ETV Bharat / state

ಭಾರಿ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್​: ಅವೈಜ್ಞಾನಿಕ ಕಾಮಗಾರಿ ಆರೋಪ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ರೈಲ್ವೆ ಅಂಡರ್​ಪಾಸೊಂದು ಸಂಪೂರ್ಣ ಜಲಾವೃತವಾಗಿದ್ದು,  ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಈ ಅವಾಂತರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಭಾರಿ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್​: ಅವೈಜ್ಞಾನಿಕ ಕಾಮಗಾರಿ ಆರೋಪ
author img

By

Published : Oct 12, 2019, 4:47 AM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ಮತ್ತು ಚಿಕ್ಕ ಕುರುಗೋಡು ಮಧ್ಯೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್​ಪಾಸೊಂದು ಭಾರಿ ಮಳೆಗೆ ಜಲಾವೃತವಾಗಿದೆ. ಇದರಿಂದ ಈ ಗ್ರಾಮಗಳ ಮಧ್ಯೆ ಸಂಚರಿಸಲು ರಸ್ತೆ ಇಲ್ಲದಂತಾಗಿದೆ.

ಪ್ರತಿನಿತ್ಯ ಚಿಕ್ಕ ಕುರುಗೋಡು ಗ್ರಾಮದಿಂದ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಸಂಚರಿಸಬೇಕು. ಆದರೆ ಅಂಡರ್ ಪಾಸ್ ತುಂಬಿದ್ದರಿಂದ ಇಲ್ಲಿ ಸಂಚರಿಸಲಾಗದೇ ಸಂಕಷ್ಟ ಎದುರಾಗಿದೆ. ಇನ್ನು ನಿನ್ನೆ ಈ ಅಂಡರ್​ಪಾಸ್​ ಸ್ಥಗಿತಗೊಂಡಿದ್ದರಿಂದ ಹಳ್ಳಿ ದಾಟುವಾಗ ಸೀಮೆ ಹಸುವೊಂದು ರೈಲಿಗೆ ಸಿಲುಕಿ ಸಾವನ್ನಪ್ಪಿದೆ.

ಕಳೆದ ಎರಡು ವರ್ಷಗಳಿಂದಲೂ ಈ ಅಂಡರ್ ಪಾಸ್ ನಿರ್ಮಾಣಕ್ಕೆ ವಿರೋಧವಿದ್ದು, ಇದನ್ನು ವಿರೋಧಿಸಿ ಹಲವು ಪ್ರತಿಭಟನೆ ನಡೆಸಿದರೂ, ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Intro:ಅವೈಜ್ಯಾನಿಕ ರೈಲ್ವೆ ಆಂಡರ್ ಪಾಸ್ ನಿರ್ಮಾಣBody:ಗೌರಿಬಿದನೂರು ಮತ್ತು ಚಿಕ್ಕಕುರುಗೋಡು ಸಂಪರ್ಕ ಕಲಾಯಿಸುವ ರಸ್ತೆ Conclusion:ಗೌರಿಬಿದನೂರು: ಕಳೆದ ವಾರದಿಂದ ಬಿದ್ದ ಭಾರಿ ಮಳೆಗೆ ಆಂಡರ್ಪಾಸ್ ತುಂಬಿದೆ. ಗೌರಿಬಿದನೂರು ಮತ್ತು ಚಿಕ್ಕಕುರುಗೋಡು ಗ್ರಾಮದಿಂದ ಸಂಪರ್ಕ ರಸ್ತೆ ಇದಾಗಿದ್ದು ಆಂಡರ್ ಪಾಸ್ ತುಂಬಾ ನೀರು ತುಂಬಿರುವ ಕಾರಣ ಆ ಗ್ರಾಮದಿಂದ ಹೋಗಲು ರಸ್ತೆ ಇಲ್ಲದಾಗಿದೆ.

ಪ್ರತಿನಿತ್ಯ ಆ ಗ್ರಾಮದಿಂದ ಶಾಲಾ ಕಾಲೇಜು ಕೆಲಸಕ್ಕೆ ಹೋಗುಲು ಈ ರಸ್ತೆಯಲ್ಲಿ ಸಂಚರಿಸಬೇಕು ಆದ್ರೆ ಗ್ರಾಮದಿಂದ ಬರುವ ಒಂದೇ ರಸ್ತೆ ಇರುವ ಕಾರಣ ತುಂಬಾ ತೊಂದರೆ ಉಂಟಾಗುತ್ತಿದೆ

ನೆನ್ನೆ ಸಂಜೆ ಆಂಡರ್ ಪಾಸ್ ತುಂಬಿದ್ದರಿಂದ ಸೀಮೆ ಹಸು ಹಳ್ಳಿದಾಟುವಾಗ ರೈಲಿಗೆ ಸಿಲುಕಿ ಸಾವು ಅಪ್ಪಿದೆ.ಗ್ರಾಮಸ್ಥರು ರೊಚ್ಚಿಗೆದ್ದು ಅವೈಜ್ಞಾನಿಕ ಕಾಮಗಾರಿಯಿಂದ ನೀರು ನಿಂತ ಪರಿಣಾಮ ಈ ಅವಘಡಕ್ಕೆ ಕಾರಣ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಈ ಆಂಡರ್ ಪಾಸ್ ನಿರ್ಮಾಣಕ್ಕೆ ವಿರೋಧವಿದ್ದು ಇದಕ್ಕಾಗಿ ಹಲವಾರು ಬಾರಿ ಪ್ರತಿಭಟನೆ ನಡೆಸಿದರು ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಾದ ಗ್ರಾಮಸ್ಥರು ಎನ್ನಲಾಗಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.