ವಾರ್ಡಿನ ನಿವಾಸಿ ಬಾಲಾಜಿ ಎಂಬ ವ್ಯಕ್ತಿಯು ತಮಗೆ ಸೇರಿದ 8 ಸೈಟ್‍ಗಳಿಗೆ ಸಂಬಂಧಿಸಿದ ಇ ಖಾತೆಗಳನ್ನು ಮಾಡಿಕೊಡಲು ಅರ್ಜಿ ಹಾಕಿದ್ದರು. ಆದರೆ ಇ ಖಾತೆ ಮಾಡಿಕೊಡಲು ಪ.ಪಂ. ಮುಖ್ಯಾಧಿಕಾರಿ ನಾಗರಾಜು ಸುಮಾರು 50 ಸಾವಿರ ರೂಪಾಯಿಗಳಿಗೆ ಬೇಡಿಕೆಯಿಟ್ಟದ್ದ. ನಂತರ ಬಾಲಾಜಿ ಎಸಿಬಿ ಕಛೇರಿಗೆ ದೂರು ನೀಡಿದ್ದಾನೆ. ಅವರ ಮಾರ್ಗದರ್ಶನದಂತೆ ಮುಖ್ಯಾಧಿಕಾರಿ ನಾಗರಾಜ್‍ಗೆ 25 ಸಾವಿರ ಹಣ ನೀಡುವಾಗ ದೀಢೀರನೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಮುಖ್ಯಾಧಿಕಾರಿ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
         
ಇನ್ನೂ ಎ.ಸಿ.ಬಿ.ಯ ಡಿವೈಎಸ್‍ಪಿ ವೆಂಕಟೇಶ್‍ನಾಯ್ಡು, ಸಬ್‍ಇನ್ಸ್‍ಪೆಕ್ಟರ್‍ಗಳಾದ ಶಿವಮಲ್ಲವಯ್ಯ, ಲಕ್ಷ್ಮೀದೇವಿ ಈ ದಾಳಿಯನ್ನು ನಡೆಸಿ ಭ್ರಷ್ಟಾಧಿಕಾರಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಮಧ್ಯವರ್ತಿಗಳ ಹಾವಳಿ:
ಇನ್ನೂ ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಏನು ತಿಳಿಯದ ಅಮಾಯಕರು ಅವರ ಬಲೆಗೆ ಬೀಳುತ್ತಿದ್ದಾರೆ. ನಂತರ ಅವರಿಂದ ಕೆಲಸ ಮಾಡಿಕೊಡಲು ಹಣ ಪೀಕುತ್ತಿದ್ದಾರೆ. ಆದರೆ ಈ ಬಗ್ಗೆ ಯಾರು ದೂರು ನೀಡದೇ ಇರುವುದರಿಂದ ಮಧ್ಯವರ್ತಿಗಳ ಆಟ ಮುಂದುವರೆಯುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿಯೂ ಕೇಳಿಬರುತ್ತಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.